ETV Bharat / sports

ಸಿರಾಜ್​ಗೆ ಬೌಲಿಂಗ್​​ ನೀಡುವ ನಿರ್ಧಾರ ಬಹಳ ತಡವಾಗಿ ತೆಗೆದುಕೊಳ್ಳಲಾಯಿತು: ಕೊಹ್ಲಿ - ವಿರಾಟ್ ಕೊಹ್ಲಿ

ನಾಲ್ಕು ಓವರ್​ ಬೌಲಿಂಗ್ ನಡೆಸಿದ ಸಿರಾಜ್ ಕೇವಲ 8 ರನ್​ ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್ ಕಬಳಿಸುವ ಮೂಲಕ ಆರ್​​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು.

Mohammed Siraj
ಮೊಹಮ್ಮದ್ ಸಿರಾಜ್​
author img

By

Published : Oct 22, 2020, 10:40 AM IST

ಅಬುಧಾಬಿ: ಐಪಿಎಲ್‌ ಇತಿಹಾಸದಲ್ಲಿ ಸತತ 2 ಮೇಡಿನ್‌ ಓವರ್ ಎಸೆದ ಹಾಗೂ ರನ್‌ ನೀಡುವ ಮುನ್ನ ಅತಿ ಹೆಚ್ಚು ವಿಕೆಟ್‌ ಪಡೆದ ದಾಖಲೆ ಬರೆದ ಮೊಹಮ್ಮದ್ ಸಿರಾಜ್​ಗೆ ಆರಂಭದಲ್ಲಿ ದಾಳಿಗಿಳಿಸುವ ಬಗ್ಗೆ ಯಾವುದೇ ಯೋಜನೆ ಇರಲಿಲ್ಲ ಎಂದು ಆರ್​ಸಿಬಿ ತಂಡದ ನಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಬುಧವಾರ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮಾರಕ ದಾಳಿ ನಡೆಸಿದ ಸಿರಾಜ್, ಕೆಕೆಆರ್​ ತಂಡದ ಟಾಪ್​ ಆರ್ಡರ್ ಬ್ಯಾಟ್ಸ್​ಮನ್​ಗಳನ್ನು ಪೆವಿಲಿಯನ್​ಗೆ ಸೇರಿಸಿದ್ರು. ಸಿರಾಜ್ ತಾವು ಎಸೆದ ಮೊದಲ ಎರಡು ಓವರ್​ಗಳಲ್ಲಿ ಒಂದು ರನ್ ಕೂಡ ಬಿಟ್ಟುಕೊಡದೆ 3 ವಿಕೆಟ್ ಕಬಳಿಸಿ ನೂತನ ದಾಖಲೆ ಬರೆದರು.

Mohammed Siraj
ಮೊಹಮ್ಮದ್ ಸಿರಾಜ್​

ಟಾಸ್​ ಸೋತು ಬೌಲಿಂಗ್​ಗೆ ಮುಂದಾದ ಆರ್‌ಸಿಬಿ ತಂಡ ಆರಂಭದಲ್ಲಿ ಕ್ರಿಸ್‌ ಮೋರಿಸ್‌ ಜೊತೆಗೆ ವಾಷಿಂಗ್ಟನ್ ಸುಂದರ್​ರನ್ನು ದಾಳಿಗೆ ಇಳಿಸಲು ಯೋಜಿಸಿತ್ತು ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದರು.

ಪಂದ್ಯ ಮುಗಿದ ಬಳಿಕ ಮಾತನಾಡಿದ ವಿರಾಟ್, "ನಿಜ ಹೇಳಬೇಕಂದ್ರೆ ಸಿರಾಜ್‌ಗೆ ಬೌಲಿಂಗ್​ ನೀಡುವ ನಿರ್ಧಾರವನ್ನು ಬಹಳ ತಡವಾಗಿ ತೆಗೆದುಕೊಂಡೆ. ಮೋರಿಸ್‌ ಮತ್ತು ವಾಷಿಂಗ್ಟನ್‌ ಸುಂದರ್ ಅವರನ್ನು ದಾಳಿಗಿಳಿಸಲು ಚಿಂತನೆ ನಡೆಸಲಾಗಿತ್ತು. ಆದರೆ ಪಿಚ್‌ ಬಹಳ ಒಣಗಿತ್ತು. ಪರಿಸ್ಥಿತಿಗಳು ವೇಗಿಗಳಿಗೆ ನೆರವಾಗುವಂತಿದ್ದವು. ಹೀಗಾಗಿ ಸಿರಾಜ್​ರನ್ನು ದಾಳಿಗಿಳಿಸಲು ನಿರ್ಧರಿಸಲಾಯಿತು" ಎಂದಿದ್ದಾರೆ.

Virat Kohli
ವಿರಾಟ್ ಕೊಹ್ಲಿ

"ಕಳೆದ ವರ್ಷ ಸಿರಾಜ್ ಉತ್ತಮ ಪ್ರದರ್ಶನ ತೋರಿರಲಿಲ್ಲ. ಈ ವರ್ಷ ತುಂಬಾ ಕಷ್ಟ ಪಟ್ಟಿದ್ದಾರೆ. ನೆಟ್​ನಲ್ಲಿ ಸಾಕಷ್ಟು ಬೆವರು ಹರಿಸಿದ್ದಾರೆ. ಈ ಫಲಿತಾಂಶದಿಂದ ಅದು ತಿಳಿಯುತ್ತದೆ. ಅವರು ಹೀಗೆ ಮುಂದುವರೆಯಬೇಕೆಂದು ಬತಸುತ್ತೇವೆ" ಎಂದಿದ್ದಾರೆ.

ನಾಲ್ಕು ಓವರ್​ ಬೌಲಿಂಗ್ ನಡೆಸಿದ ಸಿರಾಜ್ ಕೇವಲ 8 ರನ್​ ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್ ಕಬಳಿಸುವ ಮೂಲಕ ಆರ್​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.