ಅಬುಧಾಬಿ : ಸೋಮವಾರ ನಡೆದ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನ ಸೋಲಿಸಿ ದೆಹಲಿ ಕ್ಯಾಪಿಟಲ್ಸ್ ಪ್ಲೇ ಆಫ್ ಸ್ಥಾನ ಭದ್ರಪಡಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅಜಿಂಕ್ಯಾ ರಹಾನೆ ಕ್ರೀಡಾಂಗಣದಲ್ಲಿ ಸಂಭ್ರಮಿಸಿದರು. ಆದರೆ, ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಅವಕಾಶ ಸಿಗದಿದ್ದಕ್ಕೆ ಬೇಸರ ಸಹ ವ್ಯಕ್ತಪಡಿಸಿದ್ದಾರೆ.
ರಹಾನೆ ಇದುವರೆಗೆ 146 ಪಂದ್ಯಗಳಲ್ಲಿ ಒಟ್ಟು 3,931 ರನ್ ಗಳಿಸಿದ್ದಾರೆ. ಇವರ ದಾಖಲೆಯ ಮೊತ್ತದ ಹೊರತಾಗಿಯೂ, ಐಪಿಎಲ್‌ನ 13ನೇ ಆವೃತ್ತಿಯಲ್ಲಿ ತಂಡದ ಪರ ಕೇವಲ ಆರು ಪಂದ್ಯಗಳನ್ನು ಮಾತ್ರವೇ ಆಡಿದ್ದಾರೆ.
153 ರನ್‌ಗಳ ಗುರಿ ಬೆನ್ನಟ್ಟಿದ ಶಿಖರ್ ಧವನ್ ಹಾಗೂ ರಹಾನೆ ದೆಹಲಿ ಪರ ಬ್ಯಾಟ್ ಆರಂಭಿಸಿ, ಕ್ರಮವಾಗಿ 54 ಮತ್ತು 60 ರನ್ ಗಳಿಸಿ ದೆಹಲಿ ಗೆಲುವಿಗೆ ಕಾರಣವಾದರು. ಈ ಕುರಿತು ಐಪಿಎಲ್ ಟಿ-20 ಡಾಟ್ ಕಾಮ್‌ಗೆ ಜತೆ ಮಾತನಾಡಿದ ರಹಾನೆ, ನಾನು ಆಡಲು ಅವಕಾಶ ಸಿಗದಿದ್ದಾಗ ನಿರಾಶೆಗೊಂಡಿದ್ದೆ.
ತಂಡದ ಗೆಲುವಿಗೆ ಸಹಕರಿಸಿದ ನಿಮ್ಮೊಂದಿಗೆ (ಧವನ್) ಬ್ಯಾಟಿಂಗ್ ಆನಂದಿಸಿದೆ. ನೀವು ಬ್ಯಾಟಿಂಗ್ ಮಾಡಿದ ರೀತಿಯಿಂದ ನಾನು ಸಾಕಷ್ಟು ಕಲಿತಿದ್ದೇನೆ ಎಂದು ತಂಡದ ಸಹ ಆಟಗಾರ ಧವನ್‌ಗೆ ಧನ್ಯವಾದ ತಿಳಿಸಿದರು.
ಈ ಗೆಲುವಿನೊಂದಿಗೆ ದೆಹಲಿ ಈಗ ಮೊದಲ ಅರ್ಹತಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ ಮತ್ತು ಆ ಪಂದ್ಯದ ವಿಜೇತರು ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ.