ETV Bharat / sports

ಮೊದಲ ಪಂದ್ಯದಲ್ಲಿ ಹೈದರಾಬಾದ್ vs ರಾಜಸ್ಥಾನ ಫೈಟ್.. ಗೆಲ್ಲಲೇಬೇಕಾದ ಒತ್ತಡದಲ್ಲಿ ಸ್ಮಿತ್ ಪಡೆ - ಸನ್​ರೈಸರ್ಸ್ ಹೈದರಾಬಾದ್

ಟೂರ್ನಿಯಲ್ಲಿ ಸಾಲು ಸಾಲು ಸೋಲುಗಳಿಂದ ನಿರಾಸೆ ಅನುಭವಿಸಿರುವ ರಾಜಸ್ಥಾನ ರಾಯಲ್ಸ್ ತಂಡ ಇಂದು ಡೇವಿಡ್ ವಾರ್ನರ್​ ನೇತೃತ್ವದ ಹೈದರಾಬಾದ್ ತಂಡವನ್ನು ಎದುರಿಸಲಿದೆ.

sunrisers hyderabad vs rajasthan royals
ಹೈದರಾಬಾದ್ vs ರಾಜಸ್ಥಾನ ಫೈಟ್
author img

By

Published : Oct 11, 2020, 10:25 AM IST

ದುಬೈ: ಇಂದು ಮಧ್ಯಾಹ್ನ ನಡೆಯುವ ಐಪಿಎಲ್​ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿ ಆಗಲಿವೆ.

ಸತತ ನಾಲ್ಕು ಪಂದ್ಯಗಳನ್ನು ಸೋತು ನಿರಾಸೆ ಅನುಭವಿಸಿರುವ ಸ್ಮಿತ್​ ಪಡೆ ಆಡಿರುವ 6 ಪಂದ್ಯಗಳಲ್ಲಿ 2 ರಲ್ಲಿ ಮಾತ್ರ ಜಯ ಸಾಧಿಸಿದೆ. ಇತ್ತ ಹೈದರಾಬಾದ್​ ತಂಡ 6 ಪಂದ್ಯಗಳ ಪೈಕಿ 3ರಲ್ಲಿ ಜಯ ಸಾಧಿಸಿದ್ರೆ, 3 ಪಂದ್ಯಗಳಲ್ಲಿ ಸೋಲುಕಂಡಿದೆ.

ರಾಯಲ್ಸ್​ಗೆ ಬ್ಯಾಟಿಂಗ್ ತಲೆನೋವು:

ಸ್ಫೋಟಕ ಆಟಗಾರಿರುವ ರಾಜಸ್ಥಾನ ತಂಡಕ್ಕೆ ನಾಯಕ ಸ್ಮಿತ್ ಸೇರಿದಂತೆ ಎಲ್ಲಾ ಬ್ಯಾಟ್ಸ್​ಮನ್​ಗಳು ವೈಫಲ್ಯ ಅನುಭವಿಸುತ್ತಿರುವುದು ಹಿನ್ನಡೆಗೆ ಕಾರಣವಾಗಿದೆ. ಆರಂಭದ ಪಂದ್ಯಗಳಲ್ಲಿ ಅಬ್ಬರಿಸಿದ್ದ ಸಂಜು ಸಾಮ್ಸನ್ ಸದ್ದು ಮಾಡುತ್ತಿಲ್ಲ. ಕಳೆದ ಪಂದ್ಯದಲ್ಲಿ ಬಟ್ಲರ್​ ನಿರಾಸೆ ಅನುಭವಿಸಿದ್ದರು. ಯುವ ಆಟಗಾರ ಯಶಸ್ವಿ ಜೈಸ್ವಾಲ್ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಬೌಲಿಂಗ್​ನಲ್ಲಿ ಜೋಫ್ರಾ ಆರ್ಚರ್​, ರಾಹುಲ್ ತೆವಾಟಿಯಾ, ಕಾರ್ತಿಕ್ ತ್ಯಾಗಿ ಉತ್ತಮ ಸ್ಪೆಲ್ ಮಾಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಆಂಡ್ರ್ಯೂ ಟೈ ಕೊಂಚ ದುಬಾರಿಯಾಗಿದ್ದರು.

sunrisers hyderabad vs rajasthan royals
ರಾಜಸ್ಥಾನ ರಾಯಲ್ಸ್ ತಂಡ

ಹೈದರಾಬಾದ್​ ತಂಡದ ಆರಂಭಿಕ ಆಟಗಾರರಾದ ಬೈರ್ ‌ಸ್ಟೋವ್ ಮತ್ತು ನಾಯಕ ವಾರ್ನರ್​ ಲಯಕ್ಕೆ ಮರಳಿರುವುದು ತಂಡದ ಶಕ್ತಿ ಹೆಚ್ಚಿಸಿದೆ. ಆದರೆ ಕೇನ್ ವಿಲಿಯಮ್ಸನ್​ ಹೊರತುಪಡಿಸಿ ಮಧ್ಯಮ ಕ್ರಮಾಕದ ಆಟಗಾರರು ಕಳೆದ 2 ಪಂದ್ಯಗಳಿಂದ ತಂಡಕ್ಕೆ ಆಸರೆಯಾಗದಿರುವುದು ಕೊಂಚ ಹಿನ್ನಡೆಯಾಗಿದೆ.

sunrisers hyderabad vs rajasthan royals
ಸನ್​ರೈಸರ್ಸ್​ ಹೈದರಾಬಾದ್ ತಂಡ

ಮನೀಷ್ ಪಾಂಡೆ, ಅಭಿಷೇಕ್ ವರ್ಮಾ, ಪ್ರಿಯಂ ಗರ್ಗ್ ಯಾವಾಗ ಬೇಕಿದ್ದರೂ ಸಿಡಿದೇಳುವ ಸಾಮರ್ಥ್ಯ ಹೊಂದಿದ್ದಾರೆ. ಹೈದರಾಬಾದ್​ ಬೌಲರ್​ಗಳು ಕಳೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ರು, ಕೇವಲ 138 ರನ್​ಗಳಿಗೆ ಪಂಜಾಬ್ ಆಟಗಾರರನ್ನು ಕಟ್ಟಿಹಾಕಿದ್ದರು. ನಟರಾಜನ್ ಮತ್ತು ರಶೀದ್ ಖಾನ್, ಖಲೀಲ್ ಅಹ್ಮದ್ ಉತ್ತಮ ಸ್ಪೆಲ್ ಮಾಡಿದ್ರು.

sunrisers hyderabad vs rajasthan royals
ಹೈದರಾಬಾದ್ vs ರಾಜಸ್ಥಾನ ಫೈಟ್

ಉಭಯ ತಂಡಗಳು ಇಲ್ಲಿಯವರೆಗೆ 11 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 6 ಪಂದ್ಯಗಳಲ್ಲಿ ಹೈದರಾಬಾದ್ ತಂಡ ಗೆಲುವು ಕಂಡಿದ್ರೆ, 5 ಪಂದ್ಯಗಳಲ್ಲಿ ರಾಜಸ್ಥಾನ ತಂಡ ಜಯ ಸಾಧಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.