ETV Bharat / sports

ವಿರಾಟ್ ಕೊಹ್ಲಿ ದಾಖಲೆ ಬ್ರೇಕ್​: ಐಪಿಎಎಲ್​ನಲ್ಲಿ ವಾರ್ನರ್ ನೂತನ ಮೈಲಿಗಲ್ಲು - ಡೇವಿಡ್ ವಾರ್ನರ್ ಹೊಸ ದಾಖಲೆ

ಸನ್​ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ 5 ಸಾವಿರ ರನ್​ ಸಿಡಿಸಿದ ಮೊದಲ ವಿದೇಶಿ ಕ್ರಿಕೆಟಿಗ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

David Warner shatters Virat Kohli's record
ಡೇವಿಡ್ ವಾರ್ನರ್
author img

By

Published : Oct 18, 2020, 8:27 PM IST

ಅಬುಧಾಬಿ:ಇಂದು ನಡೆದ ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಮಿಂಚಿದ ಸನ್​ರೈಸರ್ಸ್​ ತಂಡದ ನಾಯಕ ಡೇವಿಡ್ ವಾರ್ನರ್ ಐಪಿಎಲ್ ಟೂರ್ನಿಯಲ್ಲಿ 5 ಸಾವಿರ ರನ್​ ಪೂರೈಸಿದ್ದಾರೆ.

ನೂತನ ಮೈಲಿಗಲ್ಲು ತಲುಪಲು ವಾರ್ನರ್‌ಗೆ ಕೇವಲ ಒಂಬತ್ತು ರನ್‌ಗಳ ಅಗತ್ಯವಿತ್ತು. 16 ಎಸೆತಗಳಲ್ಲಿ 9 ರನ್​ ಗಳಿಸಿದ ವಾರ್ನರ್ 5 ಸಾವಿರ ರನ್​ಗಳ ಗಡಿ ತಲುಪಿದ್ರು. ಈ ಮೂಲಕ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ 5 ಸಾವಿರ ರನ್​ ಸಿಡಿಸಿದ ಮೊದಲ ವಿದೇಶಿ ಕ್ರಿಕೆಟಿಗ ಎಂಬ ಕೀರ್ತಿಗೆ ವಾರ್ನರ್ ಪಾತ್ರರಾಗಿದ್ದಾರೆ.

ವಿರಾಟ್ ದಾಖಲೆ ಬ್ರೇಕ್:

ಆರ್​ಸಿಬಿ ತಂಡದ ನಾಯಕ ವಿರಾಟ್ 5 ಸಾವಿರ ರನ್​ ಗಳಿಸಲು 157 ಇನ್ನಿಂಗ್ಸ್ ತೆಗೆದುಕೊಂಡಿದ್ದಾರು. ಆದರೆ ವಾರ್ನರ್ ಕೇವಲ 135 ಇನ್ನಿಂಗ್ಸ್​ಗಳಲ್ಲಿ 5 ಸಾವಿರ ರನ್​ ಸಿಡಿಸಿ ವಿರಾಟ್ ದಾಖಲೆ ಬ್ರೇಕ್​ ಮಾಡಿದ್ದಾರೆ. ವಾರ್ನರ್ ಮತ್ತು ಕೊಹ್ಲಿ ಹೊರತುಪಡಿಸಿ ಸುರೇಶ್ ರೈನಾ ಮತ್ತು ರೋಹಿತ್ ಶರ್ಮಾ ಕ್ರಮವಾಗಿ 173 ಮತ್ತು 187 ಇನ್ನಿಂಗ್ಸ್​ಗಳಲ್ಲಿ 5 ಸಾವಿರ ರನ್​ ಪೂರೈಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.