ದುಬೈ: ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ವಿರುದ್ಧದ ಪಂದ್ಯದಲ್ಲಿ 20 ರನ್‌ಗಳ ಜಯ ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಾಯಕ ಎಂ.ಎಸ್. ಧೋನಿ ಆಲ್ ರೌಂಡರ್ ಸ್ಯಾಮ್ ಕರನ್ ಅವರನ್ನು ಪ್ರಶಂಸಿಸಿದ್ದಾರೆ.
ಆರಂಭಿಕ ಆಟಗಾರರಾಗಿ ಬಂದ ಕರನ್, ಫಾಫ್ ಡು ಪ್ಲೆಸಿಸ್ ಜೊತೆ ಬ್ಯಾಟ್ ಬೀಸಿ 21 ಎಸೆತಗಳಲ್ಲಿ 31 ರನ್ ಗಳಿಸಿದರು. ನಂತರ ಮೂರು ಓವರ್‌ಗಳಲ್ಲಿ 18 ರನ್ ನೀಡಿ, ಎಸ್‌ಆರ್‌ಹೆಚ್ ನಾಯಕ ಡೇವಿಡ್ ವಾರ್ನರ್ ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು."ಅವರೊಬ್ಬ ಪರಿಪೂರ್ಣ ಕ್ರಿಕೆಟಿಗ, ನಿಮಗೆ ಸೀಮಿಂಗ್ ಆಲ್‌ರೌಂಡರ್ ಬೇಕು. ಸ್ಪಿನ್ನರ್‌ಗಳನ್ನು ಚೆನ್ನಾಗಿ ಆಡುತ್ತಾರೆ" ಎಂದು ಪಂದ್ಯದ ನಂತರ ಧೋನಿ ಹೇಳಿದರು.