ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 97 ರನ್‌ಗಳ ಜಯ ಸಾಧಿಸಿದ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಲೆಗ್ ಸ್ಪಿನ್ನರ್ ರವಿ ಬಿಷ್ನೋಯ್, ಪಂಜಾಬ್ ತಂಡದ ಮುಖ್ಯ ತರಬೇತುದಾರ ಅನಿಲ್ ಕುಂಬ್ಳೆ ಅವರ ಬೆಂಬಲವನ್ನು ನೆನೆದಿದ್ದಾರೆ.
ಭಾರತ ಅಂಡರ್-19 ವಿಶ್ವಕಪ್ ಆಟಗಾರ ನಿನ್ನೆ ನಡೆದ ಪಂದ್ಯದಲ್ಲಿ ನಾಲ್ಕು ಓವರ್‌ಳಿಗೆ 32 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದುಕೊಂಡಿದ್ದಾರೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ರವಿ ಬಿಷ್ನೋಯ, ಶಾಂತ ಮನಸ್ಸಿನಿಂದ ಕೌಶಲ್ಯ ಮತ್ತು ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ನನಗೆ ಅನಿಲ್ ಸರ್ ಕಲಿಸಿದರು ಎಂದಿದ್ದಾರೆ.
ಪಂದ್ಯಾವಳಿಗೆ ಮುಂಚಿತವಾಗಿ ನಾವು ಉತ್ತಮವಾಗಿ ತಯಾರಿ ಮಾಡಿದ್ದೇವೆ. ನಾವು ಮಾನಸಿಕ ಸಾಮರ್ಥ್ಯದತ್ತ ಗಮನ ಹರಿಸುತ್ತಿದ್ದೆವು. ಸಾಧ್ಯವಾದಷ್ಟು ಬೇಗ ಅವರನ್ನು ಕಟ್ಟಿಹಾಕುವ ಗುರಿಯನ್ನು ಹೊಂದಿದ್ದೆವು. ನಾವು 180 ರನ್ಗಳನ್ನು ಡಿಫೆಂಡ್ ಮಾಡಬೇಕು ಎಂಬ ಮನಸ್ಥಿತಿಯಿಂದಲೇ ಮೈದಾನಕ್ಕೆ ಇಳಿದಿದ್ದೆವು ಎಂದು ಬಿಷ್ನೋಯ್ ತಿಳಿಸಿದ್ದಾರೆ.