ETV Bharat / sports

ರಾಜಸ್ಥಾನ ರಾಯಲ್ಸ್​ಗೆ ಸಿಹಿ ಸುದ್ದಿ.. ಇಂದು ಯುಎಇಗೆ ಆಗಮಿಸುತ್ತಿದ್ದಾರೆ ಬೆನ್ ಸ್ಟೋಕ್ಸ್ - ಯುಎಇಗೆ ಆಗಮಿಸುತ್ತಿದ್ದಾರೆ ಬೆನ್ ಸ್ಟೋಕ್ಸ್

ಐಪಿಎಲ್ ಟೂರ್ನಿಯ ಕೆಲ ಆರಂಭಿಕ ಪಂದ್ಯಗಳಿಂದ ಹೊರಗುಳಿದಿದ್ದರು ಇಂಗ್ಲೆಂಡ್ ತಂಡದ ಆಲ್​ರೌಂಡರ್ ಬೆನ್​ ಸ್ಟೋಕ್ಸ್​​ ಇಂದು ಯುಎಇಗೆ ಆಗಮಿಸುತ್ತಿದ್ದಾರೆ.

Rajasthan star Ben Stokes to arrive in UAE tonight
ಯುಎಇಗೆ ಆಗಮಿಸುತ್ತಿದ್ದಾರೆ ಬೆನ್ ಸ್ಟೋಕ್ಸ್
author img

By

Published : Oct 3, 2020, 1:29 PM IST

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ 13 ನೇ ಆವೃತ್ತಿಗೆ ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಎಂಟ್ರಿ ಕೊಡುತ್ತಿದ್ದಾರೆ. ರಾಜಸ್ಥಾನ ರಾಯಲ್ಸ್​ ತಂಡ ಕೂಡಿಕೊಳ್ಳಲು ಇಂದು ರಾತ್ರಿ ಯುಎಇಗೆ ಆಗಮಿಸಲಿದ್ದಾರೆ.

ಆನಾರೋಗ್ಯಕ್ಕೆ ತುತ್ತಾಗಿರುವ ತಂದೆಯ ಜೊತೆ ಕೆಲವು ದಿನಗಳ ಕಾಲ ಇರಲು ಬಯಸಿದ್ದ ಸ್ಟೋಕ್ಸ್​, ಟೂರ್ನಿಯ ಕೆಲ ಆರಂಭಿಕ ಪಂದ್ಯಗಳಿಂದ ಹೊರಗುಳಿದಿದ್ದರು. ಇದೀಗ ಯುಎಇಗೆ ಆಗಮಿಸಲಿದ್ದಾರೆ ಎಂದು ಐಪಿಎಲ್​ ಮೂಲಗಳು ಮಾಹಿತಿ ನೀಡಿವೆ. ಅವರು ಇಂದು ರಾತ್ರಿ ಯುಎಇಗೆ ಬರುತ್ತಿದ್ದಾರೆ ತಂಡವನ್ನು ಸೇರುವ ಮೊದಲು, ತಕ್ಷಣವೇ ಕೋವಿಡ್-19 ಸಂಬಂಧಿತ ಕಾರ್ಯವಿಧಾನಗಳಿಗೆ ಒಳಗಾಗುತ್ತಾರೆ ಎಂದು ಮೂಲಗಳು ತಿಳಿಸಿವೆ.

Ben Stokes to arrive in UAE tonight
ಬೆನ್ ಸ್ಟೋಕ್ಸ್

ಕೊರೊನಾ ವೈರಸ್ ವಿರುದ್ಧದ ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರಂಟೈನ್​ಗೆ ಒಳಗಾಗುವುದರಿಂದ ಸ್ಟೋಕ್ಸ್ ಆರು ದಿನಗಳ ಕಾಲ ತಮ್ಮ ಕೋಣೆಯಲ್ಲೇ ಕಾಲ ಕಳೆಯಬೇಕಿದೆ. ಕ್ವಾರಂಟೈನ್ ಸಮಯದಲ್ಲಿ ಮೂರು ಬಾರಿ ಕೋವಿಡ್ ಟೆಸ್ಟ್ ನಡೆಸಲಾಗುತ್ತಿದೆ. ಮೂರು ಬಾರಿಯೂ ನೆಗೆಟಿವ್ ಬಂದ ನಂತರವಷ್ಟೆ ಅವರು ತಮ್ಮ ತಂಡದ ಆಟಗಾರರನ್ನು ಸೇರಿಕೊಳ್ಳುತ್ತಾರೆ.

ಈಗಾಗಲೆ ಉತ್ತಮ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ ತಂಡಕ್ಕೆ ಸ್ಟೋಕ್ಸ್ ಆಗಮನ ಮತ್ತಷ್ಟು ಬಲ ತರಲಿದೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸಬಲ್ಲ ಸ್ಟೋಕ್ಸ್​, ಬೌಲಿಂಗ್​ನಲ್ಲೂ ಕಮಾಲ್ ಮಾಡಬಲ್ಲರು. ರಾಜಸ್ಥಾನ ಇಲ್ಲಿಯವರೆಗೆ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದಿದ್ದರೂ, ಮಧ್ಯಮ ಕ್ರಮಾಂಕವು ಅವರ ಅನುಪಸ್ಥಿತಿಯಲ್ಲಿ ಸ್ವಲ್ಪ ದುರ್ಬಲವಾಗಿ ಕಾಣುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.