ಅಬುಧಾಬಿ: ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಗುರುವಾರ ನಡೆದ ಪಂದ್ಯದಲ್ಲಿ ಮುಂಬೈ ತಂಡ 48 ರನ್‌ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅವರ ತಂಡವು ಮಾಡಿದ ಪ್ರಮುಖ ತಪ್ಪುಗಳಿಂದ ಪಂದ್ಯ ಸೋಲಬೇಕಾಯ್ತು ಎನ್ನಲಾಗುತ್ತಿದೆ.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ನಾಲ್ಕು ವಿಕೆಟ್ ಕಳೆದುಕೊಂಡ ನಂತರ 191 ರನ್ ಗಳಿಸಿತು, ಇದಕ್ಕೆ ಉತ್ತರವಾಗಿ ಪಂಜಾಬ್ 143 ರನ್ ಗಳಿಸಿ 48 ರನ್ಗಳಿಂದ ಸೋಲುಕಂಡಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ
ಯುಎಇಯಲ್ಲಿ ಕಳೆದ ಕೆಲವು ಪಂದ್ಯಗಳಲ್ಲಿ, ಟಾಸ್ ಗೆದ್ದ ನಂತರ ಮೊದಲು ಬೌಲಿಂಗ್ ಮಾಡುವ ತಂಡಗಳು ಸೋತಿರುವುದು ಕಂಡುಬರುತ್ತದೆ. ಮೊದಲು ಬ್ಯಾಟಿಂಗ್ ಮಾಡಲು ಯಾವುದೇ ಒತ್ತಡವಿರುವುದಿಲ್ಲ, ಆಟಗಾರರು ಮುಕ್ತವಾಗಿ ಆಡುತ್ತಾರೆ. ಆಲ್ಲದೆ ಸ್ಲೋ ಪಿಚ್ಗಳಾಗಿರುವುದರಿಂದ ನಂತರ ಬ್ಯಾಟಿಂಗ್ ಮಾಡಿದ ತಂಡದ ರನ್ ಗಳಿಸಲು ಸಾಧ್ಯವಾಗುವುದಿಲ್ಲ.
ಕೃಷ್ಣಪ್ಪ ಗೌತಮ್ ಕೊನೆಯ ಓವರ್ ಬೌಲಿಂಗ್
ಪಂಜಾಬ್ ಪರ ಕೃಷ್ಣಪ್ಪ ಗೌತಮ್ ಅಂತಿಮ ಓವರ್ ಬೌಲಿಂಗ್ ನಡೆಸಿ ದುಬಾರಿಯಾದ್ರು. ಭರ್ಜರಿ ಬ್ಯಾಟಿಂಗ್ ನಡೆಸಿದ ಪೊಲಾರ್ಡ್ ಮತ್ತು ಪಾಂಡ್ಯ 20ನೇ ಓವರ್ನಲ್ಲಿ 25 ರನ್ ಗಳಿಸಿ ತಂಡದ ಮೊತ್ತವನ್ನು 191ಕ್ಕೆ ಕೊಂಡೊಯ್ದರು.
ಮಿಂಚದ ರಾಹುಲ್-ಮಯಾಂಕ್
ಮೊದಲ ಪಂದ್ಯದಿಂದಲೂ ಕೆ.ಎಲ್.ರಾಹುಲ್ ಮತ್ತು ಮಾಯಾಂಕ್ ಅಗರ್ವಾಲ್ ಇಬ್ಬರೂ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ ಮುಂಬೈ ವಿರುದ್ಧದ ಪಂದ್ಯದಲ್ಲಿ ಇಬ್ಬರೂ ಮಿಂಚಲಿಲ್ಲ. ಮಯಾಂಕ್ 25 ರನ್ ಗಳಿಸಿ ಔಟ್ ಆದ್ರೆ, ರಾಹುಲ್ 17 ರನ್ ಗಳಿಸಿ ಪೆವಿಲಿಯನ್ ಸೇರಿದ್ರು. ನಂತರ ಬಂದ ಯಾವುದೇ ಪಂಜಾಬ್ ಬ್ಯಾಟ್ಸ್‌ಮನ್ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.