ಶಾರ್ಜಾ: ದೆಹಲಿ ಕ್ಯಾಪಿಟಲ್ಸ್ ವಿರುದ್ಧ 18 ರನ್‌ಗಳ ಸೋಲಿನ ಹಿನ್ನೆಲೆಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ದಿನೇಶ್ ಕಾರ್ತಿಕ್, ಆಟದ ಮೇಲೆ ಪ್ರಭಾವ ಬೀರಲು ಸ್ಟಾರ್ ಆಟಗಾರ ಆ್ಯಂಡ್ರೆ ರಸೆಲ್‌ಗೆ ಹೆಚ್ಚಿನ ಸಮಯವನ್ನು ನೀಡಲು ಬಯಸುವುದಾಗಿ ಹೇಳಿದ್ದಾರೆ.
ಇಯಾನ್ ಮಾರ್ಗನ್‌ಗಿಂತ ಮೊದಲೇ ಕಣಕ್ಕಿಳಿದ ರಸೆಲ್ ಎಂಟು ಎಸೆತಗಳಲ್ಲಿ 13 ರನ್ ಗಳಿಸಿ ಔಟ್ ಆಗುವ ಮೂಲಕ ವೈಫಲ್ಯ ಅನುಭವಿಸಿದ್ರು.
ಪಂದ್ಯದ ಬಳಿಕ ಮಾತನಾಡಿರುವ ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್, ನಮ್ಮ ತಂಡದ ಆಟಗಾರರು ಬ್ಯಾಟಿಂಗ್ ಮಾಡಿದ ರೀತಿ ನನಗೆ ಹೆಮ್ಮೆ ತಂದಿದೆ. ನಾವು ಹೋರಾಟ ಮಾಡುತ್ತಲೇ ಇದ್ದೆವು. ಅದು ಈ ತಂಡದ ಸ್ವರೂಪ. ನಿಜ ಹೇಳಬೇಕೆಂದರೆ ಇನ್ನೂ ಒಂದೆರಡು ಸಿಕ್ಸರ್ ಗಳಿಸಿದ್ದರೆ, ನಾವು ಗುರಿ ಮುಟ್ಟಬಹುದಿತ್ತು ಎಂದಿದ್ದಾರೆ.
ಬಹುಶಃ 10 ರನ್ಗಳು ಹೆಚ್ಚಾದವು. ನಾವು ರಸೆಲ್‌ಗೆ ಆಟದ ಮೇಲೆ ಪ್ರಭಾವ ಬೀರಲು ಹೆಚ್ಚಿನ ಸಮಯವನ್ನು ನೀಡಲು ಬಯಸುತ್ತೇವೆ ಎಂದು ಕಾರ್ತಿಕ್ ತಿಳಿಸಿದ್ದಾರೆ. ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸುನೀಲ್ ನರೈನ್ ತಮ್ಮ ಬ್ಯಾಟಿಂಗ್ ಕೌಶಲ್ಯದಿಂದ ಪ್ರಭಾವಿತರಾಗಿಲ್ಲ. ಆದರೂ ನಾಯಕ ದಿನೇಶ್ ಕಾರ್ತಿಕ್ ಅವರ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿದ್ದಾರೆ.
ನಾವು ತರಬೇತುದಾರರೊಂದಿಗೆ ನರೈನ್ ಪಾತ್ರವನ್ನು ಚರ್ಚಿಸುತ್ತೇವೆ, ಆದರೆ ಅವರ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದು ಕಾರ್ತಿಕ್ ಹೇಳಿದ್ದಾರೆ.