ದುಬೈ: ಆರಂಭಿಕ ಆಘಾತದ ನಡುವೆಯೂ ಅನುಭವಿ ಶಿಖರ್ ಧವನ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 161 ರನ್ ಗಳಿಸಿದ್ದು, ರಾಜಸ್ಥಾನನಕ್ಕೆ 162 ರನ್ಗಳ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡಕ್ಕೆ ಆರ್ಚರ್ ದೊಡ್ಡ ಶಾಕ್ ನೀಡಿದ್ರು. ಇನ್ನಿಂಗ್ಸ್ನ ಮೊದಲ ಎಸೆತದಲ್ಲೇ ಪೃಥ್ವಿ ಶಾ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದ್ರು. ನಂತರ ಬಂದ ಅಜಿಂಕ್ಯಾ ರಹಾನೆ ಕೂಡ 2 ರನ್ಗಳಿಗೆ ಆರ್ಚರ್ ಬೌಲಿಂಗ್ನಲ್ಲಿ ಉತ್ತಪ್ಪಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿ ನಿರ್ಗಮಿಸಿದ್ರು.
10 ರನ್ಗಳಿಗೆ ಪ್ರಮುಖ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಡೆಲ್ಲಿ ತಂಡಕ್ಕೆ ಶಿಖರ್ ಧವನ್ ಮತ್ತು ನಾಯಕ ಶ್ರೇಯಸ್ ಐಯ್ಯರ್ ಆಸರೆಯಾದ್ರು. ಮೂರನೇ ವಿಕೆಟ್ಗೆ ಈ ಜೋಡಿ 85 ರನ್ ಪೇರಿಸಿತು. 33 ಎಸೆತಗಳಿಗೆ 6 ಬೌಡರಿ ಮತ್ತು 2 ಸಿಕ್ಸರ್ ಸಹಿತ 57 ರನ್ ಸಿಡಿಸಿದ್ದ ಧವನ್ ಶ್ರೇಯಸ್ ಗೋಪಾಲ್ ಎಸೆತದಲ್ಲಿ ತ್ಯಾಗಿಗೆ ಕ್ಯಾಚ್ ನೀಡಿ ಹೊರ ನಡೆದರು.
-
FIFTY!
— IndianPremierLeague (@IPL) October 14, 2020 " class="align-text-top noRightClick twitterSection" data="
Shikhar Dhawan brings up his 39th IPL half-century. How good has he been for the #DelhiCapitals today?#Dream11IPL pic.twitter.com/PQh90pKRhN
">FIFTY!
— IndianPremierLeague (@IPL) October 14, 2020
Shikhar Dhawan brings up his 39th IPL half-century. How good has he been for the #DelhiCapitals today?#Dream11IPL pic.twitter.com/PQh90pKRhNFIFTY!
— IndianPremierLeague (@IPL) October 14, 2020
Shikhar Dhawan brings up his 39th IPL half-century. How good has he been for the #DelhiCapitals today?#Dream11IPL pic.twitter.com/PQh90pKRhN
ನಂತರ ಜೊತೆಯಾದ ಐಯ್ಯರ್ ಹಾಗೂ ಸ್ಟೋಯ್ನಿಸ್ ತಂಡಕ್ಕೆ 37 ರನ್ಗಳ ಕಾಣಿಕೆ ನೀಡಿದ್ರು. 43 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 53 ರನ್ ಸಿಡಿಸಿ ಉತ್ತವಾಗಿ ಬ್ಯಾಟ್ ಬೀಸುತ್ತಿದ್ದ ನಾಯಕ ಶ್ರೇಯಸ್ ಐಯ್ಯರ್ ಕಾರ್ತಿಕ್ ತ್ಯಾಗಿಗೆ ವಿಕೆಟ್ ಒಪ್ಪಿಸಿದ್ರು. ಸ್ಟೋಯ್ನಿಸ್(18), ಕ್ಯಾರಿ(14) ರನ್ ಗಳಿಸಿ ತಂಡದ ಮೊತ್ತ 150ರ ಗಡಿ ದಾಟಿಸಿದ್ರು. ಅಂತಿಮವಾಗಿ ಡೆಲ್ಲಿ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 161 ರನ್ಗಳಿಸಿದೆ.
-
A well made half-century for @ShreyasIyer15 #Dream11IPL pic.twitter.com/LI9Q2XkdGO
— IndianPremierLeague (@IPL) October 14, 2020 " class="align-text-top noRightClick twitterSection" data="
">A well made half-century for @ShreyasIyer15 #Dream11IPL pic.twitter.com/LI9Q2XkdGO
— IndianPremierLeague (@IPL) October 14, 2020A well made half-century for @ShreyasIyer15 #Dream11IPL pic.twitter.com/LI9Q2XkdGO
— IndianPremierLeague (@IPL) October 14, 2020
ರಾಜಸ್ಥಾನ ತಂಡದ ಪರ ಜೋಫ್ರಾ ಆರ್ಚರ್ 3, ಜಯದೇವ್ ಉನಾದ್ಕಟ್ 2, ಶ್ರೇಯಸ್ ಗೋಪಾಲ್ ಮತ್ತು ಕಾರರ್ತಿಕ್ ತ್ಯಾಗಿ ತಲಾ ಒಂದು ವಿಕೆಟ್ ಪಡೆದು ಮಿಂಚಿದ್ರು.