ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿದ್ದು, ಸತತ ಎರಡನೇ ಸಲ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ನಾಯಕತ್ವ ಶೈಲಿ ಸರ್ವಾಧಿಕಾರ ಅಲ್ಲ ಎಂದು ನಾನು ನಂಬಿದ್ದೇನೆ ಎಂದಿರುವ ರೋಹಿತ್, ತಂಡದ ಗೆಲುವು ಹಾಗೂ ಅದ್ಭುತ ಯಶಸ್ವಿಗೆ ಅದೇ ಕಾರಣ ಎಂದು ತಿಳಿಸಿದ್ದಾರೆ. ನಾನು ಯಾವೊಬ್ಬ ಆಟಗಾರನ ಹಿಂದೆ ಕೋಲು ಹಿಡಿದುಕೊಂಡು ಓಡಲ್ಲ. ಅವರಿಗೆ ಆತ್ಮವಿಶ್ವಾಸ ತುಂಬುವ ಮೂಲಕ ಅದನ್ನು ಮಾಡುವ ಸಾಮರ್ಥ್ಯ ನಿಮ್ಮಲ್ಲಿದೆ ಎಂದು ತಿಳಿಸುತ್ತೇನೆ ಎಂದಿದ್ದಾರೆ.
ಪಂದ್ಯ ಮುಗಿದ ಬಳಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ರೋಹಿತ್, ಐಪಿಎಲ್ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ನಮ್ಮ ಕೆಲಸ ಪ್ರಾರಂಭಗೊಂಡಿತ್ತು. ಈ ಹಿಂದಿನ ಋತುಗಳಲ್ಲಿ ಮಾಡಿರುವ ಕೆಲವೊಂದು ಸಣ್ಣಪುಟ್ಟ ತಪ್ಪು ಸರಿಪಡಿಸಿಕೊಂಡು ಈ ಆವೃತ್ತಿಯಲ್ಲಿ ಆಡಿದ್ದೇವೆ ಎಂದು ತಿಳಿಸಿದ್ದಾರೆ.
-
Ladies and Gentlemen, presenting to you FIVE TIME IPL CHAMPIONS - #MumbaiIndians #Dream11IPL pic.twitter.com/Wz2ONkrh7E
— IndianPremierLeague (@IPL) November 10, 2020 " class="align-text-top noRightClick twitterSection" data="
">Ladies and Gentlemen, presenting to you FIVE TIME IPL CHAMPIONS - #MumbaiIndians #Dream11IPL pic.twitter.com/Wz2ONkrh7E
— IndianPremierLeague (@IPL) November 10, 2020Ladies and Gentlemen, presenting to you FIVE TIME IPL CHAMPIONS - #MumbaiIndians #Dream11IPL pic.twitter.com/Wz2ONkrh7E
— IndianPremierLeague (@IPL) November 10, 2020
ಉತ್ತಮ ಫಾರ್ಮ್ನಲ್ಲಿದ್ದ ಸೂರ್ಯಕುಮಾರ್ ಯಾದವ್ ರನೌಟ್ ಬಗ್ಗೆ ರೋಹಿತ್ ಶರ್ಮಾ ಇದೇ ವೇಳೆ ವಿಷಾದ ವ್ಯಕ್ತಪಡಿಸಿದರು. ದುರದೃಷ್ಟವಶಾತ್ ನಾವು ಕ್ರೀಡಾಂಗಣದಲ್ಲಿ ಅಭಿಮಾನಿ ಹೊಂದಲು ಸಾಧ್ಯವಾಗಲಿಲ್ಲ. ಇದರ ಜತೆಗೆ ವಾಂಖೆಡೆ ಮೈದಾನದಲ್ಲಿ ಆಡುವುದನ್ನ ತಪ್ಪಿಸಿಕೊಂಡಿದ್ದೇವೆ ಎಂದಿದ್ದಾರೆ. ಐಪಿಎಲ್ ಕಠಿಣ ಲೀಗ್ಗಳಲ್ಲಿ ಒಂದಾಗಿದ್ದು, ನಾನು ಅದರ ಭಾಗವಾಗಿದ್ದೇನೆ ಎಂಬುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದಿದ್ದಾರೆ.