ETV Bharat / sports

ಐಪಿಎಲ್​ 2020: ಮಾರ್ಗನ್ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ದಿನೇಶ್ ಕಾರ್ತಿಕ್ ಹೇಳಿದ್ದೇನು?

ಮಾರ್ಗನ್ ಸಾಮಾನ್ಯವಾಗಿ ನಾಲ್ಕನೇ ಅಥವಾ ಐದನೇ ಸ್ಥಾನದಲ್ಲಿ ಬ್ಯಾಟ್ ಮಾಡುತ್ತಾರೆ. ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದರು.

author img

By

Published : Oct 1, 2020, 11:23 AM IST

Karthik on Morgan's batting position
ಮಾರ್ಗನ್ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ದಿನೇಶ್ ಕಾರ್ತಿಕ್ ಹೇಳಿಕೆ

ದುಬೈ: ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಇಯಾನ್​ ಮಾರ್ಗನ್ ಅವರನ್ನು ಆರನೇ ಸ್ಥಾನದಲ್ಲಿ ಬ್ಯಾಟಿಂಗ್​ ಕಳುಹಿಸಿದ್ದು, ಕೆಕೆಆರ್​ಗೆ ವರದಾನವಾಗಿದೆ ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಹೇಳಿದ್ದಾರೆ.

ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಕೆಕೆಆರ್ ಪರ ಶುಬ್ಮನ್ ಗಿಲ್ 47 ರನ್ ಗಳಿಸಿ ಅಗ್ರ ಸ್ಕೋರ್ ಮಾಡಿದರು. ಇಯಾನ್ ಮಾರ್ಗಾನ್ ಮತ್ತು ಆ್ಯಂಡ್ರೆ ರಸೆಲ್ ಕ್ರಮವಾಗಿ 34 ಮತ್ತು 24 ರನ್ ಗಳಿಸಿ ತಂಡದ ಸ್ಕೋರ್​​ಅನ್ನು 174ಕ್ಕೆ ತಲುಪಿಸಿದರು.

ಮಾರ್ಗನ್ ಸಾಮಾನ್ಯವಾಗಿ ನಾಲ್ಕನೇ ಅಥವಾ ಐದನೇ ಸ್ಥಾನದಲ್ಲಿ ಬ್ಯಾಟ್ ಮಾಡುತ್ತಾರೆ. ಆದರೆ ಅವರನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರನೇ ಸ್ಥಾನದಲ್ಲಿ ಕಳುಹಿಸಲಾಯಿತು.

ದಿನೇಶ್ ಕಾರ್ತಿಕ್, ಕೆಕೆಆರ್​ ತಂಡದ ನಾಯಕ

ರಸೆಲ್ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್​ಗೆ ಇಳಿದ ಕಾರಣ ಪ್ರತಿಯೊಬ್ಬರೂ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕಾಯ್ತು. ಹೀಗಾಗಿ ಮಾರ್ಗನ್ 6ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಹೊರಟರು. ಇದು ಪರೋಕ್ಷವಾಗಿ ತಂಡಕ್ಕೆ ವರವಾಯಿತು. ಮಾರ್ಗನ್ ಶಾಂತವಾಗಿ ಬ್ಯಾಟಿಂಗ್ ನಡೆಸಿ ತಂಡದ ಮೊತ್ತ ಹೆಚ್ಚುವಲ್ಲಿ ಕಾರಣರಾದ್ರು ಎಂದು ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ನಾಯಕ ದಿನೇಶ್ ಕಾರ್ತಿಕ್ ಹೇಳಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್​ ತಂಡ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 174 ರನ್​ ಗಳಿಸಿತು. ಮರುತ್ತರವಾಗಿ ಬ್ಯಾಟ್ ಬೀಸಿದ ರಾಜಸ್ಥಾನ ತಂಡ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್​ ಗಳಿಸಿ 37 ರನ್​ಗಳಿಂದ ಸೋಲು ಕಂಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.