ಹೈದರಾಬಾದ್: ಮೊದಲ ಬಾರಿಗೆ ಫೈನಲ್ ಪ್ರವೇಶಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಪ್ರಶಸ್ತಿ ಗೆಲ್ಲುವ ಫೆವರೀಟ್ ತಂಡ ಎನಿಸಿಕೊಂಡಿದೆ. ಫೈನಲ್ನಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣೆಸಾಡಲಿದ್ದು, ಪ್ರಶಸ್ತಿಗಾಗಿ ಪ್ರಬಲ ಪೈಪೋಟಿ ನಡೆಸಲಿವೆ.
ಈ ನಡುವೆ ಕ್ವಾಲಿಫೈಯರ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ಡೆಲ್ಲಿ ತಂಡ ಬ್ಯಾಟಿಂಗ್ನಿಂದಲೇ ಮಿಂಚು ಹರಿಸಿತ್ತು. ಮಾರ್ಕಸ್ ಸ್ಟೋನಿಸ್ ಹಾಗೂ ಧವನ್ ಜೊತೆಯಾಟ ತಂಡದ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಈ ಕುರಿತು ಮಾರ್ಕಸ್ ಸ್ಟೋನಿಸ್ ಪ್ರತಿಕ್ರಿಯಿಸಿದ್ದು, ಪಿಚ್ನಲ್ಲಿ ಅಧಿಕ ಸ್ವಿಂಗ್ ಆಗುತ್ತಿದ್ದ ಕಾರಣ ಎಚ್ಚರಿಕೆಯಿಂದ ಬ್ಯಾಟ್ ಬೀಸಿದೆ ಎಂದಿದ್ದಾರೆ.
ಇನ್ನು ಮುಂಬೈ ತಂಡದಲ್ಲಿ ಮಾರಕ ದಾಳಿಯ ಬೌಲಿಂಗ್ ವಿಭಾಗವಿದ್ದು, ವೇಗ ಮತ್ತು ಸ್ವಿಂಗ್ ಬೌಲಿಂಗ್ ಅವರ ಅಸ್ತ್ರವಾಗಿದೆ. ವಿಶೇಷವಾಗಿ ಟ್ರೆಂಟ್ ಬೌಲ್ಟ್ ಪವರ್ ಪ್ಲೇನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಫೈನಲ್ ಪಂದ್ಯದಲ್ಲಿ ಒಂದು ವೇಳೆ, ಡೆಲ್ಲಿ ಬ್ಯಾಟಿಂಗ್ ಆಯ್ದುಕೊಂಡು ಸ್ಟೋನಿಸ್ ಆರಂಭಿಕರಾಗಿ ಮೈದಾನಕ್ಕಿಳಿದರೆ ಟ್ರೆಂಟ್ ಬೌಲ್ಟ್ ಕೆಲವೇ ಓವರ್ಗೆ ಸೀಮಿತವಾಗಬಹುದು.
ಇನ್ನು ಹೈದರಾಬಾದ್ ನಡುವಿನ ಪಂದ್ಯದ ಗೆಲುವಿನ ಬಳಿಕ ಮಾತನಾಡಿದ್ದ ಸ್ಟೋನಿಸ್, ಈ ಪಿಚ್ನಲ್ಲಿ ಕ್ರ್ಯಾಕ್ಗಳು ಇದ್ದವು, ಅಲ್ಲದೇ ಹೆಚ್ಚು ಸ್ವಿಂಗ್ ಆಗುವುದನ್ನು ಮನಗಂಡಿದ್ದೆ. ಈ ಬಗ್ಗೆ ಕೋಚರ್ ರಿಕ್ಕಿ ಪಾಂಟಿಂಗ್ ಸಹ ತಿಳಿಸಿದ್ದರು. ಇನ್ನು ನಾನು ಆರಂಭಿಕನಾಗಿ ಮೈದಾನಕ್ಕಿಳಿಯುವ ಕುರಿತು ಹಲವು ಬಾರಿ ಚರ್ಚೆಯಾಗಿತ್ತು. ತಂಡ 220 ರನ್ ಗಳಿಸಬೇಕಾದಾಗ ನನಗೆ ಆರಂಭಿಕ ಅವಕಾಶ ದೊರಕಿತ್ತು. ಆದರೆ, ಅಲ್ಲಿ ಯಶಸ್ಸು ಕಾಣಲಿಲ್ಲ. ಇಂದಿನ ಪಂದ್ಯದಲ್ಲಿ ಫಲ ದೊರೆತಿದೆ ಎಂದಿದ್ದಾರೆ.
ಕ್ವಾಲಿಫೈಯರ್ 1ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಬ್ಯಾಟ್ಸ್ಮನ್ ಪ್ರಕಾರ ತಂಡ ಸ್ಟೋನಿಸ್ರನ್ನು ಆರಂಭಿಕರಾಗಿ ಕಣಕ್ಕಿಳುಸುವ ಕುರಿತು ಮಾತುಕತೆ ನಡೆಸುತ್ತಿತ್ತು. ಆದರೆ, ಪಂದ್ಯದ ವೇಳೆ ಧವನ್ ಹಾಗೂ ಪೃಥ್ವಿ ಶಾ ಆರಂಭಿಕರಾಗಿದ್ದರು.
ಇನ್ನು ಫೈನಲ್ ಪಂದ್ಯದಲ್ಲಿ ಸ್ಟೋನಿಸ್ ಮತ್ತೆ ಆರಂಭಿಕರಾಗಿ ಕಣಕ್ಕಿಳಿಯುತ್ತಾರಾ ಎಂಬ ಕುತೂಹಲ ಏರ್ಪಟ್ಟಿದೆ.