ETV Bharat / sports

ಆರ್​ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿಗೆ ಹಿನ್ನಡೆ: ಅಮಿತ್ ಮಿಶ್ರಾ ಕಣಕ್ಕಿಳಿಯುವುದು ಅನುಮಾನ - ರಾಯಲ್ ಚಾಲೆಂಜರ್ಸ್ ಬೆಂಗಳೂರು

ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಬೆರಳಿಗೆ ಗಾಯ ಮಾಡಿಕೊಂಡಿರುವ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನವಾಗಿದೆ.

Amit Mishra doubtful for RCB game
ಅಮಿತ್ ಮಿಶ್ರಾ ಕಣಕ್ಕಿಳಿಯುವುದು ಅನುಮಾನ
author img

By

Published : Oct 5, 2020, 1:54 PM IST

ದುಬೈ: ಶನಿವಾರ ನಡೆದ ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಬೆರಳಿಗೆ ಗಾಯ ಮಾಡಿಕೊಂಡಿರುವ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ, ಅರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನವಾಗಿದೆ.

ಕಳೆದ ಮೂರು ಪಂದ್ಯಗಳಲ್ಲಿ ಡೆಲ್ಲಿ ಪರ ಕಣಕ್ಕಿಳಿದಿದ್ದ ಅಮಿತ್ ಮಿಶ್ರಾ 3 ವಿಕೆಟ್ ಪಡೆದಿದ್ದು, ಡೀಸೆಂಟ್ ಸ್ಪೆಲ್​ ಮಾಡಿದ್ದರು. ಶಾರ್ಜಾದಲ್ಲಿ ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಬೆರಳಿಗೆ ಗಾಯ ಮಾಡಿಕೊಂಡಿದ್ದರು.

ಅಮಿತ್ ಮಿಶ್ರಾ ತಮ್ಮ ಬೌಲಿಂಗ್ ವೇಳೆ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಭಾನುವಾರವಷ್ಟೇ ಸ್ಕ್ಯಾನ್ ಮಾಡಲಾಗಿದ್ದು, ವರದಿಗೆ ಕಾಯಲಾಗುತ್ತಿದೆ. ಆದರೆ ಆರ್‌ಸಿಬಿ ವಿರುದ್ಧದ ಇಂದಿನ ಪಂದ್ಯದಲ್ಲಿ ಲೆಗ್​ ಸ್ಪಿನ್ನರ್​ ಕಣಕ್ಕಿಳಿಯುವುದು ಅನುಮಾನ ಎಂದು ಮೂಲಗಳು ತಿಳಿಸಿವೆ. ಮಿಶ್ರಾ ಉತ್ತಮ ಲಯದಲ್ಲಿದ್ದ ಕಾರಣ ಇಂದಿನ ಪಂದ್ಯದಲ್ಲಿ ಅವರು ಕಣಕ್ಕಿಳಿಯದಿದ್ದರೆ ಡೆಲ್ಲಿ ತಂಡಕ್ಕೆ ಕೊಂಚ ಹಿನ್ನಡೆ ಉಂಟಾಗಲಿದೆ ಎನ್ನಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.