ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 30ನೇ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಐಯ್ಯರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಸೆಣಸಾಟ ನಡೆಸಲಿದ್ದು, ಮೊದಲನೇ ಸ್ಥಾನಕ್ಕೆ ಲಗ್ಗೆ ಹಾಕುವ ಉದ್ದೇಶದಿಂದ ಡೆಲ್ಲಿ ಮೈದಾನಕ್ಕಿಳಿದಿದೆ. ಆಡಿರುವ 7 ಪಂದ್ಯಗಳ ಪೈಕಿ ಡೆಲ್ಲಿ ತಂಡ 5ರಲ್ಲಿ ಗೆಲುವು ಸಾಧಿಸಿ 10 ಅಂಕಗಳೊಂದಿಗೆ ಸದ್ಯ ಎರಡನೇ ಸ್ಥಾನದಲ್ಲಿದೆ. ಇನ್ನು ರಾಜಸ್ಥಾನ ತಂಡ ಏಳು ಪಂದ್ಯಗಳ ಪೈಕಿ ಕೇವಲ ಮೂರರಲ್ಲಿ ಗೆಲುವು ಸಾಧಿಸಿ 7ನೇ ಸ್ಥಾನದಲ್ಲಿದೆ.
-
#DelhiCapitals win the toss and they will bat first against #RajasthanRoyals.#Dream11IPL pic.twitter.com/kKiNOpgHvP
— IndianPremierLeague (@IPL) October 14, 2020 " class="align-text-top noRightClick twitterSection" data="
">#DelhiCapitals win the toss and they will bat first against #RajasthanRoyals.#Dream11IPL pic.twitter.com/kKiNOpgHvP
— IndianPremierLeague (@IPL) October 14, 2020#DelhiCapitals win the toss and they will bat first against #RajasthanRoyals.#Dream11IPL pic.twitter.com/kKiNOpgHvP
— IndianPremierLeague (@IPL) October 14, 2020
ಮುಂಬೈ ಇಂಡಿಯನ್ಸ್ ವಿರುದ್ಧ ಹಿಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋಲು ಕಂಡಿದ್ದು, ಇಂದಿನ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡುವ ಇರಾದೆಯಲ್ಲಿದೆ. ಆದರೆ ಪ್ಲೇ-ಆಫ್ ಆಸೆ ಜೀವಂತವಾಗಿಟ್ಟುಕೊಳ್ಳಬೇಕಾದರೆ ರಾಜಸ್ಥಾನ ತಂಡಕ್ಕೆ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ಇದೆ. ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬೆನ್ ಸ್ಟೋಕ್ಸ್ ಕಮ್ಬ್ಯಾಕ್ ಮಾಡಿದ್ದು, ಇಂದಿನ ಪಂದ್ಯದಲ್ಲಿ ಆರ್ಭಟಿಸಬೇಕಾಗಿದೆ.
ತಂಡಗಳು
ರಾಜಸ್ಥಾನ ರಾಯಲ್ಸ್: ಬೆನ್ ಸ್ಟೋಕ್ಸ್, ಸಂಜು ಸ್ಯಾಮ್ಸನ್, ಜೊಸ್ ಬಟ್ಲರ್(ವಿ.ಕೀ), ಸ್ಟೀವ್ ಸ್ಮಿತ್(ಕ್ಯಾಪ್ಟನ್), ರಾಬಿನ್ ಉತ್ತಪ್ಪ, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಜೋಪ್ರಾ ಆರ್ಚರ್, ಶ್ರೇಯಸ್ ಗೋಪಾಲ್, ಜಯದೇವ್ ಉನಾದ್ಕಟ್, ಕಾರ್ತಿಕ್ ತ್ಯಾಗಿ.
ಡೆಲ್ಲಿ ಕ್ಯಾಪಿಟಲ್ಸ್: ಶ್ರೇಯಸ್ ಐಯ್ಯರ್(ಕ್ಯಾಪ್ಟನ್), ಪೃಥ್ವಿ ಶಾ, ಶಿಖರ್ ಧವನ್, ರಹಾನೆ, ಸ್ಟೋಯ್ನಿಸ್, ಅಲೆಕ್ಸ್ ಕ್ಯಾರಿ(ವಿ.ಕೀ), ಅಕ್ಸರ್ ಪಟೇಲ್, ಆರ್.ಅಶ್ವಿನ್, ತುಶಾರ್ ದೇಶಪಾಂಡೆ, ರಬಾಡಾ, ಅನ್ರಿಚ್ ನಾರ್ಟ್ಜೆ.