ETV Bharat / sports

ಕುಂಬ್ಳೆ ಅವರಲ್ಲಿನ ಹೋರಾಟದ ಗುಣ ಪಾಂಜಾಬ್​ ತಂಡಕ್ಕೆ ವರ್ಗವಾಗಿದೆ: ಗವಾಸ್ಕರ್ - ಪಂಜಾಬ್ ತಂಡದ ಬಗ್ಗೆ ಗವಾಸ್ಕರ್ ಹೇಳಿಕೆ

ಕುಂಬ್ಳೆ ಅವರು ಕ್ರಿಕೆಟ್ ವೃತ್ತಿಜೀವನದ ಹೋರಾಟಗಾರರಾಗಿದ್ದಾರೆ. ಅವರು ದವಡೆ ಮುರಿದರೂ ಬೌಲಿಂಗ್ ಮಾಡಿದ್ದನ್ನು ನಾವು ನೋಡಿದ್ದೇವೆ. ಆ ಉತ್ಸಾಹವನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಕಾಣಬಹುದು..

Kumble's fighting spirit has been transferred to KXIP
ಅನಿಲ್ ಕುಂಬ್ಳೆ ಬಗ್ಗೆ ಗವಾಸ್ಕರ್ ಮಾತು
author img

By

Published : Oct 26, 2020, 2:36 PM IST

ದುಬೈ: ಸತತ ಸೋಲುಗಳಿಂದ 2020ರ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುತ್ತಿದ್ದ ಪಂಜಾಬ್ ತಂಡ ಗೆಲುವಿನ ಟ್ರ್ಯಾಕ್​ಗೆ ಮಳಿದೆ. ತಂಡದ ಯಶಸ್ಸಿಗೆ ಅನಿಲ್ ಕುಂಬ್ಳೆ ಕಾರಣ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಹೇಳಿದ್ದಾರೆ.

13ನೇ ಆವೃತ್ತಿಯ ಐಪಿಎಲ್​ ಸರಣಿಯಲ್ಲಿ ಉತ್ತಮ ಆರಂಭ ಪಡೆಯದ ಕಿಂಗ್ಸ್ ಇಲೆವೆನ್ ಪಂಜಾಬ್, ಘಟಾನುಘಟಿ ಆಟಗಾರರಿದ್ದರೂ ಸಾಲು ಸಾಲು ಸೋಲುಗಳಿಂದ ನಿರಾಶೆ ಅನುಭವಿಸಿತ್ತು. ಸಣ್ಣ ಸಣ್ಣ ತಪ್ಪುಗಳಿಂದಾಗಿ ಗೆಲ್ಲುವ ಪಂದ್ಯಗಳನ್ನೂ ಕೈಚೆಲ್ಲಿತ್ತು.

ಗೇಲ್ ಆಗಮನದ ನಂತರ ಪಂಜಾಬ್ ತಂಡದ ಅದೃಷ್ಟ ಬದಲಾಗಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಬಲಿಷ್ಠ ತಂಡಗಳ ವಿರುದ್ಧ ಜಯ ಸಾಧಿಸಿದ್ದು, ಪ್ಲೇಆಫ್​ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಇಂದು ಕೆಕೆಆರ್​ ವಿರುದ್ಧ ಮತ್ತೊಂದು ಪಂದ್ಯ ಆಡಲಿದೆ.

ಪಂಜಾಬ್ ತಂಡ ಗೆಲುವಿನ ಲಯಕ್ಕೆ ಮರಳಿದ್ದು, ಇದರ ಶ್ರೇಯ ತಂಡದ ಮುಖ್ಯ ಕೋಚ್ ಕನ್ನಡಿಗ ಅನಿಲ್ ಕುಂಬ್ಳೆ ಅವರಿಗೆ ಸಲ್ಲಬೇಕು ಎಂದು ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಹೇಳಿದ್ದಾರೆ. ಕೆ.ಎಲ್. ರಾಹುಲ್ ನಾಯಕನಾಗಿ ಬೆಳವಣಿಗೆ ಕಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಮ್ಮೆ ದವಡೆ ಮುರಿದರೂ ಬೌಲಿಂಗ್ ನಡೆಸಿದ್ದ ಅನಿಲ್ ಕುಂಬ್ಳೆ ಅವರನ್ನು ಉದಾಹರಣೆ ನೀಡಿ ಪಂಜಾಬ್ ತಂಡವನ್ನು ಕೊಂಡಾಡಿದ್ದಾರೆ.

"ತಂಡದ ಯಶಸ್ಸಿನಲ್ಲಿ ಅನಿಲ್ ಕುಂಬ್ಳೆ ಪಾತ್ರವನ್ನು ಮರೆಯಬೇಡಿ, ಕುಂಬ್ಳೆ ಅವರು ಕ್ರಿಕೆಟ್ ವೃತ್ತಿಜೀವನದ ಹೋರಾಟಗಾರರಾಗಿದ್ದಾರೆ. ಅವರು ದವಡೆ ಮುರಿದರೂ ಬೌಲಿಂಗ್ ಮಾಡಿದ್ದನ್ನು ನಾವು ನೋಡಿದ್ದೇವೆ. ಆ ಉತ್ಸಾಹವನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಕಾಣಬಹುದು" ಎಂದು ಗವಾಸ್ಕರ್ ಹೇಳಿದದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.