ಶಾರ್ಜಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಎ.ಬಿ.ಡಿವಿಲಿಯರ್ಸ್ ಐಪಿಎಲ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಸೃಷ್ಟಿಸಿದ್ದಾರೆ.
ಸೋಮವಾರ ಶಾರ್ಜಾ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 47 ಎಸೆತಗಳಲ್ಲಿ 100 ರನ್ಗಳ ಜೊತೆಯಾಟ ಆಡಿರುವ ವಿರಾಟ್ ಹಾಗೂ ಎಬಿಡಿ ಈವರೆಗೆ ಒಟ್ಟು 10 ಬಾರಿ ಜೊತೆಯಾಟದ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
-
8️⃣3️⃣ of these have come in the last 5️⃣. 💥 💥 💥 #PlayBold #IPL2020 #WeAreChallengers #Dream11IPL #RCBvKKR pic.twitter.com/Z1nPAH5l77
— Royal Challengers Bangalore (@RCBTweets) October 12, 2020 " class="align-text-top noRightClick twitterSection" data="
">8️⃣3️⃣ of these have come in the last 5️⃣. 💥 💥 💥 #PlayBold #IPL2020 #WeAreChallengers #Dream11IPL #RCBvKKR pic.twitter.com/Z1nPAH5l77
— Royal Challengers Bangalore (@RCBTweets) October 12, 20208️⃣3️⃣ of these have come in the last 5️⃣. 💥 💥 💥 #PlayBold #IPL2020 #WeAreChallengers #Dream11IPL #RCBvKKR pic.twitter.com/Z1nPAH5l77
— Royal Challengers Bangalore (@RCBTweets) October 12, 2020
ಐಪಿಎಲ್ ಟೂರ್ನಿಯಲ್ಲಿ ಇದೊಂದು ದಾಖಲೆಯಾಗಿದ್ದು, ಕೊಹ್ಲಿ ಹಾಗೂ ಕ್ರಿಸ್ ಗೇಲ್ ಜೊತೆಯಾಟದಲ್ಲಿ 9 ಬಾರಿ ಶತಕ ಬಾರಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಮುಡಿಗೆ ಇದು ಮತ್ತೊಂದು ಕಿರೀಟವಾಗಿದೆ. ಇದಾದ ನಂತರ ಸನ್ ರೈಸರ್ಸ್ ಹೈದರಾಬಾದ್ನ ಆಟಗಾರರಾದ ಶಿಖರ್ ಧವನ್ ಹಾಗೂ ಡೇವಿಡ್ ವಾರ್ನರ್ ಜೊತೆಯಾಟದಲ್ಲಿ 6 ಬಾರಿ ಶತಕ ಬಾರಿಸಿದ್ದಾರೆ. ನಂತರದ ಸ್ಥಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ನ ಗೌತಮ್ ಗಂಭೀರ್ ಹಾಗೂ ರಾಬಿನ್ ಉತ್ತಪ್ಪ 5 ಬಾರಿ ಜೊತೆಯಾಟದಲ್ಲಿ ಶತಕ ದಾಖಲಿಸಿದ್ದಾರೆ.
ಕೊಹ್ಲಿ ಹಾಗೂ ಎಬಿಡಿ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ 3 ಸಾವಿರ ರನ್ ಕಲೆಹಾಕಿದ ಜೋಡಿಯಾಗಿದ್ದು, ಕ್ರಿಸ್ ಗೇಲ್ ಹಾಗೂ ಕೊಹ್ಲಿ ಜೊತೆಯಾಟದಲ್ಲಿ 2,782 ಗಳಿಸಿದ್ದಾರೆ. ಧವನ್ ಹಾಗೂ ವಾರ್ನರ್ ಜೋಡಿ 2,357 ರನ್ ಕಲೆಹಾಕಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಎಬಿಡಿ 33 ಎಸೆತಗಳಿಗೆ 73 ರನ್ ದಾಖಲಿಸಿದ್ದು, ಕೊಹ್ಲಿ 28 ಎಸೆತಗಳಿಗೆ 33 ರನ್ ಗಳಿಸಿದರು. ಇದೇ ವೇಳೆ ಆ್ಯರನ್ ಫಿಂಚ್ 37 ಎಸೆತಗಳಲ್ಲಿ 47 ರನ್ ಗಳಿಸಿ ಆರ್ಸಿಬಿ ಬೃಹತ್ ಮೊತ್ತ ಕಲೆಹಾಕಲು ಸಹಕರಿಸಿದರು.