ದುಬೈ: ಗುರುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಪರ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಟ್ರೆಂಟ್ ಬೋಲ್ಟ್ ಗಾಯಗೊಂಡಿದ್ದು, ಹಾಲಿ ಚಾಂಪಿಯನ್ಸ್ಗೆ ಅಘಾತ ಉಂಟುಮಾಡಿದೆ.
ಮೊದಲ ಓವರ್ನಲ್ಲೇ ಪ್ರಮುಖ 2 ವಿಕೆಟ್ ಪಡೆದು, ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬೋಲ್ಟ್ ನಿನ್ನೆ 2 ಓವರ್ ಬೌಲಿಂಗ್ ನಡೆಸಿ ಪ್ರಮುಖ ಎರಡು ವಿಕೆಟ್ ಪಡೆದರು. ಪಂದ್ಯದ ವೇಳೆ ತೋಡೆಸಂದಿಯ ನೋವಿನಿಂದಾಗಿ ಮೈದಾನದಿಂದ ಹೊರನಡೆದ್ರು.
ಪಂದ್ಯ ಮುಗಿದ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ, "ಸದ್ಯ ಬೋಲ್ಟ್ ಅವರನ್ನು ನೋಡಿಲ್ಲ. ಆದರೆ ಹೆಚ್ಚಿನ ತೊಂದರೆ ಏನು ಇಲ್ಲವೆಂದು ಭಾವಿಸುತ್ತೇನೆ. ಮೂರು ದಿನಗಳ ವಿಶ್ರಾಂತಿ ನಂತರ ಅವರು ಮತ್ತೆ ಮೈದಾನಕ್ಕೆ ಬರಬೇಕು. ಬುಮ್ರಾ ಮತ್ತು ಬೌಲ್ಟ್ ನಮ್ಮ ತಂಡದ ದೊಡ್ಡ ಶಕ್ತಿಯಾಗಿದ್ದಾರೆ" ಎಂದು ಹೇಳಿದ್ರು.
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮಿಂಚಿದ ಬೋಲ್ಟ್ ಮತ್ತು ಬುಮ್ರಾ, ಡೆಲ್ಲಿ ಬ್ಯಾಟ್ಸ್ಮನ್ಗಳನ್ನು ಪೆವಿಲಿಯನ್ ಸೇರಿಸಿದ್ರು. ಮೊದಲ ನಾಲ್ಕು ಓವರ್ಗಳಲ್ಲೇ ಪ್ರಮುಖ ನಾಲ್ಕು ವಿಕೆಟ್ ಕಬಳಿಸಿ ಮುಂಬೈ ತಂಡದ ಗೆಲುವನ್ನು ಸುಲಭಗೊಳಿಸಿದ್ರು. ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ 4 ಓವರ್ಗಳಲ್ಲಿ 14 ರನ್ ನೀಡಿ 4 ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್ 2 ಓವರ್ಗಳಲ್ಲಿ 9 ರನ್ ನೀಡಿ 2 ವಿಕೆಟ್ ಪಡೆದರು.