ETV Bharat / sports

ಐಪಿಎಲ್ ವೇಳಾಪಟ್ಟಿ ಬಿಡುಗಡೆ... ಇಲ್ಲಿದೆ ನೋಡಿ

ಐಪಿಎಲ್-2020 ವೇಳಾಪಟ್ಟಿ ಬಿಡುಗಡೆಯಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಸೆ.19ರಿಂದ ಚುಟುಕು ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ.

Indian Premier League
Indian Premier League
author img

By

Published : Sep 6, 2020, 5:05 PM IST

Updated : Sep 25, 2020, 5:59 PM IST

ದುಬೈ: ಈ ಬಾರಿ ಯುಎಇಯಲ್ಲಿ ನಡೆಯಲಿರುವ ಬಹು ನಿರೀಕ್ಷಿತ ಐಪಿಎಲ್​ 2020 ಪಂದ್ಯಾವಳಿಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಸೆಪ್ಟೆಂಬರ್​ 19ರಂದು ಅಬುಧಾಬಿಯಲ್ಲಿ ಟೂರ್ನಿಗೆ ಚಾಲನೆ ಸಿಗಲಿದೆ. ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಮತ್ತು ಚೆನ್ನೈ ಸೂಪರ್​​ ಕಿಂಗ್ಸ್​​ ನಡುವೆ ಮೊದಲ ಕಾಳಗ ನಡೆಯಲಿದೆ.

ಅಬುಧಾಬಿಯಲ್ಲಿ ಮೊದಲ ಪಂದ್ಯ ನಡೆದ ನಂತರ 2ನೇ ಪಂದ್ಯ ದುಬೈಯಲ್ಲಿ ನಡೆಯಲಿದೆ. ಸೆಪ್ಟೆಂಬರ್​ 20, ಭಾನುವಾರ ನಡೆಯುವ ಈ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್​, ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡವನ್ನು ಎದುರಿಸಲಿದೆ. ಸೋಮವಾರ ಸೆಪ್ಟೆಂಬರ್​ 21ರಂದು ಕನ್ನಡಿಗರಿಗೆ ಹಬ್ಬ. ಯಾಕೆಂದರೆ ತಮ್ಮ ನೆಚ್ಚಿನ ತಂಡದ ಆಟ ನೋಡುವ ಭಾಗ್ಯ ಕನ್ನಡಿಗರಿಗೆ ಸಿಗಲಿದೆ. ಅಂದು ವಿರಾಟ್​ ಕೊಹ್ಲಿ ನಾಯಕತ್ವದ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು, ಸನ್​ ರೈಸರ್ಸ್​ ಹೈದರಾಬಾದ್​ ತಂಡದೊಂದಿಗೆ ಸೆಣಸಲಿದೆ.

ಮಂಗಳವಾರ ಐಪಿಎಲ್​ ಪಂದ್ಯಗಳ ಆತಿಥ್ಯವನ್ನು ಶಾರ್ಜಾ ವಹಿಸಿಕೊಳ್ಳಲಿದೆ. ಸೆಪ್ಟೆಂಬರ್​ 22ರಂದು ನಡೆಯುವ ಸೆಣಸಾಟದಲ್ಲಿ ರಾಜಸ್ಥಾನ್​ ರಾಯಲ್ಸ್​, ಚೆನ್ನೈ ಸೂಪರ್​​ ಕಿಂಗ್ಸ್​ ಜೊತೆ ಅದೃಷ್ಟ ಪರೀಕ್ಷಿಸಲಿದೆ.ಮೊದಲ ಪಂದ್ಯ (ಯುಎಇಯಲ್ಲಿ ಅಪರಾಹ್ನ 2 ಗಂಟೆಗೆ) ಭಾರತೀಯ ಕಾಲಮಾನದ ಪ್ರಕಾರ ಅಪರಾಹ್ನ 3:30ಕ್ಕೆ ಆರಂಭವಾಗಲಿದೆ. ಸಂಜೆ ನಡೆಯುವ ಎಲ್ಲಾ ಮ್ಯಾಚ್​ಗಳು ಭಾರತೀಯ ಕಾಲಮಾನದ ಪ್ರಕಾರ 7:30ಕ್ಕೆ ಶುರುವಾಗಲಿವೆ. ಒಟ್ಟು 24 ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಅಬುಧಾಬಿಯಲ್ಲಿ 20 ಮತ್ತು ಶಾರ್ಜಾ 12 ಮ್ಯಾಚ್​ಗಳಿಗೆ ಆತಿಥ್ಯ ವಹಿಸಲಿದೆ.

ಪ್ಲೇಆಫ್​​ ಹಂತದ ಪಂದ್ಯಗಳು ಎಲ್ಲಿ ಮತ್ತು ಯಾವಾಗ ನಡೆಯಲಿವೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಐಪಿಎಲ್​​ 2020 ಫೈನಲ್​​ ಪಂದ್ಯ ಇದೇ ಮೊದಲ ಬಾರಿಗೆ ವೀಕ್ ಡೇ ಮಂಗಳವಾರ (ನ.10) ನಡೆಯಲಿದೆ ಆದ್ರೆ ಎಲ್ಲಿ ಎಂಬುದು ನಿರ್ಧಾರವಾಗಿಲ್ಲ.

Last Updated : Sep 25, 2020, 5:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.