ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 13ನೇ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ಗೆ ಪ್ರೀತಿ ಜಿಂಟಾ ಫ್ರಾಂಚೈಸಿ ಗೇಟ್ಪಾಸ್ ಕೊಟ್ಟಿದೆ.
ಇದನ್ನೂ ಓದಿ...ಕಳಪೆ ಪ್ರದರ್ಶನ ತೋರಿದ್ದ ರಸೆಲ್, ಕಾರ್ತಿಕ್ ಉಳಿಸಿಕೊಂಡ ಕೆಕೆಆರ್.. ಯಾರೆಲ್ಲಾ ಔಟ್? ಇಲ್ಲಿದೆ ಮಾಹಿತಿ
ಕಳೆದ ಬಾರಿಯ ಐಪಿಎಲ್ನಲ್ಲಿ ಮ್ಯಾಕ್ಸ್ವೆಲ್ಗೆ ₹10.75 ಕೋಟಿಗೆ ಖರೀದಿಸಲಾಗಿತ್ತು. ಆದರೆ ಅವರು ಉತ್ತಮ ಪ್ರದರ್ಶನ ನೀಡಲು ವಿಫಲರಾದರು. ಟೂರ್ನಿಯಲ್ಲಿ 13 ಇನಿಂಗ್ಸ್ ಆಡಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಗಳಿಸಿರುವುದು ಕೇವಲ 108 ರನ್ ಮಾತ್ರ. ಅದರಲ್ಲಿ ಒಂದೇ ಒಂದು ಸಿಕ್ಸರ್ ಕೂಡ ಮೂಡಿ ಬಂದಿಲ್ಲ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
2014ರ ಆವೃತ್ತಿಯಲ್ಲಿ ಬಿಟ್ಟರೆ ಉಳಿದೆಲ್ಲಾ ಟೂರ್ನಿಗಳಲ್ಲಿ ಕಳಪೆ ಪ್ರದರ್ಶನ ತೋರಿದ್ದಾರೆ. ಈ ಆವೃತ್ತಿಯಲ್ಲಿ 14 ಪಂದ್ಯಗಳಿಂದ 552 ರನ್ ಗಳಿಸಿದ್ದ ಮ್ಯಾಕ್ಸ್‌ವೆಲ್, ತಂಡವನ್ನು ಫೈನಲ್ವರೆಗೂ ಕೊಂಡೊಯ್ಯಲು ಪ್ರಮುಖ ಪಾತ್ರ ವಹಿಸಿದ್ದರು. 2020ರ ಐಪಿಎಲ್ನಲ್ಲಿ ಕೆಟ್ಟ ಪ್ರದರ್ಶನ ತೋರಿದ್ದ ಮ್ಯಾಕ್ಸ್‌ವೆಲ್, ತಮ್ಮ ದೇಶದ ಪರ ಭಾರತದ ವಿರುದ್ಧ ಏಕದಿನ, ಟಿ-20 ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು.
ಇದನ್ನೂ ಓದಿ...ಜೇಸನ್ ರಾಯ್, ಅಲೆಕ್ಸ್ ಕ್ಯಾರಿ ಔಟ್: ಡೆಲ್ಲಿ ಉಳಿಸಿಕೊಂಡ ಯುವ ಆಟಗಾರರ ಪಟ್ಟಿ ಹೀಗಿದೆ
ಫ್ರಾಂಚೈಸಿ ಕೈಬಿಟ್ಟವರು: ಮ್ಯಾಕ್ಸ್‌ವೆಲ್ ಜೊತೆಗೆ ಇತರ ಪ್ರಮುಖ ಆಟಗಾರರನ್ನು ಫ್ರಾಂಚೈಸಿ ಹೊರಗಿಟ್ಟಿದೆ. ಗ್ಲೆನ್ ಮ್ಯಾಕ್ಸ್‌ವೆಲ್, ಕನ್ನಡಿಗರಾದ ಕರುಣ್ ನಾಯರ್, ಕೃಷ್ಣಪ್ಪ ಗೌತಮ್, ಹಾರ್ಡಸ್ ವಿಲ್ಜೋಯೆನ್, ಜಗದೀಶ್ ಸುಚಿತ್, ಮುಜೀಬ್ ಉರ್ ರೆಹಮಾನ್, ಶೆಲ್ಡನ್ ಕಾಟ್ರೆಲ್, ಜೇಮ್ಸ್ ನೀಶಾಮ್, ತೇಜಂದರ್ ಸಿಂಗ್.
ಉಳಿಸಿಕೊಂಡವರು: ಕೆ.ಎಲ್.ರಾಹುಲ್ (ನಾಯಕ), ಕ್ರಿಸ್ ಗೇಲ್, ಮಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಸರ್ಫರಾಜ್ ಖಾನ್, ದೀಪಕ್ ಹೂಡ, ಸಿಮ್ರಾನ್ ಸಿಂಗ್, ಮೊಹಮ್ಮದ್ ಶಮಿ, ಕ್ರಿಸ್ ಜೋರ್ಡಾನ್, ದರ್ಶನ್ ನಲ್ಕಂಡೆ, ರವಿ ಬಿಷ್ಣೋಯ್, ಮುರುಗನ್ ಅಶ್ವಿನ್, ಹರ್ಷೀಪ್ ಸಿಂಗ್, ಇಶಾನ್ ಪೊರೆಲ್.
ಫ್ರಾಂಚೈಸಿ ಉಳಿಸಿಕೊಂಡಿರುವ ಮೊತ್ತ: 53.2 ಕೋಟಿ