ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ 13ನೇ ಆವೃತ್ತಿಯ 11ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‌ಐಪಿ) ವಿರುದ್ಧದ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಉತ್ತಮ ಪ್ರದರ್ಶನ ತೋರಿದ್ದ ಮಾರ್ಕಸ್ ಸ್ಟೊಯಿನಿಸ್ ಮತ್ತು ಕಗಿಸೊ ರಬಾಡಾ ಗೆಲುವನ್ನು ಖಚಿತಪಡಿಸಿದ್ದರು. ಇದಕ್ಕೂ ಮೊದಲು ಸತತ ಗೆಲುವಿನ ಸರದಾರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಗ್ಗು ಬಡಿಯುವಲ್ಲಿ ನೆರವಾಗಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ನಲ್ಲಿ ಕೂಡ ಸಮರ್ಥ ಪಡೆ ಹೊಂದಿದೆ. ಹೈದರಾಬಾದ್ ವಿರುದ್ಧದ ಇಂದಿನ ಪಂದ್ಯದಲ್ಲಿ ಶಿಖರ್ ಧವನ್, ಪೃಥ್ವಿ ಶಾ ಜೋಡಿ ಉತ್ತಮ ರನ್ ಗಳಿಸುವ ನಿರೀಕ್ಷೆ ಇದೆ. ಜೊತೆಗೆ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಪಂಜಾಬ್ ವಿರುದ್ಧ ಉನ್ನತ ಕ್ರಮಾಂಕದ ಕುಸಿತದ ನಂತರ ಇವರಿಬ್ಬರು ತಂಡವನ್ನು ಮೇಲಕ್ಕೆತ್ತಲು ನೆರವಾಗಿದ್ದರು. ಅಲ್ಲದೆ ಸಿಎಸ್‌ಕೆ ವಿರುದ್ಧ ಉತ್ತಮ ಪ್ರದರ್ಶನ ತೋರಿದ್ದರು. ಆಸೀಸ್ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಸಾಮರ್ಥ್ಯ ಹೊಂದಿದ್ದಾರೆ. ಶಿಮ್ರಾನ್ ಹೆಟ್‌ಮಿಯರ್ ಜೊತೆಗೂಡಿ ತಂಡವನ್ನು ಗೆಲುವಿನ ದಡ ಸೇರಿಸುವ ನಿರೀಕ್ಷೆ ಇದೆ.
ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಅನುಪಸ್ಥಿತಿಯಲ್ಲಿ, ಅಕ್ಸರ್ ಪಟೇಲ್ ಮತ್ತು ಅಮಿತ್ ಮಿಶ್ರಾ ಇದುವರೆಗೆ ಉತ್ತಮ ಪ್ರದರ್ಶನ ತೋರಿದ್ದು, ಅದನ್ನೇ ಮುಂದುವರೆಸುವ ನಿರೀಕ್ಷೆಯಿದೆ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿರುವ ಅಶ್ವಿನ್ ಚೇತರಿಸಿಕೊಳ್ಳುತ್ತಿದ್ದು, ಇಂದಿನ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.
-
𝘕𝘦𝘹𝘵 𝘔𝘪𝘴𝘴𝘪𝘰𝘯 👉🏻 𝐑𝐢𝐬𝐞 𝐓𝐨 𝐓𝐡𝐞 𝐂𝐡𝐚𝐥𝐥𝐞𝐧𝐠𝐞 🟠🛡️
— Delhi Capitals (Tweeting from 🇦🇪) (@DelhiCapitals) September 28, 2020 " class="align-text-top noRightClick twitterSection" data="
Dilliwalon, aur ek victory ho jaaye kal? 😎#DCvSRH #Dream11IPL #IPL2020 #YehHaiNayiDilli pic.twitter.com/qTi5EUNYcB
">𝘕𝘦𝘹𝘵 𝘔𝘪𝘴𝘴𝘪𝘰𝘯 👉🏻 𝐑𝐢𝐬𝐞 𝐓𝐨 𝐓𝐡𝐞 𝐂𝐡𝐚𝐥𝐥𝐞𝐧𝐠𝐞 🟠🛡️
— Delhi Capitals (Tweeting from 🇦🇪) (@DelhiCapitals) September 28, 2020
Dilliwalon, aur ek victory ho jaaye kal? 😎#DCvSRH #Dream11IPL #IPL2020 #YehHaiNayiDilli pic.twitter.com/qTi5EUNYcB𝘕𝘦𝘹𝘵 𝘔𝘪𝘴𝘴𝘪𝘰𝘯 👉🏻 𝐑𝐢𝐬𝐞 𝐓𝐨 𝐓𝐡𝐞 𝐂𝐡𝐚𝐥𝐥𝐞𝐧𝐠𝐞 🟠🛡️
— Delhi Capitals (Tweeting from 🇦🇪) (@DelhiCapitals) September 28, 2020
Dilliwalon, aur ek victory ho jaaye kal? 😎#DCvSRH #Dream11IPL #IPL2020 #YehHaiNayiDilli pic.twitter.com/qTi5EUNYcB
ಮತ್ತೊಂದೆಡೆ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಬ್ಯಾಟಿಂಗ್ ಸಮಸ್ಯೆಗಳಿದ್ದು, ಅದನ್ನು ಪರಿಹರಿಸಿಕೊಳ್ಳಬೇಕಾಗಿದೆ. ನಾಯಕ ಡೇವಿಡ್ ವಾರ್ನರ್, ಜಾನಿ ಬೈರ್ ಸ್ಟೋವ್ ಮತ್ತು ಮನೀಶ್ ಪಾಂಡೆ ಹೊರತುಪಡಿಸಿ ಇತರರು ಯಾರೂ ಉತ್ತಮ ಪ್ರದರ್ಶನ ತೋರಿಲ್ಲ. 2016ರ ಚಾಂಪಿಯನ್‌ಗಳಿಗೆ ಮಧ್ಯಮ ಕ್ರಮಾಂಕದಲ್ಲಿ ಸ್ಟೊಯಿನಿಸ್, ಕೀರನ್ ಪೊಲಾರ್ಡ್ ಮತ್ತು ಆಂಡ್ರೆ ರಸ್ಸೆಲ್‌ರಂತಹ ಸ್ಫೋಟಕ ಬ್ಯಾಟ್ಸ್ಮನ್ಗಳ ಅಗತ್ಯವಿದೆ. ಹೀಗಾಗಿ ತಂಡದ ನಿರ್ವಾಹಕರು, ಅಫ್ಘಾನಿಸ್ತಾನದ ಆಫ್-ಸ್ಪಿನ್ನರ್ ಮೊಹಮ್ಮದ್ ನಬಿಯ ಬದಲಿಗೆ ಕೇನ್ ವಿಲಿಯಮ್ಸನ್‌ರನ್ನು ಸೇರಿಸಿಕೊಳ್ಳುವ ಸಾಧ್ಯತೆಯಿದೆ.
ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಮತ್ತೊಮ್ಮೆ ತಮ್ಮ ವೇಗದ ದಾಳಿಯನ್ನು ಮುಂದುವರೆಸಬೇಕಾದ ಅಗತ್ಯವಿದೆ. ಈ ಹಿಂದಿನ ಕೇವಲ ಎರಡು ಪಂದ್ಯಗಳ ಮೇಲೆ ಅವರ ಸಾಮರ್ಥ್ಯ ನಿರ್ಣಯಿಸಲು ಸಾಧ್ಯವಿಲ್ಲ. ಭುವನೇಶ್ವರ್ಗೆ ಸಂದೀಪ್ ಶರ್ಮಾ ಮತ್ತು ಖಲೀಲ್ ಅಹ್ಮದ್ ಸಾಥ್ ಕೊಡಬೇಕಾಗಿದೆ. ಇವರನ್ನು ಹೊರತುಪಡಿಸಿ ರಶೀದ್ ಖಾನ್ ತಮ್ಮ ಸ್ಪಿನ್ ದಾಳಿಯನ್ನು ಮುಂದುವರೆಸಲಿದ್ದಾರೆ. ಖಾನ್ ಪ್ರದರ್ಶನದ ಮೇಲೆ ಪಂದ್ಯದ ಫಲಿತಾಂಶ ನಿಂತಿದೆ.
-
The 🎩's magic in pictures ✨#OrangeArmy #KeepRising #Dream11IPL #IPL2020 pic.twitter.com/czf6KfhnXd
— SunRisers Hyderabad (@SunRisers) September 28, 2020 " class="align-text-top noRightClick twitterSection" data="
">The 🎩's magic in pictures ✨#OrangeArmy #KeepRising #Dream11IPL #IPL2020 pic.twitter.com/czf6KfhnXd
— SunRisers Hyderabad (@SunRisers) September 28, 2020The 🎩's magic in pictures ✨#OrangeArmy #KeepRising #Dream11IPL #IPL2020 pic.twitter.com/czf6KfhnXd
— SunRisers Hyderabad (@SunRisers) September 28, 2020
ತಂಡಗಳು :
ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್): ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್ ಸ್ಟೋವ್, ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ, ಶ್ರೀವಾತ್ಸ್ ಗೋಸ್ವಾಮಿ, ಅಬ್ದುಲ್ ಸಮದ್, ವಿಜಯ್ ಶಂಕರ್, ಮೊಹಮ್ಮದ್ ನಬಿ, ರಶೀದ್ ಖಾನ್, ಜೇಸನ್ ಹೋಲ್ಡರ್, ಅಭಿಷೇಕ್ ಶರ್ಮಾ, ಬವನಕಾ ಸಂದೇವ್.
ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) : ಶ್ರೇಯಸ್ ಅಯ್ಯರ್ (ಕ್ಯಾಪ್ಟನ್), ರವಿಚಂದ್ರನ್ ಅಶ್ವಿನ್, ಶಿಖರ್ ಧವನ್, ಪೃಥ್ವಿ ಶಾ, ಡೇನಿಯಲ್ ಸ್ಯಾಮ್ಸ್, ಮೋಹಿತ್ ಶರ್ಮಾ, ಅನ್ರಿಚ್ ನಾರ್ಟ್ಜೆ, ಅಲೆಕ್ಸ್ ಕ್ಯಾರಿ, ಅವೇಶ್ ಖಾನ್, ತುಷಾರ್ ದೇಶಪಾಂಡೆ, ಶಿಮ್ರಾನ್ ಹೆಟ್ಮೇಯರ್, ಕಗಿಸೊ ರಬಡಾ, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ, ಅಕ್ಸರ್ ಪಟೇಲ್, ಸಂದೀಪ್ ಲಮಿಚಾನೆ, ಕೀಮೋ ಪಾಲ್, ಹರ್ಷಲ್ ಪಟೇಲ್, ಮಾರ್ಕಸ್ ಸ್ಟೊಯಿನಿಸ್, ಲಲಿತ್ ಯಾದವ್.