ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಸಕ್ತ ಸೀಸನ್ನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಅತ್ಯಂತ ನಿರಾಶಾದಾಯಕ ಪ್ರದರ್ಶನ ತೋರಿದೆ. ಮೂರು ಬಾರಿಯ ಚಾಂಪಿಯನ್ ಪಟ್ಟಕ್ಕೇರಿದ್ದ ತಂಡ ಈ ಬಾರಿ ನಾಕ್ಔಟ್ ಹಂತ ತಲುಪಲೂ ಸಾಧ್ಯವಾಗಲಿಲ್ಲ.
ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ಲೇ ಆಫ್ ಹಂತಕ್ಕೇರಲು ಸಿಎಸ್ಕೆ ವಿಫಲವಾಗಿದೆ. ಈ ಋತುವಿನಲ್ಲಿ ಪ್ಲೇ ಆಫ್ನಿಂದ ತಂಡದ ನಿರ್ಗಮನ ಮತ್ತು ಕಳಪೆ ಪ್ರದರ್ಶನವನ್ನು ಗಮನಿಸಿದರೆ ಅನೇಕ ಪ್ರಶ್ನೆಗಳು ಎದ್ದಿವೆ. ಮುಂದಿನ ವರ್ಷ ತಂಡದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು ಎಂದು ಅಭಿಮಾನಿಗಳು ಮತ್ತು ಕೆಲವು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗಿ ಆಶಿಶ್ ನೆಹ್ರಾ ಪ್ರಕಾರ, ತಂಡದಲ್ಲಿ ಹೆಚ್ಚಿನ ಬದಲಾವಣೆಗಳಾಗುವುದಿಲ್ಲ. ವೆಬ್‌ಸೈಟ್‌ವೊಂದರ ಜೊತೆ ಮಾತನಾಡಿದ ನೆಹ್ರಾ, "ಮುಂದಿನ ವರ್ಷ ತಂಡದಲ್ಲಿ ಪುನರ್ ರಚನೆ ಇರುತ್ತದೆ ಎಂದು ನಾನು ಭಾವಿಸುವುದಿಲ್ಲ" ಎಂದು ಹೇಳಿದ್ದಾರೆ. 30-35 ವರ್ಷ ವಯಸ್ಸು ಹೆಚ್ಚಲ್ಲ. ನಾನು 39 ವರ್ಷ ವಯಸ್ಸಿನವರೆಗೆ ಐಪಿಎಲ್ ಆಡಿದ್ದೇನೆ. ಬಹುಶಃ ಶೇನ್ ವ್ಯಾಟ್ಸನ್ ಕೂಡ ಮುಂದಿನ ವರ್ಷ ಸಿಎಸ್ಕೆ ಪರ ಆಡುತ್ತಾರೆ ಎಂದು ಭಾವಿಸುತ್ತೇನೆ. ಅವರನ್ನು ಹೊರತುಪಡಿಸಿ ತಂಡದಲ್ಲಿ ಹೆಚ್ಚು ಬದಲಾವಣೆ ಆಗುತ್ತದೆ ಎಂದು ನಾನು ಭಾವಿಸುವುದಿಲ್ಲ'' ಎಂದಿದ್ದಾರೆ.
ಧೋನಿಯ ಬಗ್ಗೆ ಮಾತನಾಡಿದ ನೆಹ್ರಾ, "ತಂಡವನ್ನು ತನ್ನ ದಾರಿಗೆ ಹೇಗೆ ತೆಗೆದುಕೊಳ್ಳಬೇಕೆಂದು ಅವರಿಗೆ ತಿಳಿದಿದೆ" ಎಂದು ಹೇಳಿದ್ದಾರೆ. ನಾವು ಮಾನಸಿಕವಾಗಿ ಸದೃಢವಾಗಿರುವ ವಯಸ್ಕರ ಬಗ್ಗೆ ಮಾತನಾಡುತ್ತಿದ್ದೇವೆ. ಇದು ಅವರಿಗೆ ದೊಡ್ಡ ವಿಷಯ ಎಂದು ನಾನು ಭಾವಿಸುವುದಿಲ್ಲ. ಪ್ರತಿ ಬಾರಿ ನಿಮಗೆ ಅರ್ಹತೆ ಪಡೆಯಲು ಸಾಧ್ಯವಾಗದಿದ್ದಾಗ ಟೀಕಿಸುವುದು ಸರಿ ಅಲ್ಲ. ಹಳೆಯ ಎಂ.ಎಸ್.ಧೋನಿ ಮತ್ತು ಹಳೆಯ ಸಿಎಸ್ಕೆ ತಂಡವನ್ನು ಮತ್ತೊಮ್ಮೆ ನೋಡುತ್ತೇವೆ ಎಂದು ಹೇಳಿದ್ದಾರೆ.