ETV Bharat / sports

ಮಹಿಳಾ ಐಪಿಎಲ್​... ಫೈನಲ್​ ಕದನದಲ್ಲಿ ಕೌರ್ - ಮಿಥಾಲಿ ಮುಖಾಮುಖಿ​ - ವೆಲೋಸಿಟಿ 

ಮೂರು ತಂಡಗಳ ಈ ಮಿನಿಲೀಗ್​ನಲ್ಲಿ ಮೂರು ತಂಡಗಳು ತಲಾ ಒಂದು ಗೆಲುವು ಹಾಗೂ ಒಂದು ಸೋಲು ಕಂಡಿದ್ದವು. ಆದರೆ ರನ್​ರೇಟ್​ ಆಧಾರದ ಮೇಲೆ ಹರ್ಮನ್​ ಪ್ರೀತ್​ ಕೌರ್​ ನೇತೃತ್ವದ ಸೂಪರ್​ ನೊವಾಸ್​ ಪ್ರಥಮ ಸ್ಥಾನ ಪಡೆದರೆ, ಮಿಥಾಲಿರಾಜ್​ ನೇತೃತ್ವದ ವೆಲೋಸಿಟಿ 2ನೇ ಸ್ಥಾನ ಪಡೆದು ಪೈನಲ್​ ಲಗ್ಗೆಯಿಟ್ಟವು.

ipl
author img

By

Published : May 11, 2019, 2:34 PM IST

Updated : May 11, 2019, 11:42 PM IST

ಜೈಪುರ: ಮಹಿಳಾ ಐಪಿಎಲ್​ನ ಮಿನಿ ಲೀಗ್​ನಲ್ಲಿ ಮಿಥಾಲಿ ರಾಜ್​ ಹಾಗೂ ಹರ್ಮನ್​ ಪ್ರೀತ್​ ಕೌರ್​ ನೇತೃತ್ವದ ತಂಡಗಳು ಇಂದು ಜೈಪುರದಲ್ಲಿ ನಡೆಯುವ ಫೈನಲ್​ನಲ್ಲಿ ಸೆಣಸಾಡಲಿವೆ.

ಮೂರು ತಂಡಗಳ ಈ ಮಿನಿಲೀಗ್​ನಲ್ಲಿ ಮೂರು ತಂಡಗಳು ತಲಾ ಒಂದು ಗೆಲುವು ಹಾಗೂ ಒಂದು ಸೋಲು ಕಂಡಿದ್ದವು. ಆದರೆ, ರನ್​ರೇಟ್​ ಆಧಾರದ ಮೇಲೆ ಹರ್ಮನ್​ ಪ್ರೀತ್​ ಕೌರ್​ ನೇತೃತ್ವದ ಸೂಪರ್ ​ನೊವಾಸ್​ ಪ್ರಥಮ ಸ್ಥಾನ ಪಡೆದರೆ, ಮಿಥಾಲಿರಾಜ್​ ನೇತೃತ್ವದ ವೆಲೋಸಿಟಿ 2ನೇ ಸ್ಥಾನ ಪಡೆದು ಪೈನಲ್​ ಲಗ್ಗೆಯಿಟ್ಟವು.

ಮೊದಲ ಪಂದ್ಯದಲ್ಲೇ ಗೆದ್ದು ಬೀಗಿದ್ದ ಸ್ಮೃತಿ ಮಂಧಾನ ನೇತೃತ್ವದ ಟ್ರೈಬ್ಲೇಜರ್​ ತಂಡ ಎರಡನೇ ಪಂದ್ಯದಲ್ಲಿ ಕೇವಲ 113 ರನ್​ಗಳ ಟಾರ್ಗೆಟ್​ ನೀಡಿತ್ತು. ಈ ಮೊತ್ತವನ್ನು ವೆಲೋಸಿಟಿ ಇನ್ನು 2 ಓವರ್​ ಇರುವಂತೆಯೇ ಗುರಿ ತಲುಪುವ ಮೂಲಕ ಉತ್ತಮ ರನ್​ರೇಟ್​ ಪಡೆದಿತ್ತು. ಇದರಿಂದ ತನ್ನ 2 ನೇ ಪಂದ್ಯದಲ್ಲಿ 12 ರನ್​ಗಳಿಂದ ಸೋತರೂ 2 ನೇಸ್ಥಾನ ಪಡೆದು ಫೈನಲ್​ ಪ್ರವೇಶಿಸಿದೆ.

ತಂಡದ ಬಲಾಬಲ:

ಸೂಪರ್​ನೊವಾಸ್ ತಂಡಕ್ಕೆ ಜಮೈಮಾ, ಕೌರ್​, ಡಿವೈನ್​ ಹಾಗೂ ಸೀವರ್​ ಬಲವಿದೆ. ಜೊತೆಗೆ ಅರುಂದತಿ ರೆಡ್ಡಿ, ಅನುಜಾ ಪಾಟೀಲ್, ಪೂನಮ್​ ಯಾದವ್​ ಹಾಗೂ ರಾಧಾ ಯಾಧವ್​ ರಂತಹ ಅಂತಾರಾಷ್ಟ್ರೀಯ ಮಟ್ಟದ ಬೌಲರ್​ಗಳನ್ನೊಳಗೊಂಡ ದಂಡನ್ನೇ ಹೊಂದಿದೆ.

ಮಿಥಾಲಿ ಪಡೆಯಲ್ಲಿ ಹ್ಯಾಲಿ ಮ್ಯಾಥ್ಯೂಸ್​,ಡೇನಿಯಲ್​ ವ್ಯಾಟ್, ಮಿಥಾಲಿ ರಾಜ್​ ಹಾಗೂ ವೇದ ಕೃಷ್ಣ ಮೂರ್ತಿ ಬ್ಯಾಟಿಂಗ್​ ವಿಭಾಗದ ಆಧಾರ ಸ್ಥಂಭವಾಗಿದ್ದರೆ, ಅಮೇಲಿಯಾ ಕೌರ್​, ಜಹನಾರಾ ಅಲಾಮ್​, ಸುಷ್ಮಾ ವರ್ಮಾ,ಏಕ್ತಾ ಬಿಸ್ತ್​ ಶಿಖಾ ಪಾಂಡೆ ಬೌಲಿಂಗ್​ ವಿಭಾಗದ ಶಕ್ತಿಯಾಗಿದ್ದಾರೆ.

ಎರಡೂ ತಂಡಗಳಲ್ಲೂ ಬಲಿಷ್ಠ ಆಟಗಾರರ ದಂಡನ್ನೇ ಹೊಂದಿದ್ದು ಚಾಂಪಿಯನ್​ ಯಾರಾಗಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ

Intro:Body:Conclusion:
Last Updated : May 11, 2019, 11:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.