ಸೇಂಟ್ ಲೂಸಿಯಾ : ಆಸ್ಟ್ರೇಲಿಯಾ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಅತಿಥೇಯ ವೆಸ್ಟ್ ಇಂಡೀಸ್ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಡೆರೇನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಸೋಲನ್ನಪ್ಪುವ ಮೂಲಕ ಸರಣಿ ಕೈಚೆಲ್ಲಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಉತ್ತಮ ಆರಂಭ ದೊರೆತ್ತಿತ್ತು. ಮ್ಯಾಥ್ಯು ವೇಡ್ ಮತ್ತು ನಾಯಕ ಫಿಂಚ್ 41 ರನ್ಗಳ ಜೊತೆಯಾಟವಾಡಿದರು. 23 ರನ್ಗಳಿಸಿದ್ದ ವೇಡ್ ಓಬೆಡ್ ಮೆಕ್ಕಾಯ್ ಬೌಲಿಂಗ್ಗೆ ಔಟಾಗಿ ಪೆವಿಲಿಯನ್ ಸೇರಿದರು. ಬಳಿಕ ಬಂದ ಆಟಗಾರರಾದ ಮಿಚೆಲ್ ಮಾರ್ಷ್(9), ಅಲೆಕ್ಸ್ ಕ್ಯಾರಿ(13), ಫಿಂಚ್ (33), ಹೆನ್ರಿಕ್ಸ್(33), ಜೋಶ್ ಫಿಲಿಪ್ಪೆ(1), ಟರ್ನರ್ (24) ಮತ್ತು ಔಟಾಗದೇ ಕ್ರಿಸ್ಚಿಯನ್ 1 ರನ್ ಕಲೆ ಹಾಕುವ ಮೂಲಕ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್ಗಳಿಗೆ 6 ವಿಕೆಟ್ ಕಳೆದುಕೊಂಡು ಕೇವಲ 141 ರನ್ಗಳಿಸಿತ್ತು.
-
Chris Gayle was at his very best as @windiescricket beat Australia to take an unassailable 3-0 lead.#WIvAUS https://t.co/V1uTaBCBeT
— ICC (@ICC) July 13, 2021 " class="align-text-top noRightClick twitterSection" data="
">Chris Gayle was at his very best as @windiescricket beat Australia to take an unassailable 3-0 lead.#WIvAUS https://t.co/V1uTaBCBeT
— ICC (@ICC) July 13, 2021Chris Gayle was at his very best as @windiescricket beat Australia to take an unassailable 3-0 lead.#WIvAUS https://t.co/V1uTaBCBeT
— ICC (@ICC) July 13, 2021
ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ ತಂಡಕ್ಕೆ ಕೇವಲ 142 ರನ್ಗಳ ಗುರಿ ನೀಡಿತು. ಇನ್ನು, ಬೆನ್ನತ್ತಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭಿಕ ಆಘಾತ ಎದರಾಯಿತು. ತಂಡ ಕೇವಲ 4 ರನ್ ಗಳಿಸಿದ್ದಾಗ ಆಂಡ್ರೆ ಫ್ಲೆಚರ್ ಔಟಾಗಿ ಪೆವಿಲಿಯನ್ ಹಾದಿ ತುಳಿದರು. ಬಳಿಕ ಬಂದ ದೈತ್ಯ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಲೆಂಡ್ಲ್ ಸಿಮೊನ್ಸ್ ಜೊತೆಗೂಡಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಇಬ್ಬರು ಸೇರಿ 38 ರನ್ಗಳ ಜೊತೆಯಾಟವಾಡಿದರು. ಬಳಿಕ ಲೆಂಡ್ಲ್ ಸಿಮೊನ್ಸ್ 15 ರನ್ಗಳನ್ನು ಗಳಿಸಿ ಔಟಾದರು. ನಂತರ ಬಂದ ವೆಸ್ಟ್ ಇಂಡೀಸ್ ನಾಯಕ ನಿಕೋಲಸ್ ಪೂರನ್ ಗೇಲ್ ಜೊತೆಗೂಡಿ ಜವಾಬ್ದಾರಿಯುತ ಆಟ ಪ್ರದರ್ಶಿದರು. ಗೇಲ್ ಮತ್ತು ಪೂರನ್ ಜೊತೆಯಾಟವನ್ನು ರಿಲೆ ಮೆರೆಡಿತ್ ಮುರಿದರು. ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಗೇಲ್ 38 ಎಸೆತಗಳಲ್ಲಿ 7 ಸಿಕ್ಸ್, ನಾಲ್ಕು ಬೌಂಡರಿಗಳ ನೆರವಿನಿಂದ 68 ರನ್ಗಳನ್ನು ಕಲೆ ಹಾಕಿ ಮೆರೆಡಿತ್ಗೆ ವಿಕೆಟ್ವೊಪ್ಪಿಸಿದರು.
ಬಳಿಕ ಬಂದ ಬ್ರಾವೋ 7 ರನ್ಗಳನ್ನು ಕಲೆ ಹಾಕಿ ಔಟಾದರು. 32 ರನ್ಗಳನ್ನು ಕಲೆ ಹಾಕಿದ್ದ ನಾಯಕ ಪೂರನ್ ಮತ್ತು 7 ರನ್ಗಳನ್ನು ಕಲೆ ಹಾಕಿದ್ದ ಆ್ಯಂಡ್ರೆ ರೆಸೆಲ್ ತಂಡವನ್ನು ಗೆಲುವಿನ ದಡ ಸೇರಿಸಿದರು. ವೆಸ್ಟ್ ಇಂಡೀಸ್ ಕೇವಲ 14.5 ಓವರ್ಗಳಿಗೆ 4 ವಿಕೆಟ್ಗಳನ್ನು ಕಳೆದುಕೊಂಡು 142 ರನ್ಗಳನ್ನು ಕಲೆ ಹಾಕುವ ಮೂಲಕ ಆಸ್ಟ್ರೇಲಿಯಾ ನೀಡಿದ್ದ ಗುರಿಯನ್ನು ಮುಟ್ಟಿತು. ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ವೆಸ್ಟ್ ಇಂಡೀಸ್ ತಂಡ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿತು.