ನಾರ್ತ್ ಪಾಯಿಂಟ್ (ಆಂಟಿಗುವಾ): ಡರೆನ್ ಬ್ರಾವೋ ಮತ್ತು ಪೋಲಾರ್ಡ್ ಅದ್ಭುತ ಜೊತೆಯಾಟದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಶ್ರೀಲಂಕಾ ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ 5 ವಿಕೆಟ್ಗಳ ಭರ್ಜರಿ ಗೆಲವು ಸಾಧಿಸಿದೆ. ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನ ವೆಸ್ಟ್ ಇಂಡೀಸ್ 3-0 ದಿಂದ ಕೈ ವಶ ಮಾಡಿಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಲಂಕಾ, ಕ್ಯಾಪ್ಟನ್ ಕರುಣರತ್ನೇ ಮತ್ತು ಗುಣತಿಲಕ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ಗೆ ಈ ಜೋಡಿ 68 ರನ್ ಕಲೆಹಾಕಿತು. 36 ರನ್ ಗಳಿಸಿದಾಗ ಗುಣತಿಲಕ್ ಜೋಶಫ್ಗೆ ವಿಕೆಟ್ ಒಪ್ಪಿಸಿದರು. ಕರುಣರತ್ನೇ 31 ರನ್ಗಳಿಸಿ ಔಟಾದರೆ, ನಂತರ ಬಂದ ಯಾವೋಬ್ಬ ಬ್ಯಾಟ್ಸ್ಮನ್ ತಂಡಕ್ಕೆ ಹೇಳಿಕೊಳ್ಳುವಂತಹ ಕೊಡುಗೆ ನೀಡಲಿಲ್ಲ.
-
West Indies win by five wickets with nine balls to spare 👏
— ICC (@ICC) March 14, 2021 " class="align-text-top noRightClick twitterSection" data="
Fifties from @KieronPollard55 and @shaidhope, and a century from @DMBravo46 round out a 3-0 clean sweep.#WIvSL | https://t.co/BSsi3baS1F pic.twitter.com/qPJcOs5fVr
">West Indies win by five wickets with nine balls to spare 👏
— ICC (@ICC) March 14, 2021
Fifties from @KieronPollard55 and @shaidhope, and a century from @DMBravo46 round out a 3-0 clean sweep.#WIvSL | https://t.co/BSsi3baS1F pic.twitter.com/qPJcOs5fVrWest Indies win by five wickets with nine balls to spare 👏
— ICC (@ICC) March 14, 2021
Fifties from @KieronPollard55 and @shaidhope, and a century from @DMBravo46 round out a 3-0 clean sweep.#WIvSL | https://t.co/BSsi3baS1F pic.twitter.com/qPJcOs5fVr
ಮದ್ಯಮ ಕ್ರಮಾಂಕದಲ್ಲಿ ಆಶೆನ್ ಬಂಡರಾ ಹಾಗೂ ವನಿಂದು ಹಸರಂಗ ಜೋಡಿ ಶತಕದ ಜೋತೆಯಾಟವಾಡಿ ತಂಡವನ್ನ, ಸುಭದ್ರ ಸ್ಥಿತಿಗೆ ತಂದರು. 74 ಬೌಲ್ಗಳಲ್ಲಿ 3 ಬೌಂಡರಿ ಒಂದು ಸಿಕ್ಸರ್ ನೇರವಿನಿಂದ ಆಶೆನ್ ಬಂಡರಾ 55 ರನ್ಗಳಿಸಿದರೆ, ವನಿಂದು ಹಸರಂಗ ಅಬ್ಬರದ ಬ್ಯಾಟಿಂಗ್ ಮಾಡಿ ಕೇವಲ 60 ಎಸತಗಳಲ್ಲಿ 7 ಬೌಂಡರಿ, 3 ಭರ್ಜರಿ ಸಿಕ್ಸರ್ ನೇರವಿನಿಂದ 80 ರನ್ ಬಾರಿಸಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದರು. ಅಂತಿಮ ವಾಗಿ ಶ್ರೀಲಂಕಾ ತಂಡ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 274 ರನ್ಗಳಿಸಿತು. ವಿಂಡೀಸ್ ಪರ ಅಕೀಲ್ ಹೊಸೈನ್ 3/33, ಹಾಗೂ ಜೋಶಫ್ 1/51 ವಿಕೆಟ್ ಪಡೆದು ಮಿಂಚಿದರು.
ಈ ಸ್ಪರ್ಧಾತ್ಮಕ ಮೊತ್ತವನ್ನ ಬೆನ್ನಟ್ಟಿದ ವಿಂಡೀಸ್ ತಂಡಕ್ಕೆ ಉತ್ತಮ ಆರಂಭ ದೊರಕಲಿಲ್ಲ ವೆಸ್ಟ್ ಇಂಡೀಸ್ ಓಪನರ್ ಲೂಯಿಸ್ ಕೇವಲ 13 ರನ್ಗಳಿಸಿ ಔಟಾದರು. ನಂತರ ಬಂದ ಜೇಸನ್ ಮೊಹಮ್ಮದ್ ಅವರು ಕೂಡಾ ಕೇವಲ 8 ರನ್ಗಳಿಸಿ ಔಟಾದರು. ವಿಂಡೀಸ್ ತಂಡ ಕೇವಲ 39 ರನ್ಗೆ ಪ್ರಮುಕ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಓದಿ : 2ನೇ ಟಿ-20 ಪಂದ್ಯಕ್ಕೂ ಮುನ್ನ 'ಎಬಿಡಿ' ನೀಡಿದ್ದ ಸಲಹೆ ಬ್ಯಾಟಿಂಗ್ ಯಶಸ್ಸಿಗೆ ನೆರವಾಯ್ತು: ಕೊಹ್ಲಿ
ಆಗ ಶೈ ಹೋಪ್ ಜೋತೆಗೂಡಿದ ಡರೆನ್ ಬ್ರಾವೋ ತಂಡವನ್ನ ಸಂಕಷ್ಟದಿಂದ ಪಾರುಮಾಡಿದರು. ಈ ಜೋಡಿ ಶತಕದ ಜೋತೆಯಾಟವಾಡಿ ತಂಡವನ್ನ ಗೆಲುವಿನ ಕಡೆ ಕೊಂಡ್ಯೊದರು. ಶೈ ಹೋಪ್ 64 ರನ್ಗಳಿಸದರೆ, ಬ್ರಾವೋ ಶತಕ ಸಿಡಿಸಿ ಮಿಂಚಿದರು. ಇತ್ತ ಅಂತಿಮ ಹಂತದಲ್ಲಿ ಬ್ಯಾಟಿಂಗ್ ಬಂದ ನಾಯಕ ಪೋಲಾರ್ಡ್ ಅರ್ಧಶತಕ ಸಿಡಿಸಿ ತಂಡವನ್ನ ಗೆಲುವಿ ದಡ ಮುಟ್ಟಿಸಿದರು. ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡ 48.3 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 276 ರನ್ಗಳಿಸುವ ಮೂಲಕ ಗೆಲುವಿನ ಕೇಕೆ ಹಾಕಿತು. ಇನ್ನೂ ಲಂಕಾ ಪರ ಲಕ್ಮಲ್ 2 ವಿಕೆಟ್ ಪಡೆದರು.