ಚಟ್ಟೋಗ್ರಾಮ್ (ಬಾಂಗ್ಲಾದೇಶ): ನಾಳೆಯಿಂದ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ 2 ಟೆಸ್ಟ್ ಪಂದ್ಯಗಳಿಗೆ ಬಾಂಗ್ಲಾದೇಶ ತಂಡ ಸಿದ್ಧಗೊಂಡಿದೆ. ಈ ನಡುವೆ ತಂಡಕ್ಕೆ ಆಲ್ರೌಂಡರ್ ಶಕೀಬ ಅಲ್ ಹಸನ್ ಎಂಟ್ರಿಕೊಟ್ಟಿದ್ದು, ಇದು ತಂಡಕ್ಕೆ ಇನ್ನಷ್ಟು ಬಲತುಂಬಲಿದೆ ಎಂದು ನಾಯಕ ಮೊಮಿನುಲ್ ಹಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು 2019ರಲ್ಲಿ ಕ್ರಿಕೆಟ್ ಬೆಟ್ಟಿಂಗ್ ಬುಕ್ಕಿಗಳ ಸಂಪರ್ಕಕ್ಕೆ ಬಂದ ಆರೋಪದಡಿ ಎರಡು ವರ್ಷಗಳ ನಿಷೇಧ ಹಾಗೂ 1 ವರ್ಷ ಅಮಾನತಿಗೆ ಒಳಗಾಗಿದ್ದ ಶಕೀಬ ಅಲ್ ಹಸನ್ ಇದೀಗ ಸರಣಿಯಲ್ಲಿ ಆಡುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಎರಡು ಟೆಸ್ಟ್ ಪಂದ್ಯದಲ್ಲೂ ಆಡಲಿದ್ದಾರೆ.
ಕಳೆದ ತಿಂಗಳಲ್ಲಿ ನಡೆದ ವಿಂಡೀಸ್ ನಡುವಿನ ಏಕದಿನ ಪಂದ್ಯದ ವೇಳೆ ಉತ್ತಮ ಆಟವಾಡಿದ್ದ ಶಕೀಬ ಅಲ್, ಟೆಸ್ಟ್ನಲ್ಲೂ ಉತ್ತಮ ಫಾರ್ಮ್ ಕಂಡುಕೊಳ್ಳಲಿದ್ದಾರೆ ಅವರು ಟೂ ಇನ್ ಒನ್ ಆಟಗಾರ ಎಂದು ನಾಯಕ ಹೊಗಳಿದ್ದಾರೆ.
ಅಂತಹ ಆಟಗಾರ ಇರುವುದು ಯಾವುದೇ ತಂಡಕ್ಕೆ ವರದಾನವಿದ್ದಂತೆ. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿಯೂ ಉತ್ತಮ ಆಟಗಾರ. ಅವರ ಮರಳುವಿಕೆಯು ತಂಡ ಇನ್ನಷ್ಟು ಸಮತೋಲನವಾಗಲು ಸಹಾಯಕವಾಗಿದೆ ಎಂದಿದ್ದಾರೆ.
ಶಕೀಬ್ ಟೆಸ್ಟ್ನಲ್ಲಿ 39.40 ಬ್ಯಾಟಿಂಗ್ ಸರಾಸರಿ ಹೊಂದಿದ್ದರೆ, 31.12ರಷ್ಟು ಬೌಲಿಂಗ್ ಸರಾಸರಿ ಹೊಂದಿದ್ದಾರೆ.
ಇದನ್ನೂ ಓದಿ: ಟೆಸ್ಟ್ ಚಾಂಪಿಯನ್ ಫೈನಲ್ಗೆ ಕೀವಿಸ್ ಪಡೆ ಲಗ್ಗೆ, ಇದೀಗ ಭಾರತ - ಇಂಗ್ಲೆಂಡ್ ನಡುವೆ ಫೈಟ್!