ಮುಂಬೈ : ಭಾರತ-ನ್ಯೂಜಿಲೆಂಡ್ ನಡುವಿನ 2 ಟೆಸ್ಟ್ ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ ಕಿವೀಸ್‌ನ ಸ್ಪಿನ್ನರ್ ಅಜಾಜ್ ಪಟೇಲ್ ಟೀಂ ಇಂಡಿಯಾದ 10 ವಿಕೆಟ್‌ಗಳನ್ನು ಪಡೆದುಕೊಳ್ಳುವ ಮೂಲಕ ಮುಂಬೈನ ವಾಂಖೆಡೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿ ಅಜಾಜ್ ಪಟೇಲ್ 10 ವಿಕೆಟ್ ಪಡೆದ ಮೂರನೇ ಆಟಗಾರರಾಗಿದ್ದಾರೆ. ಈ ಮೊದಲು 1956ರಲ್ಲಿ ಇಂಗ್ಲೆಂಡ್‌ನ ಜಿಮ್ ಲೇಕರ್ ಹಾಗೂ 1999ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡದ ಕನ್ನಡಿಗ ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ್ದರು.
ಅಜಾಜ್ ಪಟೇಲ್ ಮೂಲತಃ ಮುಂಬೈನವರು ಎಂಬುದು ಮತ್ತೊಂದು ವಿಶೇಷವಾಗಿದೆ. ತಾನಾಡಿದ 12ನೇ ಟೆಸ್ಟ್ ಪಂದ್ಯದಲ್ಲೇ ಮಹತ್ವದ ದಾಖಲೆ ಮಾಡಿದ್ದಾರೆ.