ETV Bharat / sports

IND vs NZ 1st T20: ಕಿವೀಸ್‌ ವಿರುದ್ಧ ಜಯದೊಂದಿಗೆ ರೋಹಿತ್‌-ದ್ರಾವಿಡ್‌ ಯುಗಾರಂಭ - jaipur

ಕಿವೀಸ್‌ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್‌ಗಳ ಗೆಲುವು ಸಾಧಿಸಿದೆ. ನಾಯಕ ರೋಹಿತ್‌ ಶರ್ಮಾ ಹಾಗೂ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಅವರಿಗೆ ಇದು ಮೊದಲ ಗೆಲುವಾಗಿದೆ.

Ind vs Nz t-20: India won by 5 wkts
Ind vs Nz: ಟೀಂ ಇಂಡಿಯಾಗೆ ಐದು ವಿಕೆಟ್‌ಗಳ ಗೆಲುವು
author img

By

Published : Nov 17, 2021, 10:59 PM IST

ರಾಜಸ್ಥಾನ: ಜೈಪುರದಲ್ಲಿ ನಡೆದ ನ್ಯೂಜಿಲೆಂಡ್‌ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಶುಭಾರಂಭ ಮಾಡಿದ್ದಾರೆ. ಕಿವೀಸ್‌ ನೀಡಿದ 165 ರನ್‌ಗಳ ಗುರಿ ಬೆನ್ನಟ್ಟಿದ ರೋಹಿತ್‌ ಪಡೆ 19.4 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಆರಂಭಿಕರಾಗಿ ಕಣಕ್ಕಿಳಿದಿದ್ದ ಕೆ.ಎಲ್‌.ರಾಹುಲ್‌ ಹಾಗೂ ರೋಹಿತ್‌ ಶರ್ಮಾ 50 ರನ್‌ಗಳ ಜೊತೆಯಾಟದ ಮೂಲಕ ಉತ್ತಮ ಆರಂಭ ನೀಡಿದರು. ತಲಾ ಒಂದು ಸಿಕ್ಸರ್‌ ಹಾಗೂ ಬೌಂಡರಿಯೊಂದಿಗೆ 15 ರನ್‌ಗಳಿಸಿದ್ದ ರಾಹುಲ್‌ ಆರನೇ ಓವರ್‌ ಮೊದಲ ಎಸೆತದಲ್ಲಿ ಸ್ಯಾಂಟ್ನರ್‌ಗೆ ವಿಕೆಟ್‌ ಒಪ್ಪಿಸಿದರು.

ಬಳಿಕ ರೋಹಿತ್‌ ಜೊತೆಗೂಡಿದ ಸೂರ್ಯಕುಮಾರ್‌ ಯಾದವ್‌ ಸ್ಫೋಟಕ ಆಟವನ್ನು ಮುಂದುವರಿಸಿದರು. ರೋಹಿತ್‌ 36 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್‌ಗಳೊಂದಿಗೆ 48 ರನ್‌ಗಳಿಸಿ ಬೌಲ್ಟ್‌ ಓವರ್‌ನಲ್ಲಿ ರಚಿನ್‌ ರವೀಂದ್ರಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಸೂರ್ಯಕುಮಾರ್‌ 40 ಎಸೆತಗಳನ್ನು ಎದುರಿಸಿ 6 ಬೌಂಡರಿ, 3 ಸಿಕ್ಸರ್‌ ಸೇರಿ 62 ರನ್‌ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಶ್ರೇಯಸ್‌ ಅಯ್ಯರ್‌ 8 ಎಸೆತಗಳಲ್ಲಿ 5 ರನ್‌ಗಳಿಸಿ ಟೀಂ ಸೌಥಿಗೆ ವಿಕೆಟ್‌ ಒಪ್ಪಿಸಿದರು. ರಿಷಬ್‌ ಪಂತ್‌ 17 ಎಸೆತಗಳಿಂದ ಎರಡು ಬೌಂಡರಿ ಸೇರಿ 17 ರನ್‌ ಗಳಿಸಿದರು.

ಕಿವೀಸ್‌ ಪರ ಟ್ರೆಂಟ್‌ ಬೌಲ್ಟ್‌ 2 ವಿಕೆಟ್‌ ಪಡೆದರೆ ನಾಯಕ ಟಿಂ ಸೌಥಿ, ಸ್ಯಾಂಟ್ನರ್‌ ಹಾಗೂ ಡೇರಿಲ್ ಮಿಚೆಲ್‌ ತಲಾ 1 ವಿಕೆಟ್‌ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.