ಲಂಡನ್: ಎರಡನೇ ಟೆಸ್ಟ್ನ ಕೊನೆಯ ದಿನ ಮೊಹಮ್ಮದ್ ಶಮಿ ಅರ್ಧಶತಕ ಸಿಡಿಸುವ ಮೂಲಕ ಸೋಲುವ ಭೀತಿಯಲ್ಲಿದ್ದ ಭಾರತ ತಂಡಕ್ಕೆ ಚೇತರಿಕೆ ತಂದುಕೊಟ್ಟಿದ್ದಲ್ಲದೇ ಪಂದ್ಯವನ್ನು ರೋಚಕ ಹಂತಕ್ಕೆ ಕೊಂಡೊಯ್ದಿದ್ದಾರೆ.
ನಾಲ್ಕನೇ ದಿನ 6 ವಿಕೆಟ್ ಕಳೆದುಕೊಂಡು 181ರನ್ಗಳಿಸಿದ್ದ ಭಾರತ ತಂಡ ಇಂದು 298 ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿತು. ಶಮಿ 56 ಮತ್ತು ಬುಮ್ರಾ 34 ರನ್ಗಳಿಸಿ 272ರನ್ಗಳ ಸ್ಪರ್ಧಾತ್ಮಕ ಗುರಿ ನೀಡಲು ಕಾರಣರಾದರು.
ಇನ್ನು 5ನೇ ಬ್ಯಾಟಿಂಗ್ ಆರಂಭಿಸಿದ ಭಾರತ ಕೇವಲ 13 ರನ್ಗಳಿಸುವಷ್ಟರಲ್ಲಿ ಆಪತ್ಪಾಂಧವನಾಗಿದ್ದ ರಿಷಭ್ ಪಂತ್(22) ವಿಕೆಟ್ ಕಳೆದುಕೊಂಡಿತು. ಅವರು ರಾಬಿನ್ಸನ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ಗೆ ಕ್ಯಾಚ್ ನೀಡಿ ಔಟಾಗುವ ಮೂಲಕ ಭಾರತೀಯ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ನಿನ್ನೆ 4 ರನ್ಗಳಿಸಿ ಔಟಾಗದೇ ಉಳಿದಿದ್ದ ಇಶಾಂತ್ ಶರ್ಮಾ 16 ರನ್ಗಳಿಸಿ ರಾಬಿನ್ಸನ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು.
-
India have declared on 298/8!
— ICC (@ICC) August 16, 2021 " class="align-text-top noRightClick twitterSection" data="
England will chase a target of 272 for a victory 🎯#WTC23 | #ENGvIND | https://t.co/rhWT865o91 pic.twitter.com/GqnfTRbIdv
">India have declared on 298/8!
— ICC (@ICC) August 16, 2021
England will chase a target of 272 for a victory 🎯#WTC23 | #ENGvIND | https://t.co/rhWT865o91 pic.twitter.com/GqnfTRbIdvIndia have declared on 298/8!
— ICC (@ICC) August 16, 2021
England will chase a target of 272 for a victory 🎯#WTC23 | #ENGvIND | https://t.co/rhWT865o91 pic.twitter.com/GqnfTRbIdv
ಆದರೆ, 9ನೇ ವಿಕೆಟ್ಗೆ ಒಂದಾದ ಬುಮ್ರಾ(34) ಮತ್ತು ಶಮಿ(56) ಪಂದ್ಯದ ಗತಿಯನ್ನೇ ಬದಲಾಯಿಸಿದರು. ಈ ಜೋಡಿ 9ನೇ ವಿಕೆಟ್ ಜೊತೆಯಾಟದಲ್ಲಿ 77 ರನ್ಗಳ ಜೊತೆಯಾಟ ನೀಡಿ ಮುನ್ನಡೆಯನ್ನು 259ಕ್ಕೆ ಕೊಂಡೊಯ್ದಿತು. ಶಮಿ 70 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 52 ರನ್ಗಳಿಸಿದರೆ, ಬುಮ್ರಾ 58 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 30 ರನ್ಗಳಿಸಿದರು.
ನಾಲ್ಕನೇ ದಿನ 27 ರನ್ಗಳ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 55 ರನ್ಗಳಾಗುವಷ್ಟರಲ್ಲಿ ರೋಹಿತ್ (21), ಕೆ.ಎಲ್ ರಾಹುಲ್ (5) ಮತ್ತು ನಾಯಕ ವಿರಾಟ್ ಕೊಹ್ಲಿ (20) ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. ಆದರೆ 49.3 ಓವರ್ಗಳ ಬ್ಯಾಟಿಂಗ್ ಮಾಡಿದ್ದ ಚೇತೇಶ್ವರ ಪೂಜಾರಾ (45) ಹಾಗೂ ಉಪನಾಯಕ ರಹಾನೆ (61) ರನ್ಗಳ ಜವಾಬ್ದಾರಿಯುತ ಆಟವಾಡಿ ತಂಡಕ್ಕೆ ಸ್ವಲ್ಪ ನೆರವಾಗಿದ್ದರು.
ಇದನ್ನು ಓದಿ:ನೀವು ನನ್ನ ಕೊಂದರೂ ಸರಿ, ಇಂಗ್ಲೆಂಡ್ ಗೆಲ್ಲಲಿದೆ: ಆಕಾಶ್ ಚೋಪ್ರಾ ಭವಿಷ್ಯ