ಗಬ್ಬಾ (ಬ್ರಿಸ್ಬೇನ್): ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ದಾಳಿಗೆ ತತ್ತರಿಸಿದ ಆಂಗ್ಲನ್ನರು 147 ರನ್‌ಗಳಿಗೆ ಆಲೌಟ್ ಆಗಿದ್ದಾರೆ. ಪ್ಯಾಟ್ ಕಮಿನ್ಸ್ ಮೊದಲ ಇನ್ನಿಂಗ್ಸ್‌ನಲ್ಲೇ 5 ವಿಕೆಟ್ ಪಡೆದರು.
ಇಂಗ್ಲೆಂಡ್ ಪರ ಆರಂಭಿಕನಾಗಿ ಕಣಕ್ಕಿಳಿದ್ದ ರೋರಿ ಬರ್ನ್ಸ್ ಪಂದ್ಯದ ಮೊದಲ ಓವರ್ ಮೊದಲ ಎಸೆತದಲ್ಲೇ ಮಿಚೆಲ್ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಡೇವಿಡ್ ಮಲನ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್ ಕ್ರಮವಾಗಿ 6, 0, 5 ರನ್‌ಗಳಿಸಿದರು. ಮತ್ತೊಬ್ಬ ಆರಂಭಿಕ ಹಸೀಬ್ ಹಮೀದ್ 25, ಆಲಿ ಪೋಪ್ 35, ವಿಕೆಟ್ ಕೀಪರ್ ಜೋಸ್ ಬಟ್ಲರ್ 39 ರನ್ ಗಳಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಕ್ರಿಸ್ ವೋಕ್ಸ್ 21 ರನ್ ಗಳಿಸಿದರೆ ಆಲಿ ರಾಬಿನ್ಸನ್ 0, ಮಾರ್ಕ್ ವುಡ್ 8, ಜ್ಯಾಕ್ ಲೀಚ್ 2 ರನ್ ಗಳಿಸಿದರು.
ಆಸೀಸ್ ಪರ ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್ ತಲಾ 2 ವಿಕೆಟ್ ಪಡೆದರೆ ಕ್ಯಾಮರನ್ ಗ್ರೀನ್ 1 ವಿಕೆಟ್ ಉರುಳಿಸಿದರು.
ಇದನ್ನೂ ಓದಿ: Aus vs Eng The Ashes 1st Test: ಮೊದಲ ಎಸೆತದಲ್ಲೇ ಆಂಗ್ಲರಿಗೆ ಸ್ಟಾರ್ಕ್ ಶಾಕ್; 4 ವಿಕೆಟ್ ಪತನ