ಇಂಗ್ಲೆಂಡ್: ಆತಿಥೇಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭಗೊಳ್ಳಲು ಕೆಲ ವಾರಗಳು ಬಾಕಿ ಉಳಿದಿದ್ದು, ಇದರ ಬೆನ್ನಲ್ಲೇ ಟೀಂ ಇಂಡಿಯಾ ತಂಡಕ್ಕೆ ಆಘಾತ ಎದುರಾಗಿದೆ. ಆರಂಭಿಕ ಆಟಗಾರ ಶುಬ್ಮನ್ ಗಿಲ್ ಗಾಯಗೊಂಡಿದ್ದು, ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ನ್ಯೂಜಿಲ್ಯಾಂಡ್ ವಿರುದ್ಧ ನಡೆದಿದ್ದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಉತ್ತಮ ಆರಂಭ ಒದಗಿಸುವಲ್ಲಿ ಯಶಸ್ವಿಯಾಗಿದ್ದ ಶುಬ್ಮನ್ ಗಿಲ್, ಹೆಚ್ಚಿನ ಸ್ಕೋರ ದಾಖಲು ಮಾಡುವಲ್ಲಿ ವಿಫಲಗೊಂಡಿದ್ದರು. ಆದರೆ, ಇದೀಗ ಅವರು ಗಾಯಗೊಂಡಿದ್ದು, ಮೊದಲ ಟೆಸ್ಟ್ ಅಥವಾ ಸಂಪೂರ್ಣ ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಇದೆ.
ಇದನ್ನೂ ಓದಿರಿ: ಮದುವೆ ಬೇಡ ಎಂದು ಮರ್ಮಾಂಗ ಕತ್ತರಿಸಿಕೊಂಡ ಯುವಕ... ಕಾರಣ?
21 ವರ್ಷದ ಆರಂಭಿಕ ಆಟಗಾರನಿಗೆ ಯಾವ ಸ್ವರೂಪದಲ್ಲಿ ಗಾಯವಾಗಿದೆ ಎಂದು ತಿಳಿದು ಬಂದಿಲ್ಲ. ದೊಡ್ಡ ಮಟ್ಟದ ಸಮಸ್ಯೆಯಾಗಿದ್ದರೆ ಟೀಂ ಇಂಡಿಯಾಗೆ ಹೆಚ್ಚಿನ ತೊಂದರೆಯಾಗುವ ಸಾಧ್ಯತೆ ಇದೆ. ಇನ್ನು ಶುಬ್ಮನ್ ಗಿಲ್ ತಂಡದಿಂದ ಹೊರಗುಳಿದರೆ ಕನ್ನಡಿಗರಾದ ಮಯಾಂಕ್ ಅಗರವಾಲ್ ಅಥವಾ ಕೆ.ಎಲ್ ರಾಹುಲ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲಿದ್ದಾರೆ.