ದುಬೈ : ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಮೈದಾನದಲ್ಲಿ ಫೀಲ್ಡಿಂಗ್ ವೇಳೆ ಮತ್ತೊಬ್ಬ ಆಟಗಾರನಿಗೆ ಡಿಕ್ಕಿ ಹೊಡೆದೆ ಪ್ರಜ್ಞಾಹೀನರಾಗಿದ್ದರು. ಇದೀಗ ಚೇತರಿಸಿಕೊಳ್ಳುತ್ತಿರುವ ಅವರು ಟೂರ್ನಿಯಿಂದ ಹೊರಬಿದ್ದಿದ್ದು, ತವರಿಗೆ ಮರಳಿದ್ದಾರೆ. ಭಾನುವಾರ ಕ್ವೆಟ್ಟಾ ಗ್ಲಾಡಿಯೇಟರ್ ತಂಡ ಪೇಶಾವರ ಜಲ್ಮಿ ತಂಡದ ವಿರುದ್ಧ ಆಡುವ ವೇಳೆ ಈ ಘಟನೆ ನಡೆದಿತ್ತು.
ಚೆಂಡನ್ನು ಹಿಡಿಯುವ ಯತ್ನದಲ್ಲಿ ವೇಗವಾಗಿ ಓಡಿ ಡೈವ್ ಮೂಲಕ ತಡೆಯಲು ಪ್ರಯತ್ನಿಸಿದಾಗ ಪ್ಲೆಸಿಸ್ ತಲೆಗೆ ಮತ್ತೊಂದು ಕಡೆಯಿಂದ ಓಡಿಬಂದ ಮೊಹಮ್ಮದ್ ಹಸ್ನೈನ್ ಅವರ ಮಂಡಿ ಬಡಿದಿದ್ದರಿಂದ ದಕ್ಷಿಣ ಆಫ್ರಿಕಾದ ಆಟಗಾರ ಮೈದಾನದಲ್ಲೇ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.
-
Injured @faf1307 du plessis tekan to hospital after nasty on- field collision in pakistan super league
— 🇮🇳♥️MSDhoni the legend™♥️🇮🇳 (@Msdhoni07fan) June 13, 2021 " class="align-text-top noRightClick twitterSection" data="
Get well soon @faf1307 pic.twitter.com/ThiT0gYBDx
">Injured @faf1307 du plessis tekan to hospital after nasty on- field collision in pakistan super league
— 🇮🇳♥️MSDhoni the legend™♥️🇮🇳 (@Msdhoni07fan) June 13, 2021
Get well soon @faf1307 pic.twitter.com/ThiT0gYBDxInjured @faf1307 du plessis tekan to hospital after nasty on- field collision in pakistan super league
— 🇮🇳♥️MSDhoni the legend™♥️🇮🇳 (@Msdhoni07fan) June 13, 2021
Get well soon @faf1307 pic.twitter.com/ThiT0gYBDx
ಮಾರನೆಯ ದಿನ ಟ್ವೀಟ್ ಮಾಡಿದ್ದ ಅವರು, ತಾವೂ ಹುಷಾರಾಗಿರುವುದಾಗಿ ತಿಳಿಸಿದ್ದರು. ಆದರೆ, ಜೋರಾಗಿ ಡಿಕ್ಕಿಯಾದ ಪರಿಣಾಮ ಕೆಲವು ನೆನಪುಗಳನ್ನು ಕಳೆದುಕೊಂಡಿದ್ದೆ ಎಂದು ಡುಪ್ಲೆಸಿಸ್ ಪೋಸ್ಟ್ ಮಾಡಿದ್ದರು. ಇದೀಗ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ.
ಈಗಾಗಲೇ ಕ್ವೆಟ್ಟಾ ತಂಡದಲ್ಲಿದ್ದ ಆ್ಯಂಡ್ರೆ ರಸೆಲ್ ಕೂಡ ಚೆಂಡು ಹೆಲ್ಮೆಟ್ಗೆ ಬಡಿದಿದ್ದರಿಂದ ನಂತರದ ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ಮತ್ತೊಬ್ಬ ವಿದೇಶಿ ಆಟಗಾರ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
ಇದನ್ನು ಓದಿ: ಚೆಂಡು ಹೆಲ್ಮೆಟ್ಗೆ ಬಡಿದು ಗಾಯಗೊಂಡ ಆ್ಯಂಡ್ರೆ ರಸೆಲ್: ವಿಡಿಯೋ