ಇಂದೋರ್(ಮಧ್ಯ ಪ್ರದೇಶ): ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಹೊರತಾಗಿಯೂ, ಅವರ ಜನಪ್ರಿಯತೆ ಕುಂದಿಲ್ಲ. ಮಾಹಿ ಹುಟ್ಟುಹಬ್ಬದಂದು ಇಂದೋರ್ ಮೂಲದ ಯುವತಿವೋರ್ವಳು ತನ್ನ ಬೆನ್ನ ಮೇಲೆ ಕೂಲ್ ಕೂಲ್ ಕ್ಯಾಪ್ಟನ್ ಧೋನಿ ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾಳೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಎಂದೇ ಹೆಸರುವಾಸಿಯಾಗಿರುವ ಎಂ.ಎಸ್. ಮಹೇಂದ್ರ ಸಿಂಗ್ ಧೋನಿ ನಿನ್ನೆಯಷ್ಟೇ ಬರ್ತಡೇ ಆಚರಿಸಿಕೊಂಡಿದ್ದಾರೆ. ಅವರ 40 ನೇ ಹುಟ್ಟುಹಬ್ಬದ ಪ್ರಯುಕ್ತ ನೀತು ಕುಶ್ವಾಹ ಎಂಬ ಯುವತಿ ತಮ್ಮ ಬೆನ್ನ ಮೇಲೆ ಮಾಹಿ ಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ನೀತು, ನನಗೆ ಮಾಹಿಯನ್ನು ಭೇಟಿಯಾಗಬೇಕು, ಅವರೊಂದಿಗೆ ಮಾತಾಡಬೇಕು ಎಂಬ ಆಸೆ ಇತ್ತು. ಎರಡು ಬಾರಿ ಭೇಟಿ ಮಾಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಹಾಗಾಗಿಯೇ ಅವರ ಹುಟ್ಟುಹಬ್ಬದಂದು ನೆನಪಿಗಾಗಿ ಟ್ಯಾಟೂ ಹಾಕಿಸಿಕೊಂಡಿದ್ದೇನೆ. ನಾನು ಅವರ ದೊಡ್ಡ ಅಭಿಮಾನಿಯಲ್ಲ. ಆದರೆ, ನನ್ನ ಕೊನೆಯ ಉಸಿರಿರುವವರೆಗೂ ಅವರಿಗೆ ಅರ್ಪಿತವಾಗಿದ್ದೇನೆ. ಧೋನಿ ನಿವೃತ್ತಿಯಾದಾಗ ನಾನು ಸಾಯಬೇಕೆನ್ನುವಷ್ಟು ಹತಾಶಳಾಗಿದ್ದೆ. ಆದರೆ, ಇಂದು ಅವರ ಬರ್ತಡೇ, ಅವರ ಚಿತ್ರವನ್ನೇ ನನ್ನ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದೇನೆ. ಹ್ಯಾಪಿ ಬರ್ತಡೇ ಮಾಹಿ ಎಂದಿದ್ದಾರೆ.
ಇದನ್ನೂ ಓದಿ:40ನೇ ಹುಟ್ಟುಹಬ್ಬದ ಸಂಭ್ರಮ: ಮಹೇಂದ್ರ ಸಿಂಗ್ ಧೋನಿ ಯಶೋಗಾಥೆ
ಧೋನಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ. 1981, ಜುಲೈ 7 ರಂದು ರಾಜಸ್ಥಾನದ ರಾಂಚಿಯಲ್ಲಿ ಜನಿಸಿದರು.