ಇಂದೋರ್: ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ತಿರುಗೇಟು ನೀಡಿರುವ ಆಸ್ಟ್ರೇಲಿಯಾ 9 ವಿಕೆಟ್ಗಳ ಗೆಲುವಿನ ನಗೆ ಬೀರಿತು. ಸ್ಪಿನ್ ಸ್ನೇಹಿ ಪಿಚ್ನಲ್ಲಿ 75 ರನ್ಗಳ ಅಲ್ಪ ಗುರಿ ಪಡೆದ ಆಸೀಸ್ ಕೇವಲ ಒಂದು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಇದರೊಂದಿಗೆ ನಾಲ್ಕು ಪಂದ್ಯಗಳ ಸರಣಿಯಲ್ಲಿ ಮೊದಲ ಗೆಲುವು ಕಂಡಿದೆ.
ಮೂರನೇ ದಿನ 75 ರನ್ ಗೆಲುವಿನ ಗುರಿಯೊಂದಿಗೆ ಮೈದಾನಕ್ಕಿಳಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಆಘಾತಕ್ಕೊಳಗಾಗಿತು. ಮೊದಲ ಓವರ್ ಎಸೆದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎರಡನೇ ಎಸೆತದಲ್ಲೇ ಉಸ್ಮಾನ್ ಖವಾಜಾ ಅವರ ವಿಕೆಟ್ ಕಬಳಿಸಿದರು. ಡಿಫೆನ್ಸ್ ಮಾಡುವ ಯತ್ನದಲ್ಲಿ ಖವಾಜಾ ವಿಕೆಟ್ ಕೀಪರ್ ಭರತ್ಗೆ ಕ್ಯಾಚ್ ನೀಡಿ ಹೊರನಡೆದರು. ಈ ಮೂಲಕ ಟೀಂ ಇಂಡಿಯಾ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿತ್ತು. ಆದರೆ ಎರಡನೇ ವಿಕೆಟ್ಗೆ ಜೊತೆಯಾದ ಟ್ರಾವಿಸ್ ಹೆಡ್ ಹಾಗೂ ಮಾರ್ನಸ್ ಲ್ಯಾಬುಶೇನ್ ಅಜೇಯ ಆಟ ಪ್ರದರ್ಶಿಸಿದರು.
ಟ್ರಾವಿಸ್ ಹೆಡ್ - ಲ್ಯಾಬುಶೇನ್ ಅಜೇಯ ಆಟ: ಈ ಜೋಡಿ ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದರೂ ಸಹ ಬಳಿಕ ಕೆಲ ಉತ್ತಮ ಹೊಡೆತಗಳ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದಿತು. 53 ಎಸೆತಗಳಲ್ಲಿ 49 ರನ್ ಗಳಿಸಿದ ಟ್ರಾವಿಸ್ ಹೆಡ್ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದರೆ, ಲ್ಯಾಬುಶೇನ್ ತಾಳ್ಮೆಯ 28 ರನ್ ಗಳಿಸಿದರು. 18.5 ಓವರ್ಗಳಲ್ಲೇ 78 ರನ್ ಬಾರಿಸಿ ಕಾಂಗರೂ ಪಡೆ ಗೆಲುವಿನ ಕೇಕೆ ಹಾಕಿತು. ಇದರೊಂದಿಗೆ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-2ರ ಅಂತರ ಕಾಯ್ದುಕೊಂಡಿದ್ದು, ಸರಣಿ ಸಮಬಲ ಸಾಧಿಸುವ ಅವಕಾಶ ಉಳಿಸಿಕೊಂಡಿದೆ.
-
#WTC23 Final bound 🏆
— ICC (@ICC) March 3, 2023 " class="align-text-top noRightClick twitterSection" data="
Congratulations Australia. See you in June! 👋 pic.twitter.com/H2YdaWPzYV
">#WTC23 Final bound 🏆
— ICC (@ICC) March 3, 2023
Congratulations Australia. See you in June! 👋 pic.twitter.com/H2YdaWPzYV#WTC23 Final bound 🏆
— ICC (@ICC) March 3, 2023
Congratulations Australia. See you in June! 👋 pic.twitter.com/H2YdaWPzYV
ಈ ಪಂದ್ಯದಲ್ಲಿ ಮೊದಲ ದಿನ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಭಾರತ ತಂಡವು ಆಸ್ಟ್ರೇಲಿಯಾದ ಸ್ಪಿನ್ ದಾಳಿಗೆ ಸಿಲುಕಿ 109 ರನ್ಗಳಿಗೆ ಆಲೌಟ್ ಆಗಿತ್ತು. ಬಳಿಕ ಬ್ಯಾಟ್ ಮಾಡಿದ ಆಸೀಸ್ ತನ್ನೆಲ್ಲ ವಿಕೆಟ್ ಕಳೆದುಕೊಂಡು 197 ರನ್ ಬಾರಿಸಿತ್ತು. ಇದರೊಂದಿಗೆ ಭಾರತ ತಂಡವು 88 ರನ್ಗಳ ಹಿನ್ನಡೆ ಅನುಭವಿಸಿತ್ತು. ತದನಂತರ ಎರಡನೇ ಇನ್ನಿಂಗ್ಸ್ನಲ್ಲೂ ವೈಫಲ್ಯ ಅನುಭವಿಸಿದ ಟೀಂ ಇಂಡಿಯಾವು ಚೇತೇಶ್ವರ ಪೂಜಾರ (59 ರನ್, 142 ಎಸೆತ) ಅವರ ಏಕಾಂಗಿ ಅರ್ಧಶತಕದ ಹೋರಾಟದ ನಡುವೆಯೂ ಸಹ ನಾಥನ್ ಲಿಯಾನ್ ಸ್ಪಿನ್ ಮೋಡಿಗೆ ಸಿಲುಕಿ ಕೇವಲ 163 ರನ್ಗಳಿಗೆ ಸರ್ವಪತನ ಕಂಡಿತ್ತು.
ಎರಡನೇ ಇನ್ನಿಂಗ್ಸ್ನಲ್ಲೂ ಭಾರತ ವಿಫಲ : ಭಾರತ ತಂಡಕ್ಕೆ ಎರಡನೇ ಇನ್ನಿಂಗ್ಸ್ನಲ್ಲೂ ಸಹ ಆರಂಭಿಕರಾದ ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಉತ್ತಮ ಆರಂಭ ನೀಡುವಲ್ಲಿ ಎಡವಿದ್ದರು. ತಂಡದ ಮೊತ್ತ 15 ರನ್ ಆಗಿದ್ದಾಗಲೇ ಶುಭಮನ್ ಗಿಲ್ ನಾಥನ್ ಲಿಯಾನ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಬಳಿಕ ರೋಹಿತ್ ಕೂಡ ಅವರನ್ನೂ ಲಿಯಾನ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ಇನ್ನುಳಿದಂತೆ ವಿರಾಟ್ ಕೊಹ್ಲಿ 13, ರವೀಂದ್ರ ಜಡೇಜಾ 7, ಶ್ರೇಯಸ್ ಅಯ್ಯರ್ 26, ಶ್ರಿಕರ್ ಭರತ್ 3, ರವಿಚಂದ್ರನ್ ಅಶ್ವಿನ್ 16 ರನ್ಗೆ ವಿಕೆಟ್ ಒಪ್ಪಿಸಿದರು. ಅಕ್ಷರ್ ಪಟೇಲ್ ಅಜೇಯ 15 ರನ್ ಬಾರಿಸಿದ್ದರು.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಆಸೀಸ್: ಇಂದೋರ್ ಗೆಲುವು ಆಸ್ಟ್ರೇಲಿಯಾ ತಂಡವನ್ನು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಕೊಂಡೊಯ್ದಿದೆ. ಇನ್ನೊಂದೆಡೆ ಭಾರತ ತಂಡ ನಾಲ್ಕನೇ ಹಾಗೂ ಕೊನೆಯ ಟೆಸ್ಟ್ ಗೆದ್ದರೆ ಮಾತ್ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪಲಿದೆ. ಟೀಂ ಇಂಡಿಯಾವು ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದ್ದರೂ ಸಹ, ಶ್ರೀಲಂಕಾ ತಂಡಕ್ಕೂ ಸಹ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸುವ ಅವಕಾಶ ಇದೆ. ಒಂದು ವೇಳೆ ಅಹಮದಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಗೆದ್ದರೆ ರೋಹಿತ್ ಪಡೆ ಟೆಸ್ಟ್ ಚಾಂಪಿಯನ್ಶಿಪ್ ಅಂತಿಮ ಹೋರಾಟಕ್ಕೆ ಸ್ಥಾನ ಖಚಿತಪಡಿಸಿಕೊಳ್ಳಲಿದೆ. ಆ ಪಂದ್ಯದಲ್ಲಿ ಆಸ್ಟ್ರೇಲಿಯಾವು ಡ್ರಾ ಇಲ್ಲವೇ ಗೆಲುವು ಕಂಡರೆ ಭಾರತದ ಕನಸು ಕಮರಲಿದೆ. ಜೊತೆಗೆ ಶ್ರೀಲಂಕಾ ತಂಡವು ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದರೆ ಮಾತ್ರ ಡಬ್ಲ್ಯೂಟಿಸಿ ಫೈನಲ್ ತಲುಪಲಿದೆ.
ಇದನ್ನೂ ಓದಿ: ಡೇವಿಡ್ ವಾರ್ನರ್ ಅಂದೇ ನಿವೃತ್ತಿ ಘೋಷಿಸಬೇಕಿತ್ತು : ರಿಕಿ ಪಾಂಟಿಂಗ್