ETV Bharat / sports

ಭಾರತ-ಪಾಕ್ ವಿಶ್ವಕಪ್ ಪಂದ್ಯ ವೇಳಾಪಟ್ಟಿಯಂತೆ ನಡೆಯಲಿ: ಪ್ರಕಾಶ್ ಪಡುಕೋಣೆ - ಭಾರತ ಪಾಕ್ ವಿಶ್ವಕಪ್ ಪಂದ್ಯ ಮುಂದುವರಿಯಲಿ

ನನ್ನ ವೈಯಕ್ತಿಕ ಅಭಿಪ್ರಾಯ ಕೇಳಿದರೆ, ಪಂದ್ಯ ಮುಂದುವರಿಯಬೇಕು ಎಂದು ನಾನು ಭಾವಿಸುತ್ತೇನೆ. ಅವರು ಈ ಹಿಂದೆ ಸಾಕಷ್ಟು ಬಾರಿ ಆಡಿದ್ದಾರೆ, ಇದೇನು ವಿಭಿನ್ನವಾಗಿಲ್ಲ ಎಂದು ತಿಳಿಸಿದ್ದಾರೆ.

Indo-Pak World Cup clash should go ahead: Prakash Padukone
ಪ್ರಕಾಶ್ ಪಡುಕೋಣೆ
author img

By

Published : Oct 19, 2021, 8:55 PM IST

ಮುಂಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ-20 ವಿಶ್ವಕಪ್ ಪಂದ್ಯ ವೇಳಾಪಟ್ಟಿಯಂತೆ ನಡೆಯಬೇಕು. ಎರಡು ರಾಷ್ಟ್ರಗಳ ರಾಜಕೀಯ ಸಮಸ್ಯೆಗಳೊಂದಿಗೆ ಕ್ರೀಡೆಗಳನ್ನು ಬೆರಸಬಾರದು ಎಂದು ಭಾರತ ತಂಡದ ಬ್ಯಾಡ್ಮಿಂಟನ್ ದಿಗ್ಗಜ ಪ್ರಕಾಶ ಪಡುಕೋಣೆ ಅಭಿಪ್ರಾಯ ಪಟ್ಟಿದ್ದಾರೆ.

ಅಕ್ಟೋಬರ್​ 24 ರಂದು ಸೂಪರ್ 12ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಆದರೆ, ಕಳೆದ ಎರಡು - ಮೂರು ವಾರಗಳಿಂದ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಉಗ್ರರ ನಿರಂತರ ದಾಳಿಯಿಂದ ನಾಗರೀಕರು ಮೃತಪಟ್ಟಿದ್ದಾರೆ. ಪಾಕಿಸ್ತಾನ ಉಗ್ರರಿಗೆ ನೆರುವು ನೀಡುವುದನ್ನು ನಿಲ್ಲಿಸುವವರೆಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ಕ್ರೀಡೆಗಳನ್ನು ರಾಜಕೀಯದೊಂದಿಗೆ ಬೆರೆಸಬಾರದು ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ. ಅದು ಯೋಜನೆಯಂತೆ ಮುಂದುವರಿಯಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಅದು ನಡೆಯಲಿ ಅಥವಾ ನಡೆಯದಿರಲೂ, ಅದರ ಬಗ್ಗೆ ಕಮೆಂಟ್​ ಮಾಡುವುದಕ್ಕೆ ನನಗೇ ಯಾವುದೇ ಅಧಿಕಾರವಿಲ್ಲ ಎಂದು ಪಡುಕೋಣೆ ರಾಷ್ಟ್ರೀಯ ಸ್ಪೋರ್ಟ್ಸ್​ ಕ್ಲಬ್​ನ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಹೇಳಿದ್ದಾರೆ.

ನನ್ನ ವೈಯಕ್ತಿಕ ಅಭಿಪ್ರಾಯ ಕೇಳಿದರೆ, ಪಂದ್ಯ ಮುಂದುವರಿಯಬೇಕು ಎಂದು ನಾನು ಭಾವಿಸುತ್ತೇನೆ. ಅವರು ಈ ಹಿಂದೆ ಸಾಕಷ್ಟು ಬಾರಿ ಆಡಿದ್ದಾರೆ, ಇದೇನು ವಿಭಿನ್ನವಾಗಿಲ್ಲ ಎಂದು ತಿಳಿಸಿದ್ದಾರೆ.

ಇದನ್ನು ಓದಿ:ವಿಶ್ವಕಪ್​ನಲ್ಲಿ ಭಾರತ ವಿರುದ್ಧ ಪಾಕ್​ ಮುಗ್ಗರಿಸುವುದೇಕೆ?.. ಅದಕ್ಕೆ ಕಾರಣ ತಿಳಿಸಿದರು ಸೆಹ್ವಾಗ್..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.