ಹ್ಯಾಮಿಲ್ಟನ್: ಮಹಿಳಾ ಕ್ರಿಕೆಟ್ನ ಲೆಜೆಂಡರಿ ಬೌಲರ್ ಎನಿಸಿಕೊಂಡಿರುವ ಜೂಲನ್ ಗೋಸ್ವಾಮಿ ಮಹಿಳಾ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.
ಹ್ಯಾಮಿಲ್ಟನ್‌ನಲ್ಲಿ ಶನಿವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಜೂಲನ್ ಗೋಸ್ವಾಮಿ ಈ ಸಾಧನೆ ಮಾಡಿದ್ದಾರೆ. ಅವರು ವಿಂಡೀಸ್ ತಂಡ ಅನಿಸಾ ಮೊಹಮ್ಮದ್ ವಿಕೆಟ್ ಪಡೆಯುವ ಮೂಲಕ ಮಹಿಲಾ ಏಕದಿನ ವಿಶ್ವಕಪ್ನಲ್ಲಿ ತಮ್ಮ 40 ವಿಕೆಟ್ ಪೂರ್ಣಗೊಳಿಸಿದರು.
ಗೋಸ್ವಾಮಿ ಈ ಸಾಧನೆ ಮೂಲಕ ಆಸ್ಟ್ರೇಲಿಯಾದ ಲಿನ್ ಫುಲ್‍ಸ್ಟನ್ ಅವರನ್ನು ಹಿಂದಿಕ್ಕಿದರು. ಲಿನ್ 1982 ರಿಂದ 1988 ರವರೆಗೆ 39 ವಿಕೆಟ್ ಪಡೆದಿದ್ದರು. ಭಾರತೀಯ ವೇಗಿ 2005ರಿಂದ 2022ರ ವರೆಗೆ 5 ವಿಶ್ವಕಪ್ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, ಒಟ್ಟು 31ನೇ ಪಂದ್ಯವನ್ನಾಡಿದ್ದಾರೆ.
-
Legend.#CWC22 pic.twitter.com/obwKpjVvOE
— ICC (@ICC) March 12, 2022 " class="align-text-top noRightClick twitterSection" data="
">Legend.#CWC22 pic.twitter.com/obwKpjVvOE
— ICC (@ICC) March 12, 2022Legend.#CWC22 pic.twitter.com/obwKpjVvOE
— ICC (@ICC) March 12, 2022
ಈಗಾಗಲೆ ಏಕದಿನ ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ದಾಖಲೆ ಕೂಡ ಜೂಲನ್ ಹೆಸರಿನಲ್ಲಿದೆ. ಅವರು 198 ಪಂದ್ಯಗಳಿಂದ 249 ವಿಕೆಟ್ ಪಡೆದಿದ್ದಾರೆ. ಅವರು ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಕ್ಯಾಥರಿನ್ ಲಾರೈನ್ ಫಿಟ್ಜ್ಪ್ಯಾಟ್ರಿಕ್(180,ನಿವೃತ್ತಿ) ಮತ್ತು ವೆಸ್ಟ್ ಇಂಡೀಸ್ನ ಅನಿಸಾ ಮೊಹಮ್ಮದ್(180) ಅವರಿಗಿಂತಲೂ 69 ವಿಕೆಟ್ ಮುಂದಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ದಾಖಲೆಯ 317ರನ್ಗಳಿಸಿತ್ತು. ಮಂಧಾನ 123, ಹರ್ಮನ್ ಪ್ರೀತ್ ಕೌರ್ 109 ರನ್ಗಳಿಸಿದ್ದರು. ಆದರೆ ಬೃಹತ್ ಮೊತ್ತವನ್ನು ಬೆನ್ನತ್ತಿದ ವಿಂಡೀಸ್ ಮೊದಲ ವಿಕೆಟ್ಗೆ 12.2 ಓವರ್ಗಳಲ್ಲಿ 100 ರನ್ಗಳ ಜೊತೆಯಾಟದ ನೀಡಿದ ಹೊರತಾಗಿಯೂ ಕೇವಲ 162 ರನ್ಗಳಿಗೆ ಆಲೌಟ್ ಆಯಿತು. ಡಿಯಾಂಡ್ರ ಡಾಟಿನ್ 62 ಮತ್ತು ಹೇಲಿ ಮ್ಯಾಥ್ಯೂಸ್ 43 ರನ್ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಇದನ್ನೂ ಓದಿ:ವನಿತೆಯರ ವಿಶ್ವಕಪ್ ಕ್ರಿಕೆಟ್ : ಅಬ್ಬರಿಸಿ ನೆಲಕಚ್ಚಿದ ವೆಸ್ಟ್ಇಂಡೀಸ್, ಭಾರತಕ್ಕೆ 155 ರನ್ಗಳ ಭರ್ಜರಿ ಗೆಲುವು!