ETV Bharat / sports

ಭಾರತ-ಆಸ್ಟ್ರೇಲಿಯಾ ಮಹಿಳೆಯರ ಅಹರ್ನಿಶಿ ಟೆಸ್ಟ್​ ಪಂದ್ಯ ಡ್ರಾನಲ್ಲಿ ಅಂತ್ಯ..

136 ರನ್​ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ನಲ್ಲಿ 3 ವಿಕೆಟ್​ ಕಳೆದುಕೊಂಡು 135 ರನ್​ಗಳಿಸಿ ಡಿಕ್ಲೇರ್​ ಘೋಷಿಸಿಕೊಂಡು ಅತಿಥೇಯ ತಂಡಕ್ಕೆ 272 ರನ್​ಗಳ ಗುರಿ ನೀಡಿತ್ತು. ಶೆಫಾಲಿ ವರ್ಮಾ 52, ಪೂನಮ್ ರಾವತ್​ 41 ರನ್​ ಗಳಿಸಿದ್ದರು..

Indian women dominate Australia in drawn day-night Test
ಭಾರತ ಆಸ್ಟ್ರೇಲಿಯಾ ಪಂದ್ಯ ಡ್ರಾನಲ್ಲಿ ಅಂತ್ಯ
author img

By

Published : Oct 3, 2021, 6:40 PM IST

ಕ್ವೀನ್ಸ್​ ಲ್ಯಾಂಡ್ : ಭಾರತ ಮತ್ತು ಆಸ್ಟ್ರೇಲಿಯಾ ವನಿತೆಯರ ಹಗಲು-ರಾತ್ರಿ ಟೆಸ್ಟ್​ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ. ಮಳೆಯ ಕಾಟದಿಂದ ಮೊದಲ ಎರಡು ದಿನಗಳ ಆಟ ಪೂರ್ಣವಾಗಿ ನಡೆಯದ ಕಾರಣ ಈ ಟೆಸ್ಟ್​ ಪಂದ್ಯ ಫಲಿತಾಂಶವಿಲ್ಲದೆ ಮುಗಿದಿದೆ.

ಭಾರತ ಮಹಿಳೆಯರು ಮೊದಲ ಇನ್ನಿಂಗ್ಸ್​ನಲ್ಲಿ ಸ್ಮೃತಿ ಮಂದಾನ(127) ಅವರ ಶತಕದ ನೆರವಿನಿಂದ 377/8 ರನ್​ಗಳಿಸಿ ಡಿಕ್ಲೇರ್ ಘೋಷಿಸಿಕೊಂಡರೆ, ಇದಕ್ಕುತ್ತರವಾಗಿ ಆಸ್ಟ್ರೇಲಿಯಾ ತಂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 96.4 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು ಡಿಕ್ಲೇರ್ ಘೋಷಿಸಿತು. ಎಲಿಸ್​ ಪೆರ್ರಿ 68 ರನ್​ ಮತ್ತು ಗಾರ್ಡ್ನರ್​ 51 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು.

136 ರನ್​ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ನಲ್ಲಿ 3 ವಿಕೆಟ್​ ಕಳೆದುಕೊಂಡು 135 ರನ್​ಗಳಿಸಿ ಡಿಕ್ಲೇರ್​ ಘೋಷಿಸಿಕೊಂಡು ಅತಿಥೇಯ ತಂಡಕ್ಕೆ 272 ರನ್​ಗಳ ಗುರಿ ನೀಡಿತ್ತು. ಶೆಫಾಲಿ ವರ್ಮಾ 52, ಪೂನಮ್ ರಾವತ್​ 41 ರನ್​ ಗಳಿಸಿದ್ದರು.

ಆದರೆ, ಆಸ್ಟ್ರೇಲಿಯಾ 15 ಓವರ್​ಗಲ್ಲಿ 2 ವಿಕೆಟ್ ಕಳೆದುಕೊಂಡು 36 ರನ್​ಗಳಿಸಿದ್ದ ವೇಳೆ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಮೊದಲ ಇನ್ನಿಂಗ್ಸ್​ನಲ್ಲಿ ಆಕರ್ಷಕ ಶತಕ(127) ಸಿಡಿಸಿದ ಭಾರತದ ಓಪನರ್ ಸ್ಮೃತಿ ಮಂದಾನ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನು ಓದಿ:ಕೆಕೆಆರ್​ ಪ್ಲೇ ಆಫ್​ ಕನಸಿಗೆ ಭಂಗ ತರುವುದೇ ಸನ್​ರೈಸರ್ಸ್​ ಹೈದರಾಬಾದ್​?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.