ETV Bharat / sports

ಮಹಿಳಾ ಐಪಿಎಲ್​​ ಬಗ್ಗೆ ಆಸಕ್ತಿ ತೋರಿದ ಭಾರತೀಯ ಮಹಿಳಾ ಕ್ರಿಕೆಟರ್ಸ್​ - ಮಹಿಳಾ ಬಿಗ್ ಬ್ಯಾಷ್ ಲೀಗ್

ಪ್ರಸ್ತುತ ಮಹಿಳಾ ಬಿಗ್ ಬ್ಯಾಷ್ ಲೀಗ್ ನಲ್ಲಿ ಭಾಗವಹಿಸಿರುವ ಜೆಮಿಮಾ, ಹರ್ಮನ್‌ಪ್ರೀತ್, ರಾಧಾ ಮತ್ತು ಸ್ಮೃತಿ ಅವರು ಪೂರ್ಣ ಪ್ರಮಾಣದ ಮಹಿಳಾ ಐಪಿಎಲ್​​​​ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮುಂದೆ ಭಾರತದಲ್ಲೂ ಮಹಿಳಾ ಐಪಿಎಲ್ ಟೂರ್ನಿ (Indian Women IPL Tournament) ನಡೆದರೆ ತಂಡಕ್ಕೆ ಇನ್ನಷ್ಟು ಬಲ ಬರಲಿದೆ ಎಂದಿದ್ದಾರೆ. ​

indian-women-cricketers-express-wish-for-womens-indian-premier-league
ಮಹಿಳಾ ಐಪಿಎಲ್​​ ಬಗ್ಗೆ ಆಸಕ್ತಿ ತೋರಿದ ಭಾರತೀಯ ಮಹಿಳಾ ಕ್ರಿಕೆಟರ್ಸ್​
author img

By

Published : Nov 13, 2021, 12:48 PM IST

ಮ್ಯಾಕೆ (ಆಸ್ಟ್ರೇಲಿಯಾ): ಭಾರತೀಯ ಮಹಿಳಾ ಕ್ರಿಕೆಟಿಗರಾದ (Indian Women cricket) ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್, ರಾಧಾ ಯಾದವ್ ಮತ್ತು ಸ್ಮೃತಿ ಮಂಧಾನ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ (Indian premier League) ಪ್ರಾರಂಭವಾಗುವ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) (BCCI) ಈ ಹಿಂದೆ ಮೂರು ತಂಡಗಳ ಮಹಿಳಾ ಟಿ-20 ಚಾಲೆಂಜ್ (T20 Challenge) ಅನ್ನು ಆಯೋಜಿಸಿತ್ತು.

Cricket.com.au ಪೋಸ್ಟ್ ಮಾಡಿರುವ ವಿಡಿಯೋದಲ್ಲಿ, ಪ್ರಸ್ತುತ ಮಹಿಳಾ ಬಿಗ್ ಬ್ಯಾಷ್ ಲೀಗ್ (WBBL)ನಲ್ಲಿ ಭಾಗವಹಿಸುತ್ತಿರುವ ಜೆಮಿಮಾ, ಹರ್ಮನ್‌ಪ್ರೀತ್ (harmanpreet kaur), ರಾಧಾ ಮತ್ತು ಸ್ಮೃತಿ (Smriti Mandhana) ಅವರು ಪೂರ್ಣ ಪ್ರಮಾಣದ ಮಹಿಳಾ ಐಪಿಎಲ್​​​​ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಾವು ಭಾರತದಲ್ಲಿ ಮಹಿಳಾ ಐಪಿಎಲ್ (Women IPL) ನಡೆಸುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನೀವು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ಹುಡುಗಿಯರ ಗುಣಮಟ್ಟವನ್ನು ನೋಡಿದರೆ, ನಮ್ಮಲ್ಲಿ ಅಷ್ಟು ಕೌಶಲ್ಯವಿಲ್ಲ ಎಂದು ಅಲ್ಲ. ಇದು ಕೇವಲ ಮಾನ್ಯತೆಯ ಪ್ರಮಾಣವಾಗಿದೆ. ಆ ರೀತಿಯ ಟೂರ್ನಿಗಳು ಹೆಚ್ಚು ಕೌಶಲ್ಯತೆ ಪಡೆಯಲು ಸಹಕಾರಿಯಾಗಲಿವೆ ಎಂದು ಮೆಲ್ಬೋರ್ನ್​ ರೆನೆಗೇಡ್ಸ್ (Melbourne Renegades) ಪರ ಆಡುತ್ತಿರುವ ಜೆಮಿಮಾ ಹೇಳಿದ್ದಾರೆ.

ಬಳಿಕ ಸಿಡ್ನಿ ಥಂಡರ್ಸ್ (Sydney Thunders) ಪರ ಆಡುತ್ತಿರುವ ಮಂಧಾನ ಮಾತನಾಡಿ, ಮಹಿಳಾ ಐಪಿಎಲ್ ಆಯೋಜಿಸುವುದು ಭಾರತ ತಂಡಕ್ಕೆ ಬೆಂಚ್ ಸ್ಟ್ರೆಂತ್ ರೂಪಿಸಲು ಸಹಾಯ ಮಾಡುತ್ತದೆ. ಇದು ಭಾರತೀಯ ಮಹಿಳಾ ಕ್ರಿಕೆಟ್‌ಗೆ ಮುಂದಿನ ಹಂತವಾಗಿದೆ ಎಂದು ನಾನು ಭಾವಿಸುತ್ತೇನೆ. 8 ತಂಡಗಳ ಐಪಿಎಲ್ ಭಾರತ ಮಹಿಳಾ ಕ್ರಿಕೆಟ್​ ಸಾಕಷ್ಟು ಬಲ ನೀಡಲಿದೆ ಎಂದು ನಾನು ಭಾವಿಸಿದ್ದೇನೆ ಎಂದಿದ್ದಾರೆ.

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ ಇತ್ತೀಚಿನ ದಿನಗಳಲ್ಲಿ ತನ್ನ ಬಲ ಹೆಚ್ಚಿಕೊಂಡು ಉತ್ತಮ ಪ್ರದರ್ಶನ ನೀಡುತ್ತಿರುವುದನ್ನು ನಾವು ನೋಡಬಹುದು. ಭಾರತೀಯ ಕ್ರಿಕೆಟ್​​ಗೆ ಇದು ಹೆಚ್ಚು ಅಗತ್ಯವಿದೆ ಎಂದಿದ್ದಾರೆ.

ಓದಿ: Commonwealth Games 2022.. ಕಾಮನವೆಲ್ತ್​ ಗೇಮ್ಸ್​​ನಲ್ಲಿ ಮಹಿಳಾ ಕ್ರಿಕೆಟ್​​.. ಭಾರತದ ಎದುರಾಳಿ ಆಸೀಸ್‌..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.