ಹ್ಯಾಮಿಲ್ಟನ್: ಭಾರತೀಯ ಮಹಿಳಾ ಕ್ರಿಕೆಟ್ನ ಲೆಜೆಂಡ್ ಎಂದೇ ಗುರುತಿಸಿಕೊಂಡಿರುವ ಜೂಲನ್ ಗೋಸ್ವಾಮಿ ಮಹಿಳಾ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ ಹೊಡೆದುರುಳಿಸಿದ ಬೌಲರ್ ಎನಿಸಿಕೊಂಡಿದ್ದಾರೆ.
ಹ್ಯಾಮಿಲ್ಟನ್ನಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್ನ ಇಂದಿನ ಪಂದ್ಯದಲ್ಲಿ ಭಾರತ - ನ್ಯೂಜಿಲ್ಯಾಂಡ್ ಮುಖಾಮುಖಿಯಾಗಿದ್ದು, ಟಾಸ್ ಗೆದ್ದಿರುವ ಮಿಥಾಲಿ ರಾಜ್ ಪಡೆ ಬೌಲಿಂಗ್ ಆಯ್ದುಕೊಂಡಿತು. ಈ ಪಂದ್ಯದಲ್ಲಿ ಜೂಲನ್ ಗೋಸ್ವಾಮಿ ಈ ಸಾಧನೆ ಮಾಡಿದ್ದಾರೆ.
ನ್ಯೂಜಿಲೆಂಡ್ನ ವಿರುದ್ಧ ಇನಿಂಗ್ಸ್ನಲ್ಲಿ ಕೇಟಿ ಮಾರ್ಟಿನ್ ವಿಕೆಟ್ ಪಡೆಯುವುದರ ಮೂಲಕ ಮಹಿಳಾ ವಿಶ್ವಕಪ್ ಇತಿಹಾಸದಲ್ಲಿ 39 ವಿಕೆಟ್ ಪಡೆದ ಸಾಧನೆ ನಿರ್ಮಿಸಿದರು.
ಈ ಸಾಧನೆ ಮೂಲಕ 1982 ರಿಂದ 1988 ರವರೆಗೆ ಆಸ್ಟ್ರೇಲಿಯಾದ ಲಿನ್ ಫುಲ್ಸ್ಟನ್ ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಪಾಕ್ ತಂಡದ ವಿರುದ್ಧ 26 ರನ್ ನೀಡಿದ್ದ ಜೂಲನ್ ಗೋಸ್ವಾಮಿ 2 ವಿಕೆಟ್ ಪಡೆದುಕೊಂಡಿದ್ದರು.
ಇದನ್ನೂ ಓದಿ: ಮಹಿಳಾ ಏಕದಿನ ವಿಶ್ವಕಪ್: ಕಿವೀಸ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಮಿಥಾಲಿ ಪಡೆ
ಎರಡು ದಶಕಗಳ ಕಾಲದ ವೃತ್ತಿ ಜೀವನದಲ್ಲಿ, ಅಂದರೆ 2005 ರಿಂದ ಐದು ಮಹಿಳಾ ಕ್ರಿಕೆಟ್ ವಿಶ್ವಕಪ್ಗಳಲ್ಲಿ ಗೋಸ್ವಾಮಿ 39 ವಿಕೆಟ್ಗಳನ್ನು ಕಬಳಿಸಿದ್ದಾರೆ.