ETV Bharat / sports

ಇಂಗ್ಲೆಂಡ್ ಪ್ರವಾಸ: ಭಾರತದ ಮಹಿಳಾ-ಪುರುಷ ತಂಡಗಳಿಗೆ ಕಠಿಣ ಕ್ವಾರಂಟೈನ್​​​

ಭಾರತ ಮಹಿಳಾ ತಂಡವೂ ಕೂಡ ಜೂನ್ 2ರಂದು ಇಂಗ್ಲೆಂಡ್​ಗೆ ಪ್ರವಾಸ ಕೈಗೊಳ್ಳಲಿದೆ. ಹಾಗಾಗಿ ಮುಂಬೈ ವಿಮಾನ ನಿಲ್ದಾಣಕ್ಕೆ ಸಮೀಪವಿರುವ ಗ್ರ್ಯಾಂಡ್​ ಹ್ಯಾಟ್​ ಹೋಟೆಲ್​ನಲ್ಲಿ 8 ದಿನಗಳ ಕಾಲ ಕ್ವಾರಂಟೈನ್​​ಗೆ ಒಳಗಾಗಿದ್ದಾರೆ.

ಭಾರತ ತಂಡ ಕ್ವಾರಂಟೈನ್
ಭಾರತ ತಂಡ ಕ್ವಾರಂಟೈನ್
author img

By

Published : May 25, 2021, 3:06 PM IST

ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೋಚ್ ರವಿಶಾಸ್ತ್ರಿ ಸೋಮವಾರ ಮುಂಬೈನಲ್ಲಿ ಇಂಗ್ಲೆಂಡ್ ಬೌಂಡ್ ತಂಡವನ್ನು ಸೇರಿಕೊಂಡಿದ್ದು, ಮಹಿಳಾ ತಂಡದ ಜೊತೆಗೆ ಇಂದಿನಿಂದ 8 ದಿನಗಳ ಕಾಲ ಕಠಿಣ ಕ್ವಾರಂಟೈನ್ ಆರಂಭಿಸಿದ್ದಾರೆ.

ಭಾರತ ಮಹಿಳಾ ತಂಡವೂ ಕೂಡ ಜೂನ್ 2ರಂದು ಇಂಗ್ಲೆಂಡ್​ಗೆ ಪ್ರವಾಸ ಕೈಗೊಳ್ಳಲಿದೆ. ಹಾಗಾಗಿ ಮುಂಬೈ ವಿಮಾನ ನಿಲ್ದಾಣಕ್ಕೆ ಸಮೀಪವಿರುವ ಗ್ರ್ಯಾಂಡ್​ ಹ್ಯಾಟ್​ ಹೋಟೆಲ್​ನಲ್ಲಿ 8 ದಿನಗಳ ಕಾಲ ಕ್ವಾರಂಟೈನ್​​ಗೆ ಒಳಗಾಗಿದ್ದಾರೆ.

ಜೂನ್ 2ರಂದು ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಮುನ್ನ ಆಟಗಾರರು ಮತ್ತು ಎಲ್ಲಾ ಸಿಬ್ಬಂದಿ 3 ಆರ್​​ಟಿ​-ಪಿಸಿಆರ್​ ಪರೀಕ್ಷೆಯಲ್ಲಿ ನೆಗೆಟಿವ್​ ವರದಿ ಪಡೆಯಬೇಕಿರುತ್ತದೆ.

ಭಾರತ ಪುರುಷ ತಂಡ ಇಂಗ್ಲೆಂಡ್ ಪ್ರವಾಸದ ಜೂನ್​ 18ರಿಂದ ನಡೆಯುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಮಹಿಳಾ ತಂಡ ಈ ಪ್ರವಾಸದಲ್ಲಿ ಒಂದು ಟೆಸ್ಟ್​, 3 ಏಕದಿನ ಮತ್ತು ಟಿ-20 ಪಂದ್ಯಗಳನ್ನಾಡಲಿದೆ. ಜೂನ್​ 16ರಿಂದ ತನ್ನ ಅಭಿಯಾನ ಆರಂಭಿಸಲಿದೆ.

ಇದನ್ನು ಓದಿ:ಕೊಹ್ಲಿ, ರೋಹಿತ್ ಅಲ್ಲ, ಈತ ಭಾರತದ ಅಪಾಯಕಾರಿ - ಗೇಮ್ ಚೇಂಜರ್ ಬ್ಯಾಟ್ಸ್​ಮನ್: ಕಿವೀಸ್ ಕೋಚ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.