ಉಜ್ಜಯಿನಿ (ಮಧ್ಯಪ್ರದೇಶ): ವಿಶ್ವವಿಖ್ಯಾತ ಉಜ್ಜಯಿನಿಯ ಬಾಬಾ ಮಹಾಕಾಳೇಶ್ವರ ದೇವಾಲಯಕ್ಕೆ ಭಾರತ ತಂಡದ ಆಟಗಾರರಾದ ಸೂರ್ಯಕುಮಾರ್ ಯಾದವ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್ ಹಾಗು ಭಾರತೀಯ ಕ್ರಿಕೆಟ್ ಸಿಬ್ಬಂದಿ ಸೇರಿದಂತೆ ಅನೇಕರು ಭಾನುವಾರ ಭೇಟಿ ನೀಡಿದರು. ಎಲ್ಲರೂ ಮಹಾಕಾಳನ ದಿವ್ಯ ಸಾನಿಧ್ಯದಲ್ಲಿ ಅಲೌಕಿಕ ಭಸ್ಮಾರತಿಯಲ್ಲಿ ಪಾಲ್ಗೊಂಡರು. ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಕ್ರಿಕೆಟಿಗ ರಿಷಬ್ ಪಂತ್ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ, ಪೂಜೆ ಸಲ್ಲಿಸಿದರು.
ಸೂರ್ಯಕುಮಾರ್ ಯಾದವ್ ಮಾತನಾಡಿ, "ರಿಷಬ್ ಪಂತ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದೆವು. ತಂಡಕ್ಕೆ ಅವರ ಪುನರಾಗಮನ ನಮಗೆ ಬಹಳ ಮುಖ್ಯ. ನಾವು ಈಗಾಗಲೇ ನ್ಯೂಜಿಲೆಂಡ್ ವಿರುದ್ಧದ ಸರಣಿ ಗೆದ್ದಿದ್ದೇವೆ. ಕಿವೀಸ್ ವಿರುದ್ಧದ ಅಂತಿಮ ಪಂದ್ಯವನ್ನು ಎದುರು ನೋಡುತ್ತಿದ್ದೇವೆ" ಎಂದರು.
-
We prayed for the speedy recovery of Rishabh Pant. His comeback is very important to us. We have already won the series against New Zealand, looking forward to the final match against them: Cricketer Suryakumar Yadav pic.twitter.com/2yngbYZXfb
— ANI (@ANI) January 23, 2023 " class="align-text-top noRightClick twitterSection" data="
">We prayed for the speedy recovery of Rishabh Pant. His comeback is very important to us. We have already won the series against New Zealand, looking forward to the final match against them: Cricketer Suryakumar Yadav pic.twitter.com/2yngbYZXfb
— ANI (@ANI) January 23, 2023We prayed for the speedy recovery of Rishabh Pant. His comeback is very important to us. We have already won the series against New Zealand, looking forward to the final match against them: Cricketer Suryakumar Yadav pic.twitter.com/2yngbYZXfb
— ANI (@ANI) January 23, 2023
ಜನವರಿ 24ರಂದು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು 3ನೇ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಭಾನುವಾರ ಮಧ್ಯಾಹ್ನ ಉಭಯ ತಂಡಗಳು ರಾಯ್‌ಪುರದಿಂದ ವಿಶೇಷ ವಿಮಾನದ ಮೂಲಕ ಇಂದೋರ್ ತಲುಪಿವೆ. ವಿಮಾನ ನಿಲ್ದಾಣದ ವಿಐಪಿ ಗೇಟ್‌ನಿಂದ ತಂಡಗಳು ಬಸ್ ಹತ್ತಿ ನೇರವಾಗಿ ಹೋಟೆಲ್ ಕಡೆ ಪ್ರಯಾಣ ಬೆಳೆಸಿದ್ದವು. ಭಾರತೀಯ ತಂಡವು ಹೋಟೆಲ್ ರಾಡಿಸನ್ ಬ್ಲೂ ಮತ್ತು ನ್ಯೂಜಿಲೆಂಡ್ ತಂಡ ಮ್ಯಾರಿಯೆಟ್ ಹೋಟೆಲ್ನಲ್ಲಿ ವಾಸ್ಸವ್ಯ ಹೂಡಿದ್ದಾರೆ. ಭಾರತೀಯ ತಂಡದ ಆಟಗಾರರನ್ನು ವೀಕ್ಷಿಸಲು ಹೊಟೇಲ್‌ನ ಹೊರಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಆದರೆ ಬಸ್‌ಗಳು ನೇರವಾಗಿ ಹೋಟೆಲ್ ಪ್ರವೇಶಿಸಿದ್ದು, ನಿರಾಸೆ ಮೂಡಿಸಿತು.
ಮಾಜಿ ನಾಯಕ ಹೇಳಿದ್ದೇನು?: ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಯಾರು ಉತ್ತಮ ಬ್ಯಾಟರ್ ಎಂಬ ಪ್ರಶ್ನೆಗೆ ಕಪಿಲ್ ಪ್ರತಿಕ್ರಿಯಿಸಿದ್ದಾರೆ. ತಲೆಮಾರುಗಳು ಬದಲಾದಂತೆ ಉತ್ತಮ ಕ್ರಿಕೆಟಿಗರು ಬಂದು ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಲೆಜೆಂಡರಿ ಕ್ರಿಕೆಟಿಗ ಕಪಿಲ್ ದೇವ್ ಹೇಳಿದ್ದಾರೆ. "ನೀವು ಆ ಮಟ್ಟದ ಒಬ್ಬ ಅಥವಾ ಇಬ್ಬರು ಆಟಗಾರರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. 11 ಆಟಗಾರರ ಗುಂಪು ಒಂದು ತಂಡ. ಆದರೆ ಪ್ರತಿ ಪೀಳಿಗೆಯು ಉತ್ತಮಗೊಳ್ಳುತ್ತಲೇ ಇರುತ್ತದೆ" ಎಂದರು.
ಸುನಿಲ್ ಗವಾಸ್ಕರ್ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಇವರ ಬಳಿಕ ತಂಡಕ್ಕೆ ರಾಹುಲ್ ದ್ರಾವಿಡ್, ಸಚಿನ್ ಮತ್ತು ವೀರೇಂದ್ರ ಸೆಹ್ವಾಗ್ ರಂಥ ಘಟಾನುಘಟಿಗಳು ಬಂದಿದ್ದರು. "ಪ್ರಸ್ತುತ ಪೀಳಿಗೆಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಇದ್ದಾರೆ. ಮುಂದಿನ ಪೀಳಿಗೆಯಲ್ಲಿ ಇನ್ನೂ ಉತ್ತಮರು ಬರುತ್ತಾರೆ" ಎಂದು ಕಪಿಲ್ ಹೇಳಿದ್ದಾರೆ.
ಈ ವರ್ಷಾಂತ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಅವಕಾಶಗಳ ಕುರಿತು ಪ್ರತಿಕ್ರಿಯಿಸುತ್ತಾ, "ವಿಶ್ವಕಪ್ ಗೆಲ್ಲಲು ಟೀಮ್ ಇಂಡಿಯಾ ಅರ್ಹವಾಗಿದೆ. ಅಂತಹ ಇತರ ತಂಡಗಳಿವೆ. ವಿಶ್ವಕಪ್ ಗೆಲ್ಲಲು ಪ್ರಮುಖ ಆಟಗಾರರ ಅದೃಷ್ಟ, ಸರಿಯಾದ ಸಂಯೋಜನೆ ಮತ್ತು ಫಿಟ್‌ನೆಸ್ ಪ್ರಮುಖವಾಗಿದೆ. ಹೆಚ್ಚು ಕ್ರಿಕೆಟ್ ಆಡುವಾಗ ಗಾಯಗಳು ಸಂಭವಿಸುತ್ತವೆ. ಟೂರ್ನಿಯಲ್ಲಿ ಆಡುವಾಗ ಅವರು ಗಾಯಗೊಳ್ಳದಿರಲಿ ಎಂದು ಹಾರೈಸೋಣ" ಎಂದು ಕಪಿಲ್ ತಿಳಿಸಿದರು.
ಇದನ್ನೂ ಓದಿ: ಜೂನಿಯರ್ ರೋಹಿತ್ ಶರ್ಮಾ ರೀತಿ ಗಿಲ್ ಕಾಣುತ್ತಾರೆ : ರಮೀಜ್ ರಾಜಾ