ETV Bharat / sports

ಕಾರು ಅಪಘಾತಕ್ಕೀಡಾದ ವ್ಯಕ್ತಿಯನ್ನು ರಕ್ಷಿಸಲು ನೆರವಾದ ಬೌಲರ್ ಮೊಹಮದ್​ ಶಮಿ- ವಿಡಿಯೋ - ಬೌಲರ್ ಮೊಹಮದ್​ ಶಮಿ

Cricketer Mohammed Shami helps accident victim: ವಿಶ್ವಕಪ್​ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನದ ಹೊರತಾಗಿಯೂ ಟ್ರೋಫಿ ಗೆಲ್ಲಲಾಗದೇ ನಿರಾಸೆ ಅನುಭವಿಸಿದ್ದ ಭಾರತ ತಂಡದ ವೇಗಿ ಮೊಹಮದ್ ಶಮಿ ಅವರು ಅಪಘಾತಕ್ಕೀಡಾಗಿ ಸಂಕಷ್ಟದಲ್ಲಿದ್ದ ವ್ಯಕ್ತಿಯನ್ನು ರಕ್ಷಿಸಲು ನೆರವಾಗಿದ್ದಾರೆ.

ಬೌಲರ್ ಮೊಹಮದ್​ ಶಮಿ
ಬೌಲರ್ ಮೊಹಮದ್​ ಶಮಿ
author img

By ETV Bharat Karnataka Team

Published : Nov 26, 2023, 7:06 AM IST

ನೈನಿತಾಲ್(ಉತ್ತರಾಖಂಡ): ಏಕದಿನ ವಿಶ್ವಕಪ್ ಕ್ರಿಕೆಟ್‌​ನಲ್ಲಿ ತನ್ನ ವೇಗ ಮತ್ತು ಕರಾರುವಾಕ್​ ದಾಳಿಯಿಂದ ಬ್ಯಾಟರ್​ಗಳ ಎದೆ ನಡುಗಿಸಿದ್ದ ವೇಗದ ಬೌಲರ್​ ಮೊಹಮದ್ ಶಮಿ, ಕಾರು ಅಪಘಾತಕ್ಕೀಡಾದ ವ್ಯಕ್ತಿಯ ಪ್ರಾಣ ಕಾಪಾಡಿದ್ದಾರೆ. ಉತ್ತರಾಖಂಡದ ನೈನಿತಾಲ್​ನ ಕಣಿವೆಯೊಂದರಲ್ಲಿ ಕಾರೊಂದು ಅಪಘಾತಕ್ಕೀಡಾಗಿದ್ದನ್ನು, ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಶಮಿ ಗಮನಿಸಿದ್ದು, ಕಾರು ನಿಲ್ಲಿಸಿ ಸಹಾಯಹಸ್ತ ಚಾಚಿದರು.

ಘಟನೆಯ ವಿಡಿಯೋವನ್ನು ಶಮಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಸ್ತೆ ದಾಟಿ ಕಣಿವೆಗೆ ಬಿದ್ದ ಕಾರನ್ನು ವಿಡಿಯೋದಲ್ಲಿ ಕಾಣಬಹುದು. ಶಮಿ ಕಾರಲ್ಲಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದು ಉಪಚರಿಸುತ್ತಿರುವುದೂ ಇದೆ. 'ಆತ ತುಂಬಾ ಅದೃಷ್ಟಶಾಲಿ. ಭಗವಂತ ಮರುಜನ್ಮ ನೀಡಿದ್ದಾನೆ. ನೈನಿತಾಲ್​ ಬಳಿಯ ಕಣಿವೆಯಲ್ಲಿ ಕಾರು ಅಪಘಾತಕ್ಕೀಡಾಗಿತ್ತು. ನಾವು ಆತನನ್ನು ಸುರಕ್ಷಿತವಾಗಿ ಹೊರಗೆ ಕರೆತಂದೆವು' ಎಂದು ಬರೆದುಕೊಂಡಿದ್ದಾರೆ.

ಅಪಘಾತದಿಂದ ಪಾರಾಗಿದ್ದ ಶಮಿ: 2018ರಲ್ಲಿ ಡೆಹ್ರಾಡೂನ್‌ನಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದಾಗ ಶಮಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಅಂದು ಅವರು ಅದೃಷ್ಟವಶಾತ್​​ ಪ್ರಾಣಾಪಾಯದಿಂದ ಪಾರಾಗಿದ್ದರು. ಶಮಿ ಇದ್ದ ಕಾರು ಎದುರಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿತ್ತು. ಕಾರು ನುಜ್ಜುಗುಜ್ಜಾಗಿ, ಶಮಿ ತಲೆಗೆ ಗಂಭೀರ ಗಾಯವಾಗಿತ್ತು. ಅಪಘಾತ ಸಂಭವಿಸಿದ ಬಳಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ತಲೆಗೆ ಹೊಲಿಗೆಗಳನ್ನೂ ಹಾಕಲಾಗಿತ್ತು.

ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನ: ಮೊಹಮದ್​ ಶಮಿ, ಈಚೆಗೆ ಮುಗಿದ ಏಕದಿನ ವಿಶ್ವಕಪ್​ ಪಂದ್ಯಾವಳಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದರು. ತಾವಾಡಿದ 7 ಪಂದ್ಯಗಳಲ್ಲಿ 24 ವಿಕೆಟ್​ಗಳನ್ನು ಕಿತ್ತಿದ್ದರು. ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಆಟಗಾರ ಪ್ರಶಸ್ತಿಗೂ ಭಾಜನರಾಗಿದ್ದರು. ಇದರ ಜೊತೆಗೆ ಹಲವು ದಾಖಲೆಗಳನ್ನೂ ತಮ್ಮ ಹೆಸರಿಗೆ ಬರೆಸಿಕೊಂಡಿರುವ ಕ್ರಿಕೆಟಿಗ, ಒಂದೇ ವಿಶ್ವಕಪ್​ನಲ್ಲಿ ಮೂರು ಬಾರಿ 5 ವಿಕೆಟ್​ ಗೊಂಚಲು ಪಡೆದ ಮೊದಲ ಕ್ರಿಕೆಟಿಗನಾದರು. ಅಷ್ಟೇ ಅಲ್ಲ, 10ಕ್ಕಿಂತಲೂ ಕಡಿಮೆ ಸರಾಸರಿಯಲ್ಲಿ ಬೌಲಿಂಗ್​ ಮಾಡಿದ ವೇಗಿ ಎನಿಸಿಕೊಂಡರು.

ಶಮಿ ವೈಯಕ್ತಿಕ ಬದುಕಿನಲ್ಲಿ ವಿವಾದ: ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸೀನ್ ಜಹಾನ್ ಅವರು ಅನೈತಿಕ ಸಂಬಂಧ, ಕಿರುಕುಳ ಹಾಗೂ ಮ್ಯಾಚ್ ಫಿಕ್ಸಿಂಗ್ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದು ಜಾಮೀನುರಹಿತ ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಎಲ್ಲಾ ಆರೋಪಗಳನ್ನು ಶಮಿ ತಳ್ಳಿ ಹಾಕಿದ್ದಾರೆ.

ಇದನ್ನೂ ಓದಿ: ಆಟಗಾರರನ್ನು ಭೇಟಿ ಮಾಡಿ ಧೈರ್ಯ ತುಂಬುವ ಪ್ರಧಾನಿಯನ್ನು ಹಿಂದೆಂದೂ ನೋಡಿಲ್ಲ : ಸೆಹ್ವಾಗ್ ಗುಣಗಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.