ETV Bharat / sports

ಜುಲೈನಲ್ಲಿ ಬಾಂಗ್ಲಾ ಪ್ರವಾಸದಲ್ಲಿ ಭಾರತೀಯ ವನಿತೆಯರ ಕ್ರಿಕೆಟ್ ತಂಡ, 3 ಏಕದಿನ ಮತ್ತು 3 ಟಿ20 ಪಂದ್ಯಗಳ ಮುಖಾಮುಖಿ - 3 ಏಕದಿನ ಮತ್ತು 3 ಟಿ20 ಪಂದ್ಯಗಳ ಮುಖಾಮುಖಿ

ಮಹಿಳಾ ಟಿ20 ವಿಶ್ವಕಪ್ ಮತ್ತು​ ಏಕದಿನ ವಿಶ್ವಕಪ್​ ಸಿದ್ಧತೆಗಾಗಿ ಭಾರತದ ವನಿತೆಯರು ಬಾಂಗ್ಲಾದೇಶದ ಪ್ರವಾಸದಲ್ಲಿದ್ದಾರೆ.

India women's cricket team to tour Bangladesh for white-ball series in July

author img

By

Published : Jun 17, 2023, 9:39 PM IST

ಢಾಕಾ(ಬಾಂಗ್ಲಾದೇಶ): ಬಾಂಗ್ಲಾದೇಶದ ವಿರುದ್ಧ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲು ಭಾರತ ಮಹಿಳಾ ಕ್ರಿಕೆಟ್ ತಂಡ ಜುಲೈ 6 ರಂದು ಢಾಕಾಗೆ ಆಗಮಿಸಲಿದೆ. ಎಲ್ಲಾ ಪಂದ್ಯಗಳು ಮೀರ್‌ಪುರದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ತಿಳಿಸಿದೆ.

ಬಿಸಿಬಿ ಬಿಡುಗಡೆ ಮಾಡಿದ ಪ್ರವಾಸದ ಪ್ರಕಾರ, ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೂರು ಟಿ20 ಗಳು ಜುಲೈ 9, 11 ಮತ್ತು 13 ರಂದು ಢಾಕಾ ಸಮಯದ ಪ್ರಕಾರ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗುತ್ತವೆ. 2024 ರ ಮಹಿಳಾ ಟಿ 20 ವಿಶ್ವಕಪ್‌ಗೆ ಬಾಂಗ್ಲಾದೇಶ ಅತಿಥೇಯವಾಗಿದೆ. ಅದರ ನಂತರ ಜುಲೈ 16, 19 ಮತ್ತು 22 ರಂದು ಎರಡು ತಂಡಗಳ ನಡುವೆ ಮೂರು ಏಕದಿನ ಪಂದ್ಯಗಳು ನಡೆಯಲಿದ್ದು, ಢಾಕಾ ಸಮಯ ಬೆಳಿಗ್ಗೆ 9:30 ರಿಂದ ಪ್ರಾರಂಭವಾಗಲಿದೆ. ಮೂರು ಏಕದಿನ ಪಂದ್ಯಗಳು 2022-25 ಐಸಿಸಿ ಮಹಿಳಾ ಏಕದಿನ ಚಾಂಪಿಯನ್‌ಶಿಪ್ ಭಾಗವಾಗಿರಲಿದೆ. ಭಾರತವು ಆತಿಥ್ಯ ವಹಿಸಲಿರುವ 2025 ರ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗೆ ಅರ್ಹತೆಯನ್ನು ನಿರ್ಧರಿಸಲು ಹತ್ತು ತಂಡಗಳ ನಡುವೆ ಸ್ಪರ್ಧೆಗಳು ನಡೆಯುತ್ತಿವೆ.

ಅಂಕಪಟ್ಟಿಯಲ್ಲಿ ಭಾರತವು ಆರು ಪಂದ್ಯಗಳಲ್ಲಿ ಆರರಲ್ಲಿ ಗೆದ್ದು 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ, ಆದರೆ ಬಾಂಗ್ಲಾದೇಶವು ಮೂರು ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಮಳೆಯಿಂದ ಎರಡು ಸರಣಿಗಳನ್ನು ಕಳೆದುಕೊಂಡಿದೆ. ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಐದು ರನ್‌ಗಳಿಂದ ಸೋತಾಗ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡವು ಕೊನೆಯ ಬಾರಿಗೆ ಅಂತರರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಆಡಿತ್ತು. ಭಾರತದ ಪ್ರವಾಸವು ಬಾಂಗ್ಲಾದೇಶದಿಂದ ಆಯೋಜಿಸಲಾಗುವ ಐಸಿಸಿಯ ಮಹಿಳಾ ಎಫ್​ಟಿಪಿ 2022-2025 ರ ಅಡಿಯಲ್ಲಿ ಮೊದಲ ಸರಣಿಯಾಗಿದೆ.

ಭಾರತೀಯ ಮಹಿಳಾ ತಂಡದ ಸದಸ್ಯರು ಇತ್ತೀಚೆಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಯಲ್ಲಿ ಉನ್ನತ-ಕಾರ್ಯಕ್ಷಮತೆಯ ತರಬೇತಿ ಮತ್ತು ಕಂಡೀಷನಿಂಗ್ ಶಿಬಿರದಲ್ಲಿ ಪಾಲ್ಗೊಂಡರು, ಪುರುಷರ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಶಿಬಿರದ ಸಮಯದಲ್ಲಿ ಅವರಿಗೆ ಸಲಹೆಗಳನ್ನು ನೀಡಿದ್ದಾರೆ.

ಹಾಂಗ್ ಕಾಂಗ್‌ನಲ್ಲಿ ನಡೆಯುತ್ತಿರುವ ಮಹಿಳೆಯರ ಏಷ್ಯಾ ಕಪ್‌ನಲ್ಲಿ, ಶನಿವಾರ ಪಾಕಿಸ್ತಾನ ಎ ವಿರುದ್ಧ ಭಾರತ ಎ ತಂಡವು ಮೊಂಗ್ ಕಾಕ್‌ನ ಮಿಷನ್ ರೋಡ್ ಮೈದಾನದಲ್ಲಿ ಮಳೆಯಿಂದಾಗಿ ರದ್ದಾಗಿದೆ. ಯಾವುದೇ ಫಲಿತಾಂಶ ಇಲ್ಲದ ಕಾರಣ ಎರಡೂ ತಂಡಗಳು ಟೂರ್ನಿಯ ಸೆಮಿಫೈನಲ್‌ಗೆ ತೇರ್ಗಡೆಯಾದವು. ಭಾರತ ಎ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿದರೆ, ಪಾಕಿಸ್ತಾನ ಎ ತಂಡವು ರನ್ ರೇಟ್‌ನಿಂದ ಎರಡನೇ ಸ್ಥಾನದಲ್ಲಿದೆ. ಶ್ವೇತಾ ಸೆಹ್ರಾವತ್ ನೇತೃತ್ವದ ಭಾರತ ಎ ತಂಡ ಇದೀಗ ಮೊದಲ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಎ ತಂಡವನ್ನು ಎದುರಿಸಲಿದೆ. ವೇಗಿ ಫಾತಿಮಾ ಸನಾ ನೇತೃತ್ವದ ಪಾಕಿಸ್ತಾನ ಎ ತಂಡ ಎರಡನೇ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ಎ ವಿರುದ್ಧ ಸೆಣಸಲಿದೆ. ಕುತೂಹಲಕಾರಿಯಾಗಿ, ಪಂದ್ಯಾವಳಿಯ 12 ಲೀಗ್ ಪಂದ್ಯಗಳಲ್ಲಿ ಏಳು ಪಂದ್ಯಗಳನ್ನು ಮಳೆಯಿಂದಾಗಿ ರದ್ದುಗೊಳಿಸಲಾಗಿದೆ.

ಇದನ್ನೂ ಓದಿ: World Cup 2023: ನಾಳೆಯಿಂದ ವಿಶ್ವಕಪ್​ನ ಅರ್ಹತಾ ಪಂದ್ಯಾವಳಿ: ಎರಡು ಸ್ಥಾನಕ್ಕಾಗಿ 10 ತಂಡಗಳ ಪೈಪೋಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.