ವಾರ್ಸೆಸ್ಟರ್: ನಾಯಕಿ ಮಿಥಾಲಿ ರಾಜ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡದ ಆತಿಥೇಯ ಇಂಗ್ಲೆಂಡ್ ವಿರುದ್ಧ 4 ವಿಕೆಟ್ಗಳ ರೋಚಕ ವಿಜಯ ಸಾಧಿಸಿತು. ಈ ಮೂಲಕ ವೈಟ್ವಾಶ್ ಮುಖಭಂಗ ತಪ್ಪಿಸಿಕೊಂಡಿದೆ.
ಶನಿವಾರ ನಡೆದ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ವನಿತೆಯರು 47 ಓವರ್ಗಳಲ್ಲಿ 10 ವಿಕೆಟ್ ಕಳೆದುಕೊಂಡು 219 ರನ್ಗಳಿಸಿದ್ದರು. ವಿನ್ಫೀಲ್ಡ್ ಹಿಲ್ 36, ಹೀದರ್ ನೈಟ್ 46, ನಟಾಲಿಯಾ ಸೀವರ್ 49, ಸೋಫಿಯಾ ಡಂಕ್ಲೇ 28 ರನ್ಗಳಿಸಿದರು.
ಭಾರತದ ಪರ ದೀಪ್ತಿ ಶರ್ಮಾ 43ಕ್ಕೆ 3 ವಿಕೆಟ್ ಪಡೆದರೆ, ಗೋಸ್ವಾಮಿ, ಶಿಖಾ ಪಾಂಡೆ, ಪೂನಮ್ ಯಾದವ್, ಸ್ನೇಹ್ ರಾಣಾ ಮತ್ತು ಕೌರ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
220 ರನ್ಗಳ ಗುರಿ ಪಡೆದ ಭಾರತ ತಂಡದ 46.3 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆರಂಭಿಕರಾದ ಶೆಫಾಲಿ(19) ಮತ್ತು ಮಂದಾನ ಮೊದಲ ವಿಕೆಟ್ಗೆ 46 ರನ್ಗಳ ಜೊತೆಯಾಟ ನೀಡಿದರು. 19 ರನ್ಗಳಿಸಿದ್ದ ಶೆಫಾಲಿ ಕೇಟ್ ಕ್ರಾಸ್ಗೆ ವಿಕೆಟ್ ಒಪ್ಪಿಸಿದರು. ಇವರ ನಂತರ ಬಂದ ಜೆಮೀಮಾ ಕೇವಲ 4 ರನ್ಗಳಿಸಿ ವಿಕೆಟ್ ಒಪ್ಪಿಸಿ ನಿರಾಶೆ ಅನುಭವಿಸಿದರು.
ಉತ್ತಮವಾಗಿ ಆಡುತ್ತಿದ್ದ ಉಪನಾಯಕಿ ಮಂಧಾನ 57 ಎಸೆತಗಳಲ್ಲಿ 49 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ತಂಡದ ಜವಾಬ್ದಾರಿ ವಹಿಸಿಕೊಂಡ ಮಿಥಾಲಿ ವಿಕೆಟ್ ಬೀಳುತ್ತಿದ್ದರೂ ಕೆಚ್ಛೆದೆಯ ಬ್ಯಾಟಿಂಗ್ ಪ್ರದರ್ಶನ ತೋರಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಹರ್ಮನ್ಪ್ರೀತ್ ಕೌರ್ 16, ದೀಪ್ತಿ ಶರ್ಮಾ ಮತ್ತು ಸ್ನೇಹ್ ರಾಣಾ 24 ರನ್ಗಳಿಸಿದರು. ಮಿಥಾಲಿ 86 ಎಸೆತಗಳಲ್ಲಿ 8 ಬೌಂಡರಿಸಹಿತ ಅಜೇಯ 75 ರನ್ಗಳಿಸಿದರು.
ಸೋಫಿ ಎಕ್ಲೆಸ್ಟೋನ್ 2 ವಿಕೆಟ್, ಸೀವರ್, ನೈಟ್, ಗ್ಲೆನ್ ಮತ್ತು ಕೇಟ್ ಕ್ರಾಸ್ ತಲಾ ಒಂದು ವಿಕೆಟ್ ಪಡೆದರು. ಆದರೆ ಇಂಗ್ಲೆಂಡ್ 2-1ರಲ್ಲಿ ಸರಣಿ ವಶಪಡಿಸಿಕೊಂಡಿತು. ಸೋಫಿ ಎಕ್ಲೆಸ್ಟೋನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ, ಮಿಥಾಲಿ ರಾಜ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನು ಓದಿ: ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ನಲ್ಲಿ ವಿಶ್ವದಾಖಲೆ ಬರೆದ ಮಿಥಾಲಿ ರಾಜ್