ಮುಂಬೈ (ಮಹಾರಾಷ್ಟ್ರ): ಭಾರತದ ವನಿತೆಯರು ನೀಡಿದ್ದ 81 ರನ್ಗಳ ಸುಲಭ ಗುರಿಯನ್ನು ಆಂಗ್ಲ ವನಿತೆಯರ ತಂಡ 8.4 ಬಾಲ್ ಮತ್ತು 4 ವಿಕೆಟ್ ಉಳಿಸಿಕೊಂಡು ಸುಲಭವಾಗಿ ಭೇದಿಸಿದೆ. ಈ ಮೂಲಕ 3 ಟಿ20 ಪಂದ್ಯಗಳ ಸರಣಿಯನ್ನು 2-0 ಯಿಂದ ವಶಪಡಿಸಿಕೊಂಡಿದೆ.
81 ರನ್ಗಳ ಸಂಕ್ಷಿಪ್ತ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡವನ್ನು ಭಾರತೀಯ ಬೌಲಿಂಗ್ ಪಡೆ ಕಾಡಿತು. ಆರಂಭಿಕ ಆಟಗಾರರಾದ ಸೋಫಿಯಾ ಡಂಕ್ಲಿ (9) ಮತ್ತು ಡೇನಿಯಲ್ ವ್ಯಾಟ್ (0) ಅವರು ಬೇಗ ವಿಕೆಟ್ ಕಳೆದುಕೊಂಡರು. ಆದರೆ ಆಲಿಸ್ ಕ್ಯಾಪ್ಸೆ ಮತ್ತು ನ್ಯಾಟ್ ಸ್ಕಿವರ್ ಬ್ರಂಟ್ ಭಾರತಕ್ಕೆ ಕಾಡಿದರು.
ಈ ಜೋಡಿ ಮೂರನೇ ವಿಕೆಟ್ಗೆ 42ರನ್ಗಳ ಪಾಲುದಾರಿಕೆ ಹಂಚಿಕೊಂಡಿತು. ಇದರಿಂದ ಭಾರತದ ಗೆಲುವು ದೂರವಾಯಿತು. ಅಲ್ಲದೇ ಈ ಜೋಡಿ ಬಿರುಸಿನ ಆಟ ಆಡಿದ್ದರಿಂದ 8ನೇ ಓವರ್ ವೇಳೆಗೆ 60 ರನ್ ಬಂದಿತ್ತು. ಆದರೆ ಛಲ ಬಿಡದ ಭಾರತೀಯ ವನಿತೆಯರು ಬಿಗು ಬೌಲಿಂಗ್ ದಾಳಿ ನಡೆಸಿದರು.
-
Series win!!! 🔥
— England Cricket (@englandcricket) December 9, 2023 " class="align-text-top noRightClick twitterSection" data="
What a performance 😍
Match centre ➡️ https://t.co/NFp6T6p4j8#EnglandCricket pic.twitter.com/fNI3Rf6jB4
">Series win!!! 🔥
— England Cricket (@englandcricket) December 9, 2023
What a performance 😍
Match centre ➡️ https://t.co/NFp6T6p4j8#EnglandCricket pic.twitter.com/fNI3Rf6jB4Series win!!! 🔥
— England Cricket (@englandcricket) December 9, 2023
What a performance 😍
Match centre ➡️ https://t.co/NFp6T6p4j8#EnglandCricket pic.twitter.com/fNI3Rf6jB4
ನ್ಯಾಟ್ ಸ್ಕಿವರ್-ಬ್ರಂಟ್ (16), ಆಮಿ ಜೋನ್ಸ್ (5), ಫ್ರೇಯಾ ಕೆಂಪ್ (0) ಮತ್ತು ಆಲಿಸ್ ಕ್ಯಾಪ್ಸೆ (25) ವಿಕೆಟ್ ಪಡೆದರು. ಆದರೆ ಇಷ್ಟರಲ್ಲಿ ಆಂಗ್ಲರ ತಂಡ ಗೆಲುವಿನ ದಡಕ್ಕೆ ಸಮೀಪಿಸಿತ್ತು. ಹೀಗಾಗಿ 11.2ನೇ ಬಾಲ್ನಲ್ಲಿ ಬೌಂಡರಿ ಪಡೆದು ತಂಡ ಪಂದ್ಯವನ್ನು ಜಯಿಸಿದೆ.
ಭಾರತದ ಪರ ಪಾದಾರ್ಪಣೆ ಮಾಡಿದ ದೀಪ್ತ ಶರ್ಮಾ 2 ವಿಕೆಟ್ ಪಡೆದರೆ, ಅನಿಭವಿ ವೇಗಿ ರೇಣುಕಾ ಸಿಂಗ್ ಸಹ 2 ವಿಕೆಟ್ ಕಿತ್ತರು. ಆದರೆ ಇಂಗ್ಲೆಂಡ್ 4 ವಿಕೆಟ್ ಉಳಿಸಿಕೊಂಡು ಪಂದ್ಯವನ್ನು ಜಯಿಸಿತು.
ಮೊದಲ ಇನ್ನಿಂಗ್ಸ್ನಲ್ಲಿ: ಸ್ಮೃತಿ ಮಂಧಾನ 10 ಮತ್ತು ಜೆಮಿಮಾ ರಾಡ್ರಿಗಸ್ 30 ರನ್ ಗಳಿಸಿದ್ದು ಬಿಟ್ಟರೆ ಇಂಗ್ಲೆಂಡ್ ವಿರುದ್ಧ ಭಾರತದ ಯಾವುದೇ ಆಟಗಾರ್ತಿಯರು ಎರಡಂಕಿ ತಲುಪಲಿಲ್ಲ. ಇದರಿಂದ ವನಿತೆಯರ ತಂಡ 16.2 ಓವರ್ಗೆ 80 ರನ್ ಗಳಿಸಿ ಸರ್ವ ಪತನ ಕಂಡಿತು. ಸರಣಿ ಗೆಲುವಿಗೆ ಆಂಗ್ಲರು 81 ರನ್ಗಳ ಗುರಿ ಭೇದಿಸಬೇಕಿದೆ.
ಟಾಸ್ ಸೋತು ಮೊದಲು ಮೈದಾನಕ್ಕಿಳಿದ ಭಾರತ ತಂಡಕ್ಕೆ ಆಂಗ್ಲ ಬೌಲರ್ಗಳು ಕಾಡಿದರು. ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಶಫಾಲಿ ವರ್ಮಾ ಗೋಲ್ಡನ್ ಡಕ್ ಆದರು. ರನ್ ಖಾತೆ ತೆರೆಯುವ ಮುನ್ನ ಇಂಗ್ಲೆಂಡ್ ವಿಕೆಟ್ ಪಡೆದುಕೊಂಡಿತು.
ನಂತರ ಸ್ಮೃತಿ ಮಂಧಾನ ಮತ್ತು ಜೆಮಿಮಾ ರಾಡ್ರಿಗಸ್ ತಂಡಕ್ಕೆ ಆಸರೆ ಆಗುತ್ತಾರೆ ಎಂದು ತಿಳಿಯುವಷ್ಟರಲ್ಲಿ ಮತ್ತೊಂದು ವಿಕೆಟ್ ಪತನವಾಗಿತ್ತು. 10 ರನ್ ಗಳಿಸಿದ್ದ ಮಂಧಾನ ವಿಕೆಟ್ನ್ನು ಷಾರ್ಲೆಟ್ ಡೀನ್ ಕಬಳಿಸಿದ್ದರು. ನಂತರ ಐದು ರನ್ನ ಅಂತರದಲ್ಲಿ ಒಂದೊಂದು ವಿಕೆಟ್ಗಳ ಪತನ ಆಯಿತು. 30 ರನ್ ಗಳಿಸಿದ ಜೆಮಿಮಾ ರಾಡ್ರಿಗಸ್ 8ನೇ ವಿಕೆಟ್ ಆಗಿ ಔಟ್ ಆದರು.
ಇದನ್ನೂ ಓದಿ: ಮೆಗ್ ಲ್ಯಾನಿಂಗ್ ನಂತರ ಅಲಿಸ್ಸಾ ಹೀಲಿ ಆಸ್ಟ್ರೇಲಿಯಾ ನಾಯಕಿ: ತಹ್ಲಿಯಾ ಮೆಕ್ಗ್ರಾತ್ ಉಪನಾಯಕಿ