ಮುಂಬೈ(ಮಹಾರಾಷ್ಟ್ರ): ಸರಣಿಯಲ್ಲಿ ಅಜೇಯ 2-0 ಮುನ್ನಡೆ ಸಾಧಿಸಿದ ಆಸ್ಟ್ರೇಲಿಯಾ ಮಹಿಳಾ ತಂಡದ ಫೋಬೆ ಲಿಚ್‌ಫೀಲ್ಡ್ ಅವರ ಅದ್ಭುತ ಶತಕದ ನೆರವಿನಿಂದ 7 ವಿಕೆಟ್‌ಗೆ 338 ರನ್ ಕಲೆ ಹಾಕಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕಿ ಹೀಲಿ ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕರಾದ ಫೋಬೆ ಲಿಚ್‌ಫೀಲ್ಡ್ ಮತ್ತು ಅಲಿಸ್ಸಾ ಹೀಲಿ ತಂಡಕ್ಕೆ ಅದ್ಭುತ ಆರಂಭ ನೀಡಿದರು. ದೀಪ್ತಿ ಶರ್ಮಾ, ಹೀಲಿಯನ್ನು ಔಟ್ ಮಾಡುವ ಮೊದಲು ಇವರಿಬ್ಬರು 189 ರನ್‌ಗಳ ಆರಂಭಿಕ ಜೊತೆಯಾಟ ಆಡಿದರು. ಆದ್ರೆ, ಲಿಚ್‌ಫೀಲ್ಡ್ ಮಾತ್ರ ರನ್ ಗಳಿಕೆಯನ್ನು ಹೆಚ್ಚಿಸುತ್ತಲೇ ಸಾಗಿದರು. ಲಿಚ್‌ಫೀಲ್ಡ್ ಒಟ್ಟು 119 ರನ್‌ಗಳನ್ನು ಕಲೆ ಹಾಕಿದರು.
-
🚨 Toss Update 🚨
— BCCI Women (@BCCIWomen) January 2, 2024 " class="align-text-top noRightClick twitterSection" data="
Australia have elected to bat against #TeamIndia in the third & final #INDvAUS ODI.
Follow the Match ▶️ https://t.co/XFE9a14lAW@IDFCFIRSTBank pic.twitter.com/4PUli2jsL1
">🚨 Toss Update 🚨
— BCCI Women (@BCCIWomen) January 2, 2024
Australia have elected to bat against #TeamIndia in the third & final #INDvAUS ODI.
Follow the Match ▶️ https://t.co/XFE9a14lAW@IDFCFIRSTBank pic.twitter.com/4PUli2jsL1🚨 Toss Update 🚨
— BCCI Women (@BCCIWomen) January 2, 2024
Australia have elected to bat against #TeamIndia in the third & final #INDvAUS ODI.
Follow the Match ▶️ https://t.co/XFE9a14lAW@IDFCFIRSTBank pic.twitter.com/4PUli2jsL1
ಆಸ್ಟ್ರೇಲಿಯಾದ ಆರಂಭಿಕ ಆಟಗಾರರ ವಿಕೆಟ್ ಪತನದ ನಂತರ, ವಿಕೆಟ್‌ಗಳು ಉರುಳುತ್ತಲೇ ಇದ್ದವು. ಇದರ ನಂತರ ಅಲಾನಾ ಕಿಂಗ್ 14 ಎಸೆತಗಳಲ್ಲಿ ಅಜೇಯ 26 ರನ್ ಗಳಿಸುವ ಮೂಲಕ ದೃಢವಾದ ಮುಕ್ತಾಯವನ್ನು ಒದಗಿಸಿದರು. ಆಸ್ಟ್ರೇಲಿಯಾ ತಂಡವು 7 ವಿಕೆಟ್‌ಗೆ 338 ರನ್ ಗಳಿಸಿತು. ಶ್ರೇಯಾಂಕಾ ಪಾಟೀಲ್ ಮೂರು ವಿಕೆಟ್ ಪಡೆದರೆ, ಅಮನ್‌ಜೋತ್ ಕೌರ್ ಎರಡು ವಿಕೆಟ್ ಗಳಿಸಿದರು. ದೀಪ್ತಿ ಶರ್ಮಾ ಮತ್ತು ಪೂಜಾ ವಸ್ತ್ರಕರ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.
16 ವರ್ಷಗಳ ನಂತರ ಗೆಲುವಿಗಾಗಿ ಕಾಯುತ್ತಿರುವ ಭಾರತ ಮಹಿಳಾ ಕ್ರಿಕೆಟ್ ತಂಡ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಸರಣಿಯ ಕೊನೆಯ ಏಕದಿನ ಪಂದ್ಯ ಆಡುತ್ತಿದೆ. ಟಾಸ್ ಗೆದ್ದ ಆಸೀಸ್ ನಾಯಕಿ ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದ್ದಾರೆ.
-
Take a look at #TeamIndia's Playing XI 👌👌
— BCCI Women (@BCCIWomen) January 2, 2024 " class="align-text-top noRightClick twitterSection" data="
Mannat Kashyap makes her ODI Debut 👏👏
Follow the Match ▶️ https://t.co/XFE9a14lAW#INDvAUS | @IDFCFIRSTBank pic.twitter.com/SdiJiXt7Sg
">Take a look at #TeamIndia's Playing XI 👌👌
— BCCI Women (@BCCIWomen) January 2, 2024
Mannat Kashyap makes her ODI Debut 👏👏
Follow the Match ▶️ https://t.co/XFE9a14lAW#INDvAUS | @IDFCFIRSTBank pic.twitter.com/SdiJiXt7SgTake a look at #TeamIndia's Playing XI 👌👌
— BCCI Women (@BCCIWomen) January 2, 2024
Mannat Kashyap makes her ODI Debut 👏👏
Follow the Match ▶️ https://t.co/XFE9a14lAW#INDvAUS | @IDFCFIRSTBank pic.twitter.com/SdiJiXt7Sg
ಉಭಯ ತಂಡಗಳು ಒಂದೊಂದು ಬದಲಾವಣೆ ಮಾಡಿಕೊಂಡಿವೆ. ಎರಡನೇ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಡಿಕ್ಕಿಯಾಗಿ ಗಾಯಗೊಂಡ ಸ್ನೇಹ ರಾಣಾ ಬದಲಿಗೆ ಮನ್ನತ್ ಕಶ್ಯಪ್ ತಂಡ ಸೇರಿಕೊಂಡಿದ್ದಾರೆ. ಕಶ್ಯಪ್ಗಿದು ಪಾದಾರ್ಪಣೆಯ ಪಂದ್ಯ. ಆಸೀಸ್ ತಂಡದಲ್ಲಿ ಡಾರ್ಸಿ ಬ್ರೌನ್ ಬದಲಿಗೆ ಮೇಗನ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
-
That Debut Feeling 🧢😃
— BCCI Women (@BCCIWomen) January 2, 2024 " class="align-text-top noRightClick twitterSection" data="
Congratulations Mannat Kashyap! 👏👏
Follow the Match ▶️ https://t.co/XFE9a14lAW#TeamIndia | #INDvAUS | @IDFCFIRSTBank pic.twitter.com/LqU8Qn4UuX
">That Debut Feeling 🧢😃
— BCCI Women (@BCCIWomen) January 2, 2024
Congratulations Mannat Kashyap! 👏👏
Follow the Match ▶️ https://t.co/XFE9a14lAW#TeamIndia | #INDvAUS | @IDFCFIRSTBank pic.twitter.com/LqU8Qn4UuXThat Debut Feeling 🧢😃
— BCCI Women (@BCCIWomen) January 2, 2024
Congratulations Mannat Kashyap! 👏👏
Follow the Match ▶️ https://t.co/XFE9a14lAW#TeamIndia | #INDvAUS | @IDFCFIRSTBank pic.twitter.com/LqU8Qn4UuX
ತಂಡಗಳು ಇಂತಿವೆ-ಭಾರತ: ಯಾಸ್ತಿಕಾ ಭಾಟಿಯಾ, ಸ್ಮೃತಿ ಮಂಧಾನ, ರಿಚಾ ಘೋಷ್ (ವಿಕೆಟ್ ಕೀಪರ್), ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ದೀಪ್ತಿ ಶರ್ಮಾ, ಮನ್ನತ್ ಕಶ್ಯಪ್, ಅಮನ್‌ಜೋತ್ ಕೌರ್, ಪೂಜಾ ವಸ್ತ್ರಾಕರ್, ಶ್ರೇಯಾಂಕ ಪಾಟೀಲ್, ರೇಣುಕಾ ಠಾಕೂರ್ ಸಿಂಗ್.
ಆಸ್ಟ್ರೇಲಿಯಾ: ಫೋಬೆ ಲಿಚ್‌ಫೀಲ್ಡ್, ಅಲಿಸ್ಸಾ ಹೀಲಿ(ವಿಕೆಟ್ ಕೀಪರ್/ನಾಯಕಿ), ಎಲ್ಲಿಸ್ ಪೆರ್ರಿ, ಬೆತ್ ಮೂನಿ, ತಾಲಿಯಾ ಮೆಕ್‌ಗ್ರಾತ್, ಆಶ್ಲೀ ಗಾರ್ಡ್ನರ್, ಅನ್ನಾಬೆಲ್ ಸದರ್ಲ್ಯಾಂಡ್, ಜಾರ್ಜಿಯಾ ವೇರ್‌ಹ್ಯಾಮ್, ಅಲಾನಾ ಕಿಂಗ್, ಕಿಮ್ ಗಾರ್ತ್, ಮೇಗನ್
ಇದನ್ನೂ ಓದಿ: ಕ್ಲೀನ್ ಸ್ವೀಪ್ನಿಂದ ತಪ್ಪಿಸಿಕೊಳ್ಳುತ್ತಾ ಕೌರ್ ಪಡೆ