ETV Bharat / sports

ಇಂಗ್ಲೆಂಡ್​ ವಿರುದ್ಧ 23 ವರ್ಷಗಳ ಬಳಿಕ ODI ಸರಣಿ ಗೆದ್ದ ಭಾರತೀಯ ಮಹಿಳಾ ಕ್ರಿಕೆಟ್‌ ಟೀಂ - ಟೀಂ ಇಂಡಿಯಾ ಮಹಿಳಾ ಪಡೆ

ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ನಿನ್ನೆ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾ ಮಹಿಳೆಯರು 88 ರನ್​​​​​ಗಳ ಗೆಲುವು ದಾಖಲಿಸಿದರು.

India women's team beat England
India women's team beat England
author img

By

Published : Sep 22, 2022, 6:59 AM IST

ಕ್ಯಾಂಟರ್ಬರಿ(ಇಂಗ್ಲೆಂಡ್​): ಆಂಗ್ಲರ ನಾಡಲ್ಲಿ ಹರ್ಮನ್​ಪ್ರೀತ್​ ಕೌರ್​ ನಾಯಕತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಹೊಸ ದಾಖಲೆ ನಿರ್ಮಿಸಿತು. ಬುಧವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ 88 ರನ್​​​ಗಳ ಭರ್ಜರಿ ಗೆಲುವಿನೊಂದಿಗೆ 23 ವರ್ಷಗಳ ಬಳಿಕ ಇಂಗ್ಲೆಂಡ್​ ವಿರುದ್ಧ ಏಕದಿನ ಸರಣಿ ಗೆದ್ದು ಐತಿಹಾಸಿಕ ಸಾಧನೆ ತೋರಿದರು.

ಆಂಗ್ಲರ ವಿರುದ್ಧ ಗೆದ್ದ ಹರ್ಮನ್​ಪ್ರೀತ್ ಕೌರ್ ಬಳಗ

ಇಂಗ್ಲೆಂಡ್​ನ ದಿ ಸ್ಟಿಟ್​ಫೈರ್​​ ಗ್ರೌಂಡ್​ ಸೇಂಟ್​​ ಲಾರೆನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಟೀಂ ಇಂಡಿಯಾ ನಿಗದಿತ 50 ಓವರ್​​​​​ಗಳಲ್ಲಿ 5 ವಿಕೆಟ್ ​ನಷ್ಟಕ್ಕೆ 333 ರನ್‌ಗಳ ಬೃಹತ್‌ ಗುರಿ ನೀಡಿತು. ಇನ್ನಿಂಗ್ಸ್‌ ಶುರು ಮಾಡಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಆದ್ರೆ, ನಂತರ ಕ್ರೀಸ್‌ನಲ್ಲಿ ಜತೆಯಾದ ನಾಯಕಿ ಹರ್ಮನ್​ಪ್ರೀತ್​ ಕೌರ್​​ ಅಬ್ಬರದ ಆಟಕ್ಕೆ ಮಂದಾದರು. ಮೈದಾನದ ಉದ್ದಗಲ ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಅವರು 143 ರನ್ ಗಳಿಸಿದರೆ, ಹರ್ಲಿನ್ ಡಿಯೋಲ್​​ ​(58) ರನ್​​ ಸೇರಿಸಿ ತಂಡ 300 ರನ್‌ ಗಡಿ ದಾಟುವಂತೆ ಮಾಡಿದರು. ಕೌರ್ ಅಬ್ಬರದ ಆಟದಲ್ಲಿ 18 ಬೌಂಡರಿ, 4 ಸಿಕ್ಸರ್​ ಸೇರಿದ್ದವು. ಇನ್ನು, ಸ್ಮೃತಿ ಮಂದಾನ (40) ರನ್ ಪೇರಿಸಿದರು.

ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ ಹರ್ಮನ್​ಪ್ರೀತ್​​

334 ರನ್​​ಗಳ ಸವಾಲಿನ ಟಾರ್ಗೆಟ್‌ ಬೆನ್ನತ್ತಿದ ಇಂಗ್ಲೆಂಡ್ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ತಂಡ ಕೇವಲ 12 ರನ್​​​​ ಗಳಿಸುವಷ್ಟರಲ್ಲಿ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಕ್ಯಾಪ್ಸೆ (39), ಡೇನಿಲ್ ​​​(65), ಜಾನ್ಸಿ (39) ರನ್​​​ಗಳಿಸಿ ತಂಡವನ್ನು ಗೆಲುವಿನ ದಡದತ್ತ ತೆಗೆದುಕೊಂಡು ಹೋಗುವ ಮುನ್ಸೂಚನೆ ನೀಡಿದರು. ಆದರೆ, ಇವರ ವಿಕೆಟ್ ಕೀಳುವಲ್ಲಿ ಯಶಸ್ವಿಯಾದ ಟೀಂ ಇಂಡಿಯಾ ಮಹಿಳೆಯರು ಮೇಲುಗೈ ಸಾಧಿಸಿದರು. ಕೊನೆಯದಾಗಿ, ತಂಡ 44.2 ಓವರ್​​​​​ಗಳಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 245 ರನ್​​ಗಳಿಸಲು ಮಾತ್ರ ಸಾಧ್ಯವಾಯಿತು. ಹೀಗಾಗಿ, ಆಂಗ್ಲ ಮಹಿಳೆಯರು 88 ರನ್​​​ಗಳ ದೊಡ್ಡ ಅಂತರದ ಸೋಲು ಕಂಡರು.

ಬೌಲರ್ ರೇಣುಕಾ ಸಿಂಗ್​ 4 ವಿಕೆಟ್​​ ಪಡೆದರೆ, ಹೇಮಲತಾ 2, ಶೆಫಾಲಿ ಹಾಗೂ ದೀಪ್ತಿ ಶರ್ಮಾ 1 ವಿಕೆಟ್ ಉರುಳಿಸಿದರು. ಮೊದಲ ಏಕದಿನ ಪಂದ್ಯದಲ್ಲಿಯೂ ಭಾರತೀಯರು ಗೆಲುವು ಸಾಧಿಸಿದ್ದರು. ಇದೀಗ ಎರಡನೇ ಪಂದ್ಯದಲ್ಲೂ ಗೆಲುವಿನ ನಗೆ ಬೀರಿದ್ದು ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಂಡಿದ್ದಾರೆ.

ಮಹಿಳಾ ODIನಲ್ಲಿ ಭಾರತದ 2ನೇ ಅತಿ ದೊಡ್ಡ ಸ್ಕೋರ್​: ಇಂಗ್ಲೆಂಡ್ ತಂಡದ ಬೌಲರ್​​ಗಳನ್ನು ಹಿಗ್ಗಾಮುಗ್ಗ ಬೆಂಡೆತ್ತಿದ ಟೀಂ ಇಂಡಿಯಾ ಬ್ಯಾಟರ್​​ಗಳು ದಾಖಲೆಯ 333 ರನ್​ ಪೇರಿಸಿದರು. ಮಹಿಳಾ ಕ್ರಿಕೆಟ್​ನಲ್ಲಿ ಮೂಡಿ ಬಂದಿರುವ ಎರಡನೇ ಅತಿದೊಡ್ಡ ಏಕದಿನ ಸ್ಕೋರ್ ಕೂಡಾ ಇದಾಗಿದೆ. ಈ ಹಿಂದೆ ಭಾರತದ ಮಹಿಳೆಯರು ಐರ್ಲೆಂಡ್​ ವಿರುದ್ಧ 2 ವಿಕೆಟ್ ​ನಷ್ಟಕ್ಕೆ 358 ರನ್ ​​ಗಳಿಸಿದ್ದರು. ಈ ಪಂದ್ಯದಲ್ಲಿ ದೀಪ್ತಿ ಶರ್ಮಾ 188 ರನ್​​​ಗಳಿಸಿ ದಾಖಲೆ ಬರೆದಿದ್ದರು. ಇದು ಇಲ್ಲಿಯವರೆಗಿನ ಭಾರತೀಯ ಮಹಿಳಾ ಬ್ಯಾಟರ್​​ವೋರ್ವರ ಅತ್ಯಧಿಕ ವೈಯಕ್ತಿಕ ಗರಿಷ್ಠ ಸ್ಕೋರ್​ ಆಗಿದೆ.

1999ರ ಬಳಿಕ ಇಂಗ್ಲೆಂಡ್‌ ವಿರುದ್ಧ ಮೊದಲ ಸರಣಿ ಗೆಲುವು: ಇಂಗ್ಲೆಂಡ್​ ವಿರುದ್ಧದ ಸರಣಿ ಸೋಲಿನ ಮುಖಭಂಗ ಅನುಭವಿಸುತ್ತಿದ್ದ ಭಾರತೀಯ ಮಹಿಳಾ ತಂಡ ಇದೀಗ ಹೊಸ ಇತಿಹಾಸ ರಚಿಸಿತು. 23 ವರ್ಷಗಳ ಬಳಿಕ ಅಂದರೆ 1999ರ ನಂತರ ಆಂಗ್ಲರ ನಾಡಲ್ಲಿ ಸರಣಿ ಗೆದ್ದು ನೋವಿನ ಅಧ್ಯಾಯಗಳನ್ನು ಅಳಿಸಿ ಹಾಕಿ ಸಂಭ್ರಮಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.