ಧರ್ಮಶಾಲಾ: ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಮಾಡುವುದಕ್ಕೆ ನಿರ್ಧರಿಸಿದ್ದಾರೆ.
ಸರಣಿ ಜಯದ ನಿರೀಕ್ಷೆಯಲ್ಲಿರುವ ಭಾರತ ತಂಡ ಮೊದಲ ಪಂದ್ಯದಲ್ಲಿ ಇದ್ದ ತಂಡವನ್ನೇ ಕಣಕ್ಕಿಳಿಸುತ್ತಿದೆ. ಆದರೆ ಶ್ರೀಲಂಕಾ ತಂಡ ಎರಡು ಬದಲಾವಣೆ ಮಾಡಿಕೊಂಡಿದ್ದು, ಜನಿತಗ್ ಲಿಯಾನಗೆ ಮತ್ತು ಜೆಫ್ಫೆರಿ ವಂಡೆರ್ಸೆ ಬದಲಿಗೆ ಬಿನುರ ಫರ್ನಾಂಡೋ ಮತ್ತು ದನುಷ್ಕಾ ಗುಣತಿಲಕ ಆಡಲಿದ್ದಾರೆ.
ಈ ಸ್ಟೇಡಿಯಂನಲ್ಲಿ ಇಲ್ಲಿಯವರೆಗೆ ಕೇವಲ ಒಂದೇ ಟಿ20 ಪಂದ್ಯ ನಡೆದಿದೆ. 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದ ಆ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿದ್ದರು, ಆದರೂ ಆ ಪಂದ್ಯದಲ್ಲಿ ಭಾರತ ಸೋಲುಕಂಡಿತ್ತು. 2019ರಲ್ಲಿ ಮತ್ತೊಂದು ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧವೇ ನಡೆಯಬೇಕಿತ್ತಾದರೂ ಮಳೆಯ ಕಾರಣ ರದ್ಧಾಗಿತ್ತು.
-
Captain @ImRo45 wins the toss and elects to bowl first in the 2nd T20I.
— BCCI (@BCCI) February 26, 2022 " class="align-text-top noRightClick twitterSection" data="
An unchanged Playing XI for #TeamIndia
Live - https://t.co/ImBxdhXjSc #INDvSL @Paytm pic.twitter.com/DdEebeL2rP
">Captain @ImRo45 wins the toss and elects to bowl first in the 2nd T20I.
— BCCI (@BCCI) February 26, 2022
An unchanged Playing XI for #TeamIndia
Live - https://t.co/ImBxdhXjSc #INDvSL @Paytm pic.twitter.com/DdEebeL2rPCaptain @ImRo45 wins the toss and elects to bowl first in the 2nd T20I.
— BCCI (@BCCI) February 26, 2022
An unchanged Playing XI for #TeamIndia
Live - https://t.co/ImBxdhXjSc #INDvSL @Paytm pic.twitter.com/DdEebeL2rP
ಶ್ರೀಲಂಕಾ : ಪಾತುಮ್ ನಿಸ್ಸಾಂಕ, ಕಮಿಲ್ ಮಿಶ್ರಾ, ಚರಿತ್ ಅಸಲಂಕಾ, ದನುಷ್ಕ ಗುಣತಿಲಕ, ದಿನೇಶ್ ಚಂಡಿಮಲ್ (ವಿಕೆಟ್ ಕೀಪರ್), ದಸುನ್ ಶನಕ (ನಾಯಕ), ಚಮಿಕಾ ಕರುಣರತ್ನೆ, ದುಷ್ಮಂತ ಚಮೀರ, ಪ್ರವೀಣ್ ಜಯವಿಕ್ರಮ, ಬಿನುರ ಫೆರ್ನಾಂಡೋ, ಲಹಿರು ಕುಮಾರ
ಭಾರತ : ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಲ್
ಇದನ್ನೂ ಓದಿ:ವಿರಾಟ್ ಕೊಹ್ಲಿ 100ನೇ ಟೆಸ್ಟ್ ಪಂದ್ಯಕ್ಕಿಲ್ಲ ಪ್ರೇಕ್ಷಕರಿಗೆ ಅನುಮತಿ: ಪಂಜಾಬ್ ಕ್ರಿಕೆಟ್ ಘೋಷಣೆ