ಅಡಿಲೇಡ್(ಆಸ್ಟ್ರೇಲಿಯಾ): ವರುಣದೇವ ಮತ್ತು ಬಾಂಗ್ಲಾದೇಶದ ಬ್ಯಾಟರ್ ಲಿಟನ್ ದಾಸ್ರ ಸವಾಲನ್ನು ಮೆಟ್ಟಿನಿಂತ ಭಾರತ ಮಹತ್ವದ ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್ ನಿಯಮ ಪ್ರಕಾರ 5 ರನ್ಗಳಿಂದ ಗೆದ್ದು ಸೆಮಿಫೈನಲ್ ತಲುಪುವ ಹಾದಿಯನ್ನು ಸುಲಭ ಮಾಡಿಕೊಂಡಿತು. ಆಡಿದ 4 ಪಂದ್ಯಗಳಲ್ಲಿ 3 ಗೆದ್ದು 1 ಸೋತು 6 ಅಂಕಗಳೊಂದಿಗೆ ಬಿ ಗುಂಪಿನಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿತು.
ಅಡಿಲೇಡ್ನ ಓವಲ್ ಮೈದಾನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ 6 ವಿಕೆಟ್ಗೆ 184 ರನ್ ಗಳಿಸಿತ್ತು. 2ನೇ ಇನಿಂಗ್ಸ್ ಆರಂಭಿಸಿದ್ದ ಬಾಂಗ್ಲಾದೇಶ 7 ನೇ ಓವರ್ ವೇಳೆ ವರುಣನ ಆಗಮನವಾಯಿತು.
ಅರ್ಧಗಂಟೆಗೂ ಅಧಿಕ ಮಳೆ ಬಿದ್ದ ಕಾರಣ ಆಟವನ್ನು 16 ಓವರ್ಗೆ ಕಡಿತ ಮಾಡಿ ಗೆಲ್ಲಲು ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ 151 ರನ್ ಗುರಿ ನೀಡಲಾಯಿತು. ಮತ್ತೆ ಇನಿಂಗ್ಸ್ ಆರಂಭಿಸಿದ ಬಾಂಗ್ಲಾ ಪಡೆ ಸತತ ವಿಕೆಟ್ ಕಳೆದುಕೊಂಡು ಅಂತಿಮವಾಗಿ 6 ವಿಕೆಟ್ ಕಳೆದುಕೊಂಡು 145 ರನ್ ಮಾತ್ರ ಗಳಿಸಿ 5 ರನ್ಗಳಿಂದ ಪರಾಭವಗೊಂಡಿತು.
-
.@imVkohli bagged the Player of the Match award as #TeamIndia beat Bangladesh in Adelaide. 👌 👌
— BCCI (@BCCI) November 2, 2022 " class="align-text-top noRightClick twitterSection" data="
Scorecard ▶️ https://t.co/Tspn2vo9dQ#T20WorldCup | #INDvBAN pic.twitter.com/R5Qsl1nWmf
">.@imVkohli bagged the Player of the Match award as #TeamIndia beat Bangladesh in Adelaide. 👌 👌
— BCCI (@BCCI) November 2, 2022
Scorecard ▶️ https://t.co/Tspn2vo9dQ#T20WorldCup | #INDvBAN pic.twitter.com/R5Qsl1nWmf.@imVkohli bagged the Player of the Match award as #TeamIndia beat Bangladesh in Adelaide. 👌 👌
— BCCI (@BCCI) November 2, 2022
Scorecard ▶️ https://t.co/Tspn2vo9dQ#T20WorldCup | #INDvBAN pic.twitter.com/R5Qsl1nWmf
ಲಿಟನ್ ದಾಸ್ ಗುಡುಗು: ಭಾರತ ನೀಡಿದ ಬೃಹತ್ ಮೊತ್ತ ಬೆಂಬತ್ತಿದ ಶಕೀಬ್ ಅಲ್ ಹಸನ್ ಪಡೆಯ ಬ್ಯಾಟರ್ ಲಿಟನ್ ದಾಸ್ ಬಿರುಸಿನ ಆರಂಭ ನೀಡಿದರು. 27 ಎಸೆತಗಳಲ್ಲಿ 7 ಬೌಂಡರಿ 3 ಸಿಕ್ಸರ್ಗಳಿಂದ 60 ರನ್ ಗಳಿಸಿದರು. ಮಳೆ ನಿಂತ ಬಳಿಕ ಮತ್ತೆ ಆಟ ಶುರುವಾದಾಗ ಕೆಎಲ್ ರಾಹುಲ್ರ ಚಾಣಕ್ಯ ಫೀಲ್ಡಿಂಗ್ಗೆ ರನೌಟ್ ಆದರು.
ಮಳೆಯಲ್ಲಿ ತೋಯ್ದ ಬಾಂಗ್ಲಾ: ಬಾಂಗ್ಲಾದೇಶ 7 ನೇ ಓವರ್ ಆಡುತ್ತಿದ್ದಾಗ ಮಳೆ ಸುರಿಯಲಾರಂಭಿಸಿತು. ಅರ್ಧಗಂಟೆಗೂ ಹೆಚ್ಚು ಮಳೆ ಸುರಿದಿದ್ದರಿಂದ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಆಟವನ್ನು 16 ಓವರ್ಗೆ ಕಡಿತ ಮಾಡಿ 151 ರನ್ ಗುರಿ ನಿಗದಿ ಮಾಡಲಾಯಿತು.
ಆಟ ಮರು ಆರಂಭವಾದ ಕೆಲ ಹೊತ್ತಿನಲ್ಲೇ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ಲಿಟನ್ ದಾಸ್ ರಾಹುಲ್ಗೆ ರನೌಟ್ ಆದರು. ಬಳಿಕ ನಜ್ಮುಲ್ ಹುಸೈನ್ ಶ್ಯಾಂಟೋ 21 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇದಾದ ನಂತರ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾಗಿ 145 ರನ್ ಗಳಿಸಿತು. ಭಾರತ ಪರ ಉತ್ತಮವಾಗಿ ಬೌಲ್ ಮಾಡಿದ ಅರ್ಷದೀಪ್ ಸಿಂಗ್, ಹಾರ್ದಿಕ್ ಪಾಂಡ್ಯಾ ತಲಾ 2 ವಿಕೆಟ್ ಗಳಿಸಿದರು.
ಭಾರತ ಇನಿಂಗ್ಸ್: ಇದಕ್ಕೂ ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ವಿರಾಟ್ ಕೊಹ್ಲಿ ಮತ್ತೆ ನೆರವಾದರು. ವಿಶ್ವಕಪ್ನ 4 ಮನೇ ಪಂದ್ಯದಲ್ಲಿ 3 ನೇ ಅರ್ಧಶತಕ ಸಿಡಿಸಿದ ಚೇಸ್ ಮಾಸ್ಟರ್ ಪಂದ್ಯಶ್ರೇಷ್ಟ ಪ್ರಶಸ್ತಿಗೂ ಭಾಜನರಾದರು.
ಟೀಕೆಗೆ ಉತ್ತರಿಸಿದ ರಾಹುಲ್ ಬ್ಯಾಟ್: ವಿಶ್ವಕಪ್ನ ಮೊದಲ ಮೂರು ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡುತ್ತಿದ್ದ ಕನ್ನಡಿಗ ಕೆ ಎಲ್ ರಾಹುಲ್ ತೀವ್ರ ಟೀಕೆಗೆ ಗುರಿಯಾಗಿದ್ದರು. ಮುಂದಿನ ಪಂದ್ಯಗಳಿಗೆ ರಾಹುಲ್ರನ್ನು ಕೈಬಿಡುವಂತೆ ಒತ್ತಾಯ ಕೇಳಿಬಂದಿತ್ತು. ಆದರೆ, ಮಹತ್ವದ ಪಂದ್ಯದಲ್ಲಿ ಬ್ಯಾಟ್ಗೆ ಬುದ್ಧಿ ಹೇಳಿದ ರಾಹುಲ್ ಭರ್ಜರಿ ಅರ್ಧಶತಕ ಸಿಡಿಸಿದರು.
32 ಎಸೆತಗಳಲ್ಲಿ 4 ಸಿಕ್ಸರ್, 3 ಬೌಂಡರಿಗಳಿಂದ 50 ರನ್ ಗಳಿಸಿದರು. ಪಂದ್ಯದಲ್ಲಿ ಸಿಡಿದ 5 ಸಿಕ್ಸ್ಗಳಲ್ಲಿ ರಾಹುಲ್ 4 ಸಿಕ್ಸ್ಗಳಿವೆ. ಈ ಮೂಲಕ ತಾವು ನಿಧಾನಗತಿಯ ಬ್ಯಾಟರ್ ಅಲ್ಲ, ಟಿ20 ತಾವು ಫಿಟ್ ಎಂಬುದನ್ನು ಸಾಬೀತು ಮಾಡಿದರು. ನಾಯಕ ರೋಹಿತ್ ಶರ್ಮಾ ವೈಫಲ್ಯ ಈ ಪಂದ್ಯದಲ್ಲೂ ಮುಂದುವರಿಯಿತು. 2 ಗಳಿಸಿದ್ದಾಗ ಹಸನ್ ಮುಹಮದ್ಗೆ ವಿಕೆಟ್ ನೀಡಿದರು.
ವಿರಾಟ್ ದಾಖಲೆಯ ಅರ್ಧಶತಕ: ಇನ್ನು ಭರ್ಜರಿ ಫಾರ್ಮ್ನಲ್ಲಿರುವ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಬಾಂಗ್ಲಾ ಬೌಲರ್ಗಳ ಬೆಂಡೆತ್ತಿದರು. 44 ಎಸೆತಗಳಲ್ಲಿ 8 ಬೌಂಡರಿಗಳ ಸಮೇತ 64 ರನ್ ಸಿಡಿಸಿ ಈ ವಿಶ್ವಕಪ್ನಲ್ಲಿ 3ನೇ ಅರ್ಧಶತಕ ಸಿಡಿಸಿದರು.
ಚೇಸ್ ಮಾಸ್ಟರ್ 28 ರನ್ ಗಳಿಸಿದಾಗ ಚುಟುಕು ಮಾದರಿಯ ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ ಆಗಿ ದಾಖಲೆ ಬರೆದರು. ಶ್ರೀಲಂಕಾದ ಲೆಜೆಂಡರಿ ಬ್ಯಾಟರ್ ಮಹೇಲಾ ಜಯವರ್ಧನೆ 1016 ಗಳಿಸಿದ್ದರು. ಇದನ್ನು ಮೀರಿಸಿದ ವಿರಾಟ್ ಕೊಹ್ಲಿ 24 ಪಂದ್ಯಗಳಲ್ಲಿ 1053 ರನ್ ಗಳಿಸಿದರು.
ಸೂರ್ಯಕುಮಾರ್ ಯಾದವ್ 30 ರನ್ ಬಾರಿಸಿದರು. ಕೊನೆಯಲ್ಲಿ ಸಿಡಿದ ಅಶ್ವಿನ್ ತಲಾ 1 ಸಿಕ್ಸರ್, ಬೌಂಡರಿ ಬಾರಿಸಿದರು. ಬಾಂಗ್ಲಾದೇಶದ ಪರವಾಗಿ ಹಸನ್ ಮುಹಮದ್ 3 ನಾಯಕ ಶಕೀಬ್ ಅಲ್ ಹಸನ್ 2, ಟಸ್ಕಿನ್ ಅಹ್ಮದ್ ವಿಕೆಟ್ ಪಡೆಯದಿದ್ದರೂ ಬಿಗಿ ಬೌಲಿಂಗ್ ಪ್ರದರ್ಶನ ನೀಡಿದರು.
ಓದಿ: ಟಿ20 ವಿಶ್ವಕಪ್ನಲ್ಲಿ ವಿರಾಟ್ ವಿಕ್ರಮ.. ಶ್ರೀಲಂಕಾದ ಮಹೇಲಾ ಜಯವರ್ಧನೆ ದಾಖಲೆ ಪುಡಿ