ETV Bharat / sports

ಶೀಘ್ರದಲ್ಲೇ ಬಾಬರ್​-ರಿಜ್ವಾನ್‌ರಂತಹ ಆಟಗಾರರು ನಮ್ಮಲ್ಲಿಲ್ಲ ಎಂದು ಭಾರತೀಯರು ಹೇಳಲಿದ್ದಾರೆ : ರಶೀದ್ ಲತೀಫ್​ - ವಿರಾಟ್ ಕೊಹ್ಲಿ ರೋಹಿತ್ ಶರ್ಮಾ

ಬಾಬರ್ ಮತ್ತು ರಿಜ್ವಾನ್​ ಟಿ20 ಕ್ರಿಕೆಟ್​ನಲ್ಲಿ ಆರಂಭಿಕರಾಗಿ 6 ಶತಕಗಳ ಜೊತೆಯಾಟ ನೀಡುವ ಮೂಲಕ ರೋಹಿತ್-ಧವನ್​ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ರಿಜ್ವಾನ್ 2021ರಲ್ಲಿ 2036 ಮತ್ತು ಬಾಬರ್​ ಅಜಮ್​ 1779 ರನ್​ಗಳಿಸಿದ್ದಾರೆ. ಇದು ಕ್ಯಾಲೆಂಡರ್​ ವರ್ಷದಲ್ಲಿ ಬ್ಯಾಟರ್​ ಗಳಿಸಿದ ಅತ್ಯಧಿಕ ರನ್​ಗಳಾಗಿವೆ..

ಮೊಹಮ್ಮದ್ ರಿಜ್ವಾನ್ - ಬಾಬರ್​ ಅಜಮ್
author img

By

Published : Dec 19, 2021, 3:20 PM IST

ಲಾಹೋರ್ : ಪಾಕಿಸ್ತಾನ ಕಳೆದ ಎರಡೂ ವರ್ಷಗಳಿಂದ 29 ಟಿ20 ಪಂದ್ಯಗಳಲ್ಲಿ 20ರಲ್ಲಿ ಜಯ ಸಾಧಿಸಿದೆ. ಈ ಯಶಸ್ಸಿನಲ್ಲಿ ನಾಯಕ ಬಾಬರ್​ ಅಜಮ್ ಮತ್ತು ರಿಜ್ವಾನ್​ ಅವರ ಪಾತ್ರ ಮಹತ್ವವಾಗಿದೆ. ಈ ಜೋಡಿ 2021ರಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದೆ.

ಈ ವರ್ಷದಲ್ಲಿ ರನ್​ಗಳ ಪ್ರವಾಹವನ್ನೇ ಹರಿಸಿರುವ ರಿಜ್ವಾನ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 1000 ರನ್​ಗಳಿಸಿದ​ ಮತ್ತು ಟಿ20 ಕ್ರಿಕೆಟ್​ನಲ್ಲಿ 2000 ರನ್​ಗಳಿಸಿದ ಮೊದಲ ಬ್ಯಾಟರ್ ಎಂಬ ವಿಶ್ವದಾಖಲೆಗೆ ಪಾತ್ರವಾಗಿದ್ದಾರೆ.

ಪಾಕಿಸ್ತಾನದ ಮಾಜಿ ನಾಯಕ ರಶೀದ್​ ಲತೀಫ್​ ಈ ಇಬ್ಬರು ಆಟಗಾರರ ಬಗ್ಗೆ ಟಿವಿ ಸಂದರ್ಶನವೊಂದರಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುಮಾರು ಒಂದು ವರ್ಷದ ಹಿಂದೆ ನಾವೆಲ್ಲಾ ಪಾಕಿಸ್ತಾನ ತಂಡದಲ್ಲಿ ರೋಹಿತ್​-ವಿರಾಟ್​ ಕೊಹ್ಲಿ ಅಥವಾ ರಾಹುಲ್​ ಅಂತಾ ಆಟಗಾರರಿಲ್ಲ ಎಂದು ಹೇಳುತ್ತಿದ್ದೆವು.

ಆದರೆ, ಕೆಲವು ದಿನಗಳ ನಂತರ ಭಾರತೀಯರು, ರಿಜ್ವಾನ್ ಮತ್ತು ಬಾಬರ್ ಅವರಂತಹ ಆಟಗಾರರನ್ನು ನಾವು ಹೊಂದಿಲ್ಲ ಎಂದು ಹೇಳುತ್ತಾರೆ" ಎಂದು ಲತೀಫ್​ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ನಾವು ರಿಜ್ವಾನ್​-ಬಾಬರ್​ ಅವರ ಸ್ಕೋರಿಂಗ್ ರೇಟ್​ ಅನ್ನು ಟೀಕಿಸಿದ್ದೆವು. ಆದರೆ, ಈ ಜೋಡಿ ಅದ್ಭುತ ರೇಟ್​ ಜೊತೆಗೆ ರನ್​ಗಳಿಸಿ ಟೀಕೆಗೆ ಉತ್ತರಿಸಿದ್ದಾರೆ ಎಂದು ಲತೀಫ್ ಹೇಳಿದ್ದಾರೆ.

ಬಾಬರ್ ಮತ್ತು ರಿಜ್ವಾನ್​ ಟಿ20 ಕ್ರಿಕೆಟ್​ನಲ್ಲಿ ಆರಂಭಿಕರಾಗಿ 6 ಶತಕಗಳ ಜೊತೆಯಾಟ ನೀಡುವ ಮೂಲಕ ರೋಹಿತ್-ಧವನ್​ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ರಿಜ್ವಾನ್ 2021ರಲ್ಲಿ 2036 ಮತ್ತು ಬಾಬರ್​ ಅಜಮ್​ 1779 ರನ್​ಗಳಿಸಿದ್ದಾರೆ. ಇದು ಕ್ಯಾಲೆಂಡರ್​ ವರ್ಷದಲ್ಲಿ ಬ್ಯಾಟರ್​ ಗಳಿಸಿದ ಅತ್ಯಧಿಕ ರನ್​ಗಳಾಗಿವೆ.

ಇದನ್ನೂ ಓದಿ:ರಿಜ್ವಾನ್​ ವಿಶ್ವದಾಖಲೆ: ಟಿ-20ಯಲ್ಲಿ ಒಂದೇ ವರ್ಷ 2000 ರನ್​ ಸಿಡಿಸಿದ ಏಕೈಕ ಬ್ಯಾಟರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.